News Kannada
Monday, February 06 2023

ಕರ್ನಾಟಕ

ಬೇಲೂರಿನಲ್ಲಿ ಶ್ರೀಶನೇಶ್ವರ ಅದ್ಧೂರಿ ರಥೋತ್ಸವ

Photo Credit :

ಬೇಲೂರಿನಲ್ಲಿ ಶ್ರೀಶನೇಶ್ವರ ಅದ್ಧೂರಿ ರಥೋತ್ಸವ

ಬೇಲೂರು: ಇಲ್ಲಿನ ಮಲ್ಲಾಪುರ ದಂಡೆಯ ಮೇಲಿರುವ ಶ್ರೀಶನೇಶ್ವರ ದೇವರ ರಥೋತ್ಸವವು ಅದ್ಧೂರಿಯಾಗಿ ಶನಿವಾರ ನಡೆಯಿತು.

ರಥೋತ್ಸವದ ಪ್ರಯುಕ್ತ ಶುಕ್ರವಾರ ರಾತ್ರಿಯಿಂದಲೇ ವಿಶೇಷ ಪೂಜೆ ಕಾರ್ಯಗಳು ನಡೆದವು. ಸಂಪ್ರದಾಯದಂತೆ ಶನಿವಾರ ಬೆಳಿಗ್ಗೆ ಮಲ್ಲಾಪುರ ಹಾಗೂ ಕೆರಲೂರು ಗ್ರಾಮದಿಂದ ಬ್ರಹತ್ ಗಾತ್ರದ ಹೂವಿನಹಾರವನ್ನು ಮೆರವಣಿಗೆಯಲ್ಲಿ ತಂದು ರಥಕ್ಕೆ ಸಮರ್ಪಿಸಲಾಯಿತು.

ಬಳಿಕ ರಥಕ್ಕೆ ಹೂವಿನ ಅಲಂಕಾರ ಮಾಡಿ ದೇವರ ಉತ್ಸವಮೂರ್ತಿ ಪ್ರತಿಷ್ಠಾಪಿಸಿ ದೇಗುಲಕ್ಕೆ ಪ್ರದಕ್ಷಿಣೆ ಹಾಕಿ ವಿಧಿ ವಿಧಾನಗಳಂತೆ ಪೂಜಾಕಾರ್ಯವನ್ನು ನೆರವೇರಿಸಿ ಸಂಪ್ರದಾಯದಂತೆ ಬಾಳೆ ಕಂಬವನ್ನು ಕಡಿಯಲಾಯಿತು. ಈ ಸಂದರ್ಭ ದೇಗುಲದಲ್ಲಿ ನೆರೆದಿದ್ದ ಸಹಸ್ರಾರು ಭಕ್ತರು ಹರ್ಷೋದ್ಘಾರದೊಂದಿಗೆ ಶನಿದೇವರಿಗೆ ಜಯಘೋಷ ಮೊಳಗಿಸುತ್ತಾ ರಥವನ್ನು ಎಳೆದರು. ರಥ ಮುಂದೆ ಚಲಿಸುತ್ತಿದ್ದಂತೆಯೇ ಸುತ್ತಮುತ್ತ ನೆರೆದ ಭಕ್ತರು ಹಣ್ಣು ಧವನ ಎಸೆದು ಹರಕೆ ಸಮರ್ಪಿಸಿದರು. ರಥ ಪ್ರದಕ್ಷಿಣೆ ನಡೆಸಿ ಬಳಿಕ ಸ್ವಸ್ಥಾನಕ್ಕೆ ಮರಳಿತು.

ಇದೇ ವೇಳೆ ರಥೋತ್ಸವಕ್ಕೆ ಆಗಮಿಸಿದ ಭಕ್ತರಿಗೆ ಅನ್ನ ಸಂತರ್ಪಣೆ ನಡೆಯಿತು. ರಥೋತ್ಸವಕ್ಕೆ ಸಂಬಂಧಿಸಿದಂತೆ ಎಲ್ಲ ವಿಧಿವಿಧಾನಗಳು ಹಾಗೂ ಪೂಜಾ ಕಾರ್ಯಕ್ರಮಗಳು ಅರ್ಚಕ ಮೊಗಣ್ಣಗೌಡ ಅವರ ನೇತೃತ್ವದ ಅರ್ಚಕ ವೃಂದದೊಂದಿಗೆ ಸಾಂಗವಾಗಿ ನೆರವೇರಿತು.

See also  ಬೊಲೆರೊಗೆ ಲಾರಿ ಡಿಕ್ಕಿ: ಆರು ಮಂದಿ ಮೃತ್ಯು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು