ಮದ್ದೂರು: ಕಬ್ಬು ಬೆಳೆದು ನಷ್ಟ ಅನುಭವಿಸಿದ ರೈತನೊಬ್ಬ ಮಾಡಿದ ಸಾಲ ತೀರಿಸಲಾಗದೆ ರೈತನೊಬ್ಬ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸಮೀಪದ ಕಬ್ಬಾರೆ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ರಾಮಲಿಂಗಯ್ಯ ಪುತ್ರ ಮಧುಕುಮಾರ್ (23) ಮೃತ ರೈತ. ಈತ ತಮಗಿದ್ದ ಏಳು ಎಕರೆ ಪ್ರದೇಶದಲ್ಲಿ ಭತ್ತ, ಕಬ್ಬು, ತರಕಾರಿ ಬೆಳೆ ಬೆಳೆದು ನಷ್ಟ ಹೊಂದಿದ್ದರು. ಸಾಲ ಮಾಡಿ ಕೊರೆಸಿದ್ದ ಬೋರ್ವೆಲ್ನಲ್ಲಿ ನೀರು ಬಂದಿರಲಿಲ್ಲ. ಬೇಸಾಯಕ್ಕಾಗಿ ಕೆ.ಹೊನ್ನಲಗೆರೆ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ 35 ಸಾವಿರ ಕೃಷಿ ಸಾಲ ಹಾಗೂ ಖಾಸಗಿ ವ್ಯಕ್ತಿಗಳಿಂದ 3 ಲಕ್ಷ ಕೈ ಸಾಲ ಮಾಡಿದ್ದರು. ಸಾಲಗಾರರ ಕಾಟ ಹೆಚ್ಚಾದಾಗ ಕಬ್ಬಾರೆ ಹಾಗೂ ಎಲೆದೊಡ್ಡಿ ಮಾರ್ಗದ ಬಸ್ ತಂಗುದಾಣದಲ್ಲಿ ವಿಷ ಸೇವಿಸಿದ್ದಾರೆ.
ಬಳಿಕ ಅಸ್ವಸ್ಥರಾಗಿ ಒದ್ದಾಡಿದ್ದಾರೆ. ಇದನ್ನು ಗಮನಿಸಿದ ಸಾರ್ವಜನಿಕರು ಮಧುಕುಮಾರ್ನನ್ನು ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದರಾದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಈ ಸಂಬಂಧ ಮೃತ ರೈತನ ಕುಟುಂಬದವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುವ ಪಟ್ಟಣ ಪೊಲೀಸ್ ಠಾಣೆ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ