ಚೆಟ್ಟಳ್ಳಿ: ಚೆಟ್ಟಳ್ಳಿಯ ಚೇರಳ ಶ್ರೀ ಭಗವತಿ ದೇವರ ವಾರ್ಷಿಕ ಉತ್ಸವವು ದೇವಾಲಯದ ಸಂಪ್ರದಾಯದಂತೆ ಮಾರ್ಚ್ 3, 4 ಹಾಗೂ 5ರಂದು ನಡೆಯುವುದು.
ಈ ವರ್ಷ ಫೆಬ್ರವರಿ 28 ಮಂಗಳವಾರದಂದು ಬೆಳಿಗೆ 6.30ಗಂಟೆಗೆ ಊರಿನವರೆಲ್ಲ ಸೇರಿ ದೇವರ ಬೊಳಕ್ ಮರವನ್ನು ದುಡಿಕೊಟ್ಟ್ ಹಾಡಿನೊಂದಿಗೆ ದೇವಾಲಯದ ಮುಂದೆ ನಿಲ್ಲಿಸಿ ದೇವರ ದೀಪನ್ನು ಉರಿಸಿ ಬೊಳಕ್ ಮರ ಸುತ್ತ ಜಿಂಕೆಯ ಕೊಂಬನ್ನಿಟ್ಟು ಪೂಜಿಸಿ ದೇವರ ಹಬ್ಬದ ಕಟ್ಟು ಬೀಳುವರು. ಊರಿನ ಪುರುಷರು ಹಬ್ಬದಕಟ್ಟು ಬಿದ್ದಲ್ಲಿಂದ ದೇವಾಲಯದಲ್ಲಿ ಬೆಳಿಗ್ಗೆ ಕೊಂಬನಿಡಿದುದೇವರ ದೀಪದ ಮುಂದೆ ಮೇದರಕೊಟ್ಟಿಗೆ ಸರಿಯಾಗಿ ವಿಶೇಷ ರೀತಿಯ ಕೊಂಬಾಟ್ ನ್ರತ್ಯವನ್ನುಮಾಡುವರು.
ಮಾರ್ಚ್ 3ರ ಶುಕ್ರವಾರ ಪಟ್ಟಣಿ ಹಬ್ಬವಾಗಿದ್ದು ಕಲ್ಡಚ ಹೋಗುವ ಸಂಪ್ರದಾಯದಂತೆ ಊರಿನ 10ವರ್ಷದ ಒಳಗಿನ ಹೆಣ್ಣು ಮಕ್ಕಳು ದೇವಾಲಯದಿಂದ ಕಳಶ ನೀರನ್ನು ತೆಗೆದುಕೊಂಡು ಹೋಗಿ ಚೌಂಡಿ ಬನದಲ್ಲಿ ಪೂಜೆ ಮಾಡಿ ಪಾಯಿಸವನ್ನಿಟ್ಟು ನೈವೆದ್ಯವನ್ನಿಟ್ಟು, ಅಂದು ಸಂಜೆ 3ಕ್ಕೆ ಊರಿವರೆಲ್ಲ ಸೇರಿ ಸಂಪ್ರದಾಯ ಬದ್ದವಾಗಿ ಒಡ್ಡೋಲಗ ದುಡಿಕೊಟ್ಟ್ ಹಾಡಿನೊಂದಿಗೆ ದೇವತಕ್ಕರಾದ ಚೇರಳತಮ್ಮಂಡ ಆನಂದರವರ ಮನೆಯಿಂದ ದೇವರಭಂಡಾರವನ್ನು ದೇವಾಲಯಕ್ಕೆ ತಂದು ದೇವಾಲಯದಲ್ಲಿ ದೇವರಿಗೆ ಮಾಹಾ ಪೂಜೆ,ಕೊಂಬಾಟ್ ಆದ ನಂತರ ದೇವರ ಭಂಡಾರವನ್ನು ಒಡ್ಡೋಲಗ ದುಡಿಕೊಟ್ಟ್ನೊಂದಿಗೆ ದೇವತಕ್ಕರ ಮನೆಯಲ್ಲಿ ಇಡುವರು.
ಮಾರ್ಚ್4ರ ಶನಿವಾರ ಬೆಳಿಗ್ಗೆ 10ಕ್ಕೆ ಅಯ್ಯಪ್ಪ ದೇವರ ಬನ ಅಂದು ಊರಿನವರು ಅಯ್ಯಪ್ಪ ದೇವರ ಬನಕ್ಕೆ ತೆರಳಿ ದೇವರಿಗೆ ಪೂಜೆಸಲ್ಲಿಸಿ ದೇವರ ಪ್ರಸಾದವನ್ನು ಸ್ವೀಕರಿಸಿ ದೇವಾಲಯಕ್ಕೆ ಬಂದು ತೆಂಗಿನ ಕಾಯಿಗೆ ಗುಂಡು ಹೊಡೆದು ಅಲ್ಲಿಗೆ ದೇವರಕಟ್ಟು ಮುರಿಯುವರು.
ಮಾರ್ಚ್ 5ರ ಭಾನುವಾರ ಚೇರಳ ಶ್ರೀ ಭಗವತಿ ದೇವರದೊಡ್ಡ ಹಬ್ಬವಾಗಿದ್ದು ಅಂದು ಭಗವತಿ ದೇವಿಗೆ ಹೂಮಾಲೆ ವಸ್ತ್ರಾಭರಣದೊಂದಿಗೆ ಶ್ರಂಗರಿಸಿ ಬಿಳಿಕುಪ್ಪಸ ದಟ್ಟಿಯನ್ನುತೊಟ್ಟಂತ ಊರಿನವರೆಲ್ಲ ಒಡ್ಡೋಲಗ ದುಡಿಕೊಟ್ಟ್ ಹಾಡಿನೊಂದಿಗೆ ದೇವತಕ್ಕರ ಮನೆಯಾದ ಚೇರಳ ತಮ್ಮಂಡ ಆನಂದರವರ ಮನೆಯಿಂದ ಭಂಡಾರವನ್ನು ದೇವಾಲಯಕ್ಕೆ ತಂದುದೇವತಕ್ಕರಾದ ಚೇರಳತಮ್ಮಂಡ ಆನಂದ ಹಾಗೂ ಊರು ತಕ್ಕರಾದ ಕೊಂಗೇಟಿರ ಹರೀಶ್ ಅಪ್ಪಣ್ಣನವರ ಸಮ್ಮುಖದಲ್ಲಿ ಮದ್ಯಾಹ್ನ 3ಗಂಟೆಗೆ ದೇವಾಲಯದ ವಾರ್ಷಿಕೊತ್ಸವದ ವಿಧಿವಿಧಾನಗಳನ್ನು ಸಂಪ್ರಧಾಯ ಬದ್ಧವಾಗಿ ಪೂಜೆಪುರಸ್ಕಾವನೆಲ್ಲ ಮಾಡಿ ನೆಂಟರಿಷ್ಟರಿಗೆ, ಮಕ್ಕಳಿಗೆ ತೆಂಗಿನಕಾಯಿ ಎಳೆಯುವ ಸ್ಪರ್ಧೆ ಏರ್ಪಡಿಸಲಾಗುವುದು.
ಬಿಳಿಕುಪ್ಪಸದಟ್ಟಿಯನ್ನು ಧರಿಸಿದ ಊರಿನವರು ದೇವರನಡೆಗೆ ಬಂದು ದೇವಾಲಯದಲ್ಲಿ ಇಟ್ಟಂತ ಕೊಂಬನ್ನು ಹಿಡಿದು ಬೊಳಕ್ ಮರದ ಮುಂದೆ ಸಾಲಾಗಿ ಬಂದುದೇವಾಲಯದ ಬಲಭಾಗದಲ್ಲಿ ಕೆಂಪುವಸ್ತ್ರದಾರಿಯಾಗಿ ನಿಂತಮೇದರಕೊಟ್ಟಿಗೆ 18 ತರಹದ ವಿಶೇಷಕರವಾದ ಕೊಂಬಾಟ್ ನ್ರತ್ಯವನ್ನು ಮಾಡುವರು. ಆಂದುದೇವರ ಹಬ್ಬಕ್ಕೆ ಬಂದಂತ ಊರಿನವರು, ನೆಂಟರಿಷ್ಟರು, ಮದುವೆಯಾಗಿ ಹೋದ ಊರಿನ ಹೆಣ್ಣುಮಕ್ಕಳು, ಭಕ್ತರು ,ಹರಕೆ ಹೊತ್ತವರು ಭಂಡಾರವನ್ನು ಹಾಕಿ ದೇವರ ಆಶೀರ್ವಾದವನ್ನು ಪಡೆದು ಪ್ರಸಾದವನ್ನು ಸ್ವೀಕರಿಸುವರು.
ನಂತರದಲ್ಲಿ ಊರಿನವರು ದೇವಭಂಡಾರವನ್ನು ದುಡಿಕೊಟ್ಟ್ ಹಾಡು ಒಡ್ಡೋಲಗದೊಂದಿಗೆ ದೇವತಕ್ಕರಾದ ಚೇರಳತಮ್ಮಂಡ ಆನಂದರವರ ಮನೆಗೆ ತೆರಳಿ ಭಂಡಾರವನಿಡಲಾಗುವುದೆಂದು ತಕ್ಕ ಮುಖ್ಯಸ್ಥರು ತಿಳಿಸಿದ್ದಾರೆ.