ಚೆಟ್ಟಳ್ಳಿ: ಪ್ರಧಾನ ಮುಖ್ಯಅರಣ್ಯ ಸಂರಕ್ಷಣಾಧಿಕಾರಿ ಆದೇಶದ್ವಯ ಕೊಡಗಿನ ಆನೆ ತರಬೇತಿ ಕ್ಯಾಂಪಿನಿಂದ ಹತ್ತು ಸಾಕಾನೆಗಳು ಉತ್ತರ ಖಾಂಡ್ ಗೆ ರವಾನಿಸಲಾಗುತ್ತಿದೆ.
ದೊಡ್ಡಹಾರ್ವೆ ಆನೆ ಶಿಬಿರದಿಂದ ಮದಕರಿ(10ವರ್ಷ), ಗಜರಾಜ(10ವರ್ಷ), ಕೆಂಚಂಬ(20ವರ್ಷ) ಆನೆಯನ್ನು ದುಬಾರೆಗೆ ತರಿಸಲಾಗಿ ದುಬಾರೆಯ ಹೆಣ್ಣು ಆನೆಗಳಾದ ಶಿವಗಂಗೆ(25ವರ್ಷ),ಕಪಿಲ(32ವರ್ಷ),ಕಪಿಲಳ ಮರಿಯಾನೆ(1.8ವರ್ಷ) ಫೆ.6ರ ಪೂರ್ವಾಹ್ನ 6 ಗಂಟೆಗೆ ಆನೆ ಮಾವುತರು ಕಾವಾಡಿಗಳೆಲ್ಲ ಸೇರಿ ದುಬಾರೆ ಹೊಳೆಯಲ್ಲಿ ಮಜ್ಜನ ಮಾಡಿಸಿ ಬೆಳಗಿನ ಉಪಹಾರವಾದ ಭತ್ತ,ಅಕ್ಕಿ,ಜೋಳವನ್ನೆಲ್ಲ ತಿನ್ನಿಸಿ ಸತ್ಕರಿಸಿ ದುಬಾರೆಯ ಆನೆ ಶಿಬಿರದಿಂದ ಪೂವಾಹ್ನ 9ಗಂಟೆಗೆ ಬೀಳ್ಕೊಡಲಾಯಿತು. ಪ್ರತಿ ಸಾಕಾನೆಗಳ ಮಾವುತರು ಹಾಗು ಕಾವಾಡಿಗಳು ಕಾಲ್ನಡಿಗೆಯಲ್ಲಿ ಮತ್ತಿಗೋಡು ಆನೆ ಶಿಬಿರಕ್ಕೆ ಕರೆದೊಯ್ಯಲಾಯಿತು.
ಮತ್ತಿಗೋಡು ಆನೆ ಶಿಬಿರದಲ್ಲಿ ತುಂಗ(15ವರ್ಷ),ಮರಿಯಾನೆ(1.8ವರ್ಷ)ಕರ್ಣ(6ವರ್ಷ),ಬೀಷ್ಮ(9ವರ್ಷ)ಯನ್ನೆಲ್ಲ ಸೇರಿಸಿ ನಾಳೆ ಒಟ್ಟು10 ಸಾಕಾನೆಗಳನ್ನು ಉತ್ತಕಾಂಡ್ ಗೆ ರವಾನಿಸಲು ಕೊಡಗಿನಿಂದ ಅರಣ್ಯ ಇಲಾಖೆ ಬೀಳ್ಕೊಡುವುದು.ಇದರ ಜೊತೆಗೆ ಬನ್ನೆರುಘಟ್ಟದಿಂದ ಮೇನಕ(26 ವರ್ಷ) ಕೂಡ ತೆರಳುವುದು.ಆನೆಗಳ ಜೊತೆ ನಿರಂತರ ತರಬೇತಿ ನೀಡುತ್ತಿರುವ ಮಾವುತರು ತೆರಳಲಿದ್ದು ಆರು ತಿಂಗಳು ಅಲ್ಲಿನ ಮಾವುತರಿಗೆ ತರಬೇತಿ ನೀಡಿ ಹಿಂತಿರುಗುವರು.
ಈಗಾಗಲೆ ಕೊಡಗಿನ 4ಕ್ಕು ಪುಂಡಾನೆಗಳನ್ನು ಸ್ಕ್ರಾಲ್ ಗಳಲಿಟ್ಟು ಪಳಗಿಸಲಾಗುತಿದ್ದು ಪೂರ್ಣ ತರಬೇತಿಯಾದ ನಂತರ ಅವು ಕೂಡ ದುಬಾರೆಯ ಶಿಬಿರದಲ್ಲಿ ಸೇರಿಕೊಳ್ಳಲಿದೆ. ಕೊಡಗಿನ ಆನೆಗಳು ದಷ್ಟಪುಷ್ಟ ಹಾಗು ಉತ್ತಮ ಮೈಕಟ್ಟುಇರುವುದರಿಂದ ಜೊತೆಗೆ ಆನೆ ಶಿಬಿರಗಳಲ್ಲಿ ಆನೆಗಳಿಗೆ ಉತ್ತಮ ತರಬೇತಿ ನೀಡಿ ಪಳಗಿಸುವುದರಿಂದ ಕೊಡಗಿನ ಆನೆಗಳಿಗೆ ಬಾರಿ ಬೇಡಿಕೆ ಇದೆ.
ದುಬಾರೆಯಲ್ಲಿ ಈವರೆಗೆ ಒಟ್ಟು 33 ಆನೆಗಳಲ್ಲಿ 3 ಆನೆಗಳು ತೆರಳಿದರೆ ಉತ್ತರಕಾಂಡ್ ಗೆ ತೆರಳಿದರೆ ಇನ್ನುಳಿದ 30 ಆನೆಗಳು ಬಾಕಿಯಾಗಲಿರುವುದು- ಕೊಚೆರ.ಎ.ನೆಹರು ಕುಶಾಲನಗರ ವಲಯಾಧಿಕಾರಿ. ಶಿಬಿರದಲ್ಲಿ ಉತ್ತಮ ತರಬೇತಿ ಹೊಂದಿದ ಆಯ್ಕೆ ಮಾಡಲಾದ ಆನೆಗಳನ್ನು ಮೇಲಧಿಕಾರಿಗಳ ಆದೇಶದ್ವಯ ಉತ್ತರಾಖಾಂಡ್ ಗೆ ಕಳುಹಿಸಲಾಗಿತ್ತಿದೆ- ಕನ್ನಂಡರಂಜನ್, ಕುಶಾಲನಗರ ಉಪವಲಯ ಅರಣ್ಯಾಧಿಕಾರಿ.