News Kannada
Sunday, January 29 2023

ಕರ್ನಾಟಕ

ಕೊಡಗಿನಲ್ಲಿ ನಿರ್ಗತಿಕರ ಆಶ್ರಯತಾಣ ತನಲ್ ಮಾರ್ಚ್ ನಲ್ಲಿ ಆರಂಭ

Photo Credit :

ಕೊಡಗಿನಲ್ಲಿ ನಿರ್ಗತಿಕರ ಆಶ್ರಯತಾಣ ತನಲ್ ಮಾರ್ಚ್ ನಲ್ಲಿ ಆರಂಭ

ಮಡಿಕೇರಿ: ನಿರ್ಗತಿಕರು, ಅಸ್ವಸ್ಥರು, ಅನಾಥರನ್ನು ದತ್ತು ತೆಗೆದುಕೊಳ್ಳುವ ಮತ್ತು ಆರೋಗ್ಯದ ಬಗ್ಗೆ ಕಾಳಜಿ ತೋರುವ ಕೇರಳದ ತನಲ್ (ನೆರಳು) ಆಶ್ರಯ ತಾಣದ ಶಾಖೆ ಕೊಡಗಿನಲ್ಲೂ ತನ್ನ ಸೇವೆಯನ್ನು ಆರಂಭಿಸಲಿದೆ ಎಂದು ಸಂಸ್ಥೆಯ ಅಧ್ಯಕ್ಷರಾದ ಡಾ.ವಿ.ಇದ್ರೀಸ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು 2008ರಲ್ಲಿ ಆರಂಭಗೊಂಡ ಸಂಸ್ಥೆ ಇಲ್ಲಿಯವರೆಗೆ ಬೀದಿ ಪಾಲಾದ ಸುಮಾರು 700 ಮಂದಿಗೆ ಆಶ್ರಯ ನೀಡಿದೆ ಎಂದರು. ಕಿಡ್ನಿ ವೈಫಲ್ಯಕ್ಕೆ ಒಳಗಾದ ಬಡ ರೋಗಿಗಳಿಗೆ ಉಚಿತವಾಗಿ ಡಯಾಲಿಸಿಸ್ ಸೇವೆ ನೀಡುತ್ತಿರುವ ಈ ಕೇಂದ್ರ ಭಾರತದ ಅತಿ ದೊಡ್ಡ ಉಚಿತ ಸೇವೆಯ ಕೇಂದ್ರವಾಗಿದೆ. ಬುದ್ದಿಮಾಂದ್ಯ ಮಕ್ಕಳ ಚಿಕಿತ್ಸಾ ಕೇಂದ್ರ, ಹೆಚ್ಐವಿ ಹಾಗೂ ಕ್ಯಾನ್ಸರ್ ಪೀಡಿತರಿಗೂ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.

ಕೇರಳದಲ್ಲಿ ಈ ಸಂಸ್ಥೆಗೆ ಸೇರಿದ 11 ವಿವಿಧ ಕೇಂದ್ರಗಳು ಕಾರ್ಯಾಚರಿಸುತ್ತಿದ್ದು, ಕೊಡಗು ಜಿಲ್ಲೆಗೂ ಸೇವೆಯನ್ನು ವಿಸ್ತರಿಸುವ ಉದ್ದೇಶದಿಂದ ಶಾಖೆಯನ್ನು ಮಾರ್ಚ್ ಮೊದಲ ವಾರದಲ್ಲಿ ಆರಂಭಿಸಲಾಗುವುದೆಂದರು. ಸುಮಾರು 70 ಸೆಂಟ್ಸ್ ಜಾಗದಲ್ಲಿ ಕಟ್ಟಡ ನಿರ್ಮಾಣವಾಗಲಿದ್ದು, ತಾತ್ಕಾಲಿಕವಾಗಿ ಹಳೆಯ ಕಟ್ಟಡದಲ್ಲಿ ಶಾಖೆಯನ್ನು ಆರಂಭಿಸಿ ಬಡವರ ಸೇವೆ ಮಾಡಲಾಗುವುದೆಂದು ಡಾ.ವಿ.ಇದ್ರೀಸ್ ತಿಳಿಸಿದರು.

ಪ್ರಮುಖರಾದ ಮಹಮ್ಮದ್ ಮುಸ್ತಫ ಮಾತನಾಡಿ ಮಡಿಕೇರಿಯ ಕೆ.ಬಾಡಗ ಹಾಗೂ ಕಾಟಿಕೇರಿ ಗ್ರಾಮದಲ್ಲಿ ದಾನಿಗಳು ನೀಡಿದ ಜಾಗದಲ್ಲಿ ಕೇಂದ್ರ ಸ್ಥಾಪನೆಯಾಗಲಿದೆ ಎಂದರು. ಹೆಚ್.ಎಸ್.ಪ್ರೇಮ್ ಕುಮಾರ್ ಮಾತನಾಡಿ ಜಾತಿ, ಮತ, ಪಂಗಡವನ್ನು ಮೀರಿ ನಿರ್ಗತಿಕರಿಗೆ ಆಶ್ರಯ ತಾಣವಾಗಿರುವ ತನಲ್ ನ ಶಾಖೆಯ ಸ್ಥಾಪನೆಗೆ ಜಿಲ್ಲೆಯ ಜನ ಕೈಜೋಡಿಸಬೇಕೆಂದರು.

ಸುದ್ದಿಗೋಷ್ಠಿಯಲ್ಲಿ ಟ್ರಸ್ಟಿ ಇ.ವಿ.ರಾಮಚಂದ್ರ ಉಪಸ್ಥಿತರಿದ್ದರು.
   

 

See also  ಮಿತಿ ಮೀರಿದ ಭ್ರಷ್ಟಾಚಾರ: ಕರ್ನಾಟಕ ರಾಷ್ಟ್ರ ಸಮಿತಿ ಆರೋಪ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

Editor's Pick

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು