ಮಂಡ್ಯ: ಕಪ್ಪು ಹಣ ಬಿಳಿ ಮಾಡುವ ಸಲುವಾಗಿ ಹಣ ಪಡೆದು ಮೋಸ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರೌಡಿ ಶೀಟರ್ ಅಶೋಕ್ ಪೈಯನ್ನು ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ಧಾರೆ.
ಈತನ ಮೇಲೆ ಫೆ.6ರ ಮಧ್ಯ ರಾತ್ರಿ ಹತ್ಯೆಗೆ ಯತ್ನ ನಡೆದಿತ್ತು. ಈ ಸಂಬಂಧ ಆತ ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದಾಗ 11 ಮಂದಿ ಸಿಕ್ಕಿಬಿದ್ದಿದ್ದರು. ಅವರನ್ನು ವಿಚಾರಣೆಗೊಳಪಡಿಸಿದಾಗ ಅಶೋಕ್ ಪೈ ಕಪ್ಪು ಹಣ ಬಿಳಿ ಮಾಡುವ ದಂಧೆಯಲ್ಲಿ ತೊಡಗಿಸಿಕೊಂಡಿದ್ದು ಮತ್ತು ಹಣ ನೀಡದೆ ಮೋಸ ಮಾಡಿರುವುದು ಬೆಳಕಿಗೆ ಬಂದಿತ್ತು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಬಂಧಿಸಿದ್ದಾರೆ.
ಅಶೋಕ್ ಪೈ ಯಾರು?:
ಮಂಡ್ಯದ ರೌಡಿ ಜಡೇಜಾ ರವಿ ಎಂಬಾತನ ಕೊಲೆ 2007ರಲ್ಲಿ ಚೀರನಹಳ್ಳಿ ಶಂಕರನ ಕೊಲೆಗೆ ಪ್ರತಿಕಾರವಾಗಿ ನಡೆದಿತ್ತು. ಈ ಹತ್ಯೆ ಪ್ರಕರಣದಲ್ಲಿ ಅಶೋಕ್ಪೈ ಪ್ರಮುಖನಾಗಿದ್ದನು. ಈತನಿಗೆ ಮಂಡ್ಯ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿತ್ತು. ಆದರೆ ಈ ತೀಪರ್ು ವಿರುದ್ಧ ಹೈಕೋಟರ್್ಗೆ ಅಜರ್ಿ ಸಲ್ಲಿಸಿ ಅಲ್ಲಿ ಖುಲಾಸೆಗೊಂಡು ಕೆಲವು ಸಮಯಗಳ ಹಿಂದೆಯಷ್ಟೆ ಜೈಲ್ನಿಂದ ಮರಳಿದ್ದನಲ್ಲದೆ, ಜೀವ ಭಯವಿದ್ದ ಕಾರಣದಿಂದ ಮದ್ದೂರಿನ ಮಾದರಹಳ್ಳಿಯ ಅತ್ತೆ ಮನೆಯಲ್ಲಿ ವಾಸವಿದ್ದನು.
ನೋಟು ಅಮಾನ್ಯಗೊಂಡ ಬಳಿಕ ಆ ವೇಳೆ ಮಂಡ್ಯದ ರಾಘವೇಂದ್ರ ಎಂಬಾತ ತನ್ನ ಮನೆ ಮಾರಿದ ಸಂದರ್ಭ ಸಿಕ್ಕಿದ ಲಕ್ಷಾಂತರ ರೂ. ಹಳೆಯ 500 ಮತ್ತು 1000 ನೋಟುಗಳನ್ನು ಬದಲಾಯಿಸಿ ಕೊಡಲು ಅಶೋಕ್ ಪೈಗೆ ಡೀಲ್ ನೀಡಿದ್ದನು. ಕಮೀಷನ್ ಆಧಾರದಲ್ಲಿ ವ್ಯವಹಾರ ಕುದುರಿಸಿದ ಅಶೋಕ್ ಪೈ ಬಳಿಕ ಹಣವನ್ನು ಹಿಂತಿರುಗಿಸದೆ ಮೋಸ ಮಾಡಿದ್ದನು. ಹಣ ಕೇಳಿ ಸುಸ್ತಾದ ರಾಘವೇಂದ್ರ ಫೆ.6ರಂದು ಮಧ್ಯ ರಾತ್ರಿ ಅಶೋಕ್ ಪೈ ಮಲಗಿದ್ದ ಅತ್ತೆ ಮನೆಯ ಮೇಲೆ 10 ಮಂದಿ ಸಹಚರರೊಂದಿಗೆ ದಾಳಿ ನಡೆಸಿ ಹತ್ಯೆಗೆ ಯತ್ನಿಸಿದ್ದನು. ಈ ವೇಳೆ ಆತ ಮನೆಯ ಅಟ್ಟದ ಮೇಲಿಂದ ಛಾವಣಿಯ ಕಲ್ನಾರ್ ಶೀಟ್ ಒಡೆದು ಸಿನಿಮೀಯ ಮಾದರಿಯಲ್ಲಿ ಪರಾರಿಯಾಗಿ ಪೊಲೀಸರಿಗೆ ಮಾಹಿತಿ ನೀಡಿದ್ದನು.
ಮಧ್ಯರಾತ್ರಿ ನಡೆದ ಘಟನೆಯಿಂದ ಎಚ್ಚರಗೊಂಡ ಸಾರ್ವಜನಿಕರು ಹಾಗೂ ಪೊಲೀಸರು ಸ್ಥಳಕ್ಕೆ ಬರುತ್ತಿದ್ದಂತೆ ರಾಘವೇಂದ್ರ ಮತ್ತು ತಂಡ ಎಸ್ಕೇಪ್ ಆಗಿತ್ತು. ಆರೋಪಿಗಳು ತಪ್ಪಿಸಿಕೊಳ್ಳುವ ಸಂದರ್ಭ ಬಿದ್ದು ಹೋದ ಮೊಬೈಲ್ನಿಂದ ಮಾಹಿತಿ ಪಡೆದು ಪೊಲೀಸರು ಇಂಡುವಾಳಿನಲ್ಲಿ ಅಡಗಿದ್ದ ರಾಘವೇಂದ್ರನ ಗ್ಯಾಂಗ್ನ್ನು ಬಂಧಿಸಿತ್ತು. ಈ ಸಂದರ್ಭ ವಿಚಾರಣೆ ನಡೆಸಿದಾಗ ಅಶೋಕ್ ಪೈ ಕಪ್ಪು ಹಣವನ್ನು ಬಿಳಿ ಮಾಡಿಕೊಡುವ ಸಂಬಂಧ ಹಣ ಪಡೆದು ಮೋಸ ಮಾಡಿರುವುದು ಬೆಳಕಿಗೆ ಬಂದಿತ್ತು