News Kannada
Sunday, February 05 2023

ಕರ್ನಾಟಕ

ನಗರದಲ್ಲಿ ಕಾಡ್ಗಿಚ್ಚು ಜಾಥಾ : ಅರಣ್ಯ ರಕ್ಷಣೆಗೆ ವಿದ್ಯಾರ್ಥಿಗಳ ಕರೆ

Photo Credit :

ನಗರದಲ್ಲಿ ಕಾಡ್ಗಿಚ್ಚು ಜಾಥಾ : ಅರಣ್ಯ ರಕ್ಷಣೆಗೆ ವಿದ್ಯಾರ್ಥಿಗಳ ಕರೆ

ಮಡಿಕೇರಿ: ವೈಲ್ಡ್ ಲೈಫ್ ಫಸ್ಟ್, ಸಂತ ಮೈಕಲರ ಪ್ರೌಢಶಾಲೆ ಹಾಗೂ ಕೊಡಗು ವಿದ್ಯಾಲಯ ಸಂಯುಕ್ತ ಆಶ್ರಯದಲ್ಲಿ ಇಂದು ನಗರದಲ್ಲಿ ಕಾಡ್ಗಿಚ್ಚು ಜಾಥಾ ನಡೆಯಿತು. ಸುಮಾರು 75 ವಿದ್ಯಾರ್ಥಿಗಳು ನಗರದಾದ್ಯಂತ ಸಂಚರಿಸಿ, ಜಾಗೃತಿ ಮೂಡಿಸುವ 5000ಕ್ಕೂ ಅಧಿಕ ಕರಪತ್ರವನ್ನು ಸಾರ್ವಜನಿಕರಿಗೆ ವಿತರಿಸಿದರು.

ಕೊಡಗು ಜಿಲ್ಲೆ ಅಪರ ಜಿಲ್ಲಾಧಿಕಾರಿ ಸತೀಶ್ ಕುಮಾರ್ ಅವರು ಜನರಲ್ ತಿಮ್ಮಯ್ಯ ವೃತ್ತದ ಬಳಿ ಕಾಡ್ಗಿಚ್ಚು ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿದರು. ವೈಲ್ಡ್ ಲೈಫ್ ಫಸ್ಟ್ ಅಧ್ಯಕ್ಷ ಕೆ.ಎಂ.ಚಿಣ್ಣಪ್ಪ ಅವರ ನೇತ್ರತ್ವದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಸಂಸ್ಥೆಯ ಸದಸ್ಯರಾದ ತಮ್ಮು ಪೂವಯ್ಯ, ಬೋಸ್ಮಾದಪ್ಪ, ಸತೀಶ್, ಪ್ರಮೋದ್, ಬಲ್ಲಚಂಡ ರಂಜನ್ ಹಾಗೂ ಶಾಲಾ ಶಿಕ್ಷಕರು ಪಾಲ್ಗೊಂಡಿದ್ದರು.

ಇದೇ ಸಂದರ್ಭ ಮಾತನಾಡಿದ ವನ್ಯಪ್ರೇಮಿ ಚಿಣ್ಣಪ್ಪ ಅವರು, ಕೊಡಗು ಈ ಬಾರಿ ಭೀಕರ ಬರಗಾಲಕ್ಕೆ ತುತ್ತಾಗಲು ನಿರಂತರ ಮರಹನನ, ವನ್ಯಪ್ರಾಣಿಗಳ ಬೇಟೆ, ಕೊಡಗಿನ ಶ್ರೀಮಂತ ಅರಣ್ಯ ಶ್ರೇಣಿ ಬೆಂಕಿಗೆ ನಿರಂತರ ಆಹುತಿಯಾಗುತ್ತಿರುವುದೇ ಕಾರಣ ಎಂದು ಹೇಳಿದರು. ಕೊಡಗು ಒಳಗೊಂಡಂತೆ ಅರಣ್ಯ ಹಾಗೂ ವನ್ಯಪ್ರಾಣಿ ಸಂರಕ್ಷಣೆಗಾಗಿ ಸಾವಿರಾರು ಕಾರ್ಯಕ್ರಮಗಳನ್ನು ನಿರಂತರ ಹಮ್ಮಿಕೊಳ್ಳಲಾಗುತ್ತಿದ್ದು, ಕಾಡಿನ ಬೆಂಕಿಗೆ ಕಾರಣರಾಗುತ್ತಿರುವ ಕಿಡಿಗೇಡಿಗಳ ವಿರುದ್ಧ ಅರಣ್ಯ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತಾಗಬೇಕು. ಈ ಬಾರಿ ಬೇಸಿಗೆ ಆರಂಭದಲ್ಲಿಯೇ ಆನೆಚೌಕೂರು ಮೀಸಲು ಅರಣ್ಯ ವ್ಯಾಪ್ತಿಯಲ್ಲಿ, ಇರ್ಪು ಬೆಟ್ಟ ಶ್ರೇಣಿಗಳಲ್ಲಿ, ನಾಗರಹೊಳೆ ಉದ್ಯಾನವನ ಹಾಗೂ ಬಾಣಾವರ ವ್ಯಾಪ್ತಿಯಲ್ಲಿ ಮಾನವ ಪ್ರೇರಿತ ಕಾಡ್ಗಿಚ್ಚಿನಿಂದಾಗಿ ನೂರಾರು ಎಕರೆ ಅಮೂಲ್ಯ ಅರಣ್ಯ ಸಂಪತ್ತು ನಾಶವಾಗಿದೆ ಎಂದು ಹೇಳಿದರು.

ಕೊಡಗಿನ ಮಳೆಕಾಡುಗಳು, ಅಭಯಾರಣ್ಯ ಹಾಗೂ ಬೆಟ್ಟಶ್ರೇಣಿಗಳಲ್ಲಿ ಕಾಡ್ಗಿಚ್ಚು ಉಂಟಾದಲ್ಲಿ ಭವಿಷ್ಯದಲ್ಲಿ ಕುಡಿಯುವ ನೀರಿಗೆ ತೀವ್ರ ಕ್ಷಾಮ ಎದುರಾಗಬಹುದು. ಕೆರೆ, ಕಟ್ಟೆ, ಬಾವಿಗಳಲ್ಲಿ ನೀರು ಇಂಗಿ ಹೋಗುವ ಹಿನ್ನೆಲೆ ಜಾನುವಾರುಗಳಿಗೆ ನೀರು ಹಾಗೂ ಮೇವಿನ ಸಮಸ್ಯೆ ಉಂಟಾಗುತ್ತದೆ. ಈ ನಿಟ್ಟಿನಲ್ಲಿ ಕಾಡಿನ ಬೆಂಕಿಯನ್ನು ತಡೆಯುವುದು ಜಿಲ್ಲೆಯ ಪ್ರತಿ ಪ್ರಜೆಯ ಜವಾಬ್ದಾರಿಯಾಗಿದೆ ಎಂದು ಚಿಣ್ಣಪ್ಪ ಹೇಳಿದರು.
 

See also  ಮಡಿಕೇರಿಯಲ್ಲಿ ತ್ಯಾಜ್ಯ ರೀ ಸೈಕ್ಲಿಂಗ್ ಘಟಕ ಸ್ಥಾಪನೆಗೆ ಅಗತ್ಯ ಸಹಕಾರ: ಕ್ರಿಕೆಟಿಗ ರಾಬಿನ್ ಉತ್ತಪ್ಪ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು