ಚಾಮರಾಜನಗರ: ರೈತರ ಜಮೀನ ಮೇಲೆ ಹಾದು ಹೋಗಿದ್ದ ವಿದ್ಯುತ್ ತಂತಿ ಗಾಳಿಗೆ ಸ್ಪರ್ಶಿಸಿ ಉಂಟಾದ ಅಗ್ನಿ ಅವಘಡಕ್ಕೆ ಸುಮಾರು ನಾಲ್ಕು ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಕಬ್ಬು ಸಂಪೂರ್ಣವಾಗಿ ನಾಶವಾಗಿರುವ ಘಟನೆ ಯಳಂದೂರು ತಾಲೂಕಿನ ಚಂಗಚಹಳ್ಳಿಯಲ್ಲಿ ನಡೆದಿದೆ.
ಚಂಗಹಳ್ಳಿ ಗ್ರಾಮದ ನಿವಾಸಿಗಳಾದ ಸಿದ್ದಯ್ಯ. ಬಸವರಾಜು. ಪುಟ್ಟಮಾದ, ಪ್ರಭುಸ್ವಾಮಿ. ದುಂಡಯ್ಯ ಎಂಬುವರಿಗೆ ಸೇರಿದ ಕಬ್ಬಿನ ಗದ್ದೆ ಮೂಲಕವೇ ವಿದ್ಯುತ್ ತಂತಿ ಹಾದು ಹೋಗಿದೆ. ಈ ತಂತಿಗಳು ಗಾಳಿಗೆ ಒಂದಕ್ಕೊಂದು ಸ್ಪರ್ಶಿಸಿ ಬೆಂಕಿ ಕಿಡಿಗಳು ಹಾರುತ್ತಿದ್ದದ್ದು ಸಾಮಾನ್ಯವಾಗಿತ್ತು. ಆದರೆ ಯಾರೂ ತಲೆಕೆಡಿಸಿಕೊಂಡಿರಲಿಲ್ಲ. ಈ ನಡುವೆ ಬಿರುಗಾಳಿಗೆ ಬೀಸಿದ ಪರಿಣಾಮ ವಿದ್ಯುತ್ ತಂತಿಗಳು ಒಂದಕ್ಕೊಂದು ತಗುಲಿ ಬೆಂಕಿ ಕಿಡಿಯಿಂದ ಬೆಂಕಿ ಹತ್ತಿ ಉರಿದಿದ್ದು ಪರಿಣಾಮ ಸುಮಾರು ಆರು ಲಕ್ಷದಷ್ಟು ಬೆಳೆ ನಾಶವಾಗಿದೆ. ಇದರಿಂದ ವರ್ಷದಿಂದ ದುಡಿದ ಬೆಳೆ ಫಸಲಿಗೆ ಬರುವಾಗಲೇ ನಾಶವಾಗಿ ರೈತರ ಹೊಟ್ಟೆಗೆ ತಣ್ಣೀರು ಬಟ್ಟೆ ಹಾಕಿಕೊಳ್ಳುವಂತಾಗಿದೆ.