ಚಿಕ್ಕಮಗಳೂರು: ಅರಣ್ಯ ಸಂರಕ್ಷಣೆ ನಮ್ಮೆಲ್ಲರ ಹೊಣೆ. ಅರಣ್ಯವನ್ನ ಯಾರೂ ಬೆಳೆಸೋದು ಬೇಕಾಗಿಲ್ಲ, ತಾನಾಗಿಯೇ ಅರಣ್ಯ ಬೆಳೆಯುತ್ತೆ. ಮಳೆಗಾಲದಲ್ಲಿ ಹಚ್ಚಹಸಿರಿನಿಂದ ಕಂಗೊಳಿಸೋ ವನದೇವತೆ ಬೇಸಿಗೆಯಲ್ಲಿ ಬರಸಿಡಿಲಿನಂತಾಗುತ್ತಾಳೆ. ಕಾಡ್ಗಿಚ್ಚು ಹಾಗೂ ಕೆಲ ಸಾರ್ವಜನಿಕರ ಬೇಜವಬ್ಧಾರಿತನದಿಂದ ಅರಣ್ಯ ಸುಟ್ಟು ಕರಕಲಾಗಿ ಹೋಗುತ್ತೆ. ಸದ್ಯ ಬೇಸಿಗೆ ಆರಂಭವಾಗುವ ಮುನ್ನವೇ ಕಾಫಿನಾಡಿನ ಚಂದ್ರದ್ರೋಣ ಪರ್ವತಶ್ರೇಣಿಯಲ್ಲಿ ಅಲ್ಲಲ್ಲಿ ಬೆಂಕಿ ಕಾಣಿಸಿಕೊಂಡು ನೂರಾರು ಎಕರೆ ಅರಣ್ಯ ಭೂಮಿ ಬೆಂಕಿಗಾಹುತಿಯಾಗಿದೆ.
ಅರಣ್ಯದಲ್ಲಿ ಆವರಿಸಿಕೊಳ್ಳುತ್ತಿರೋ ಬೆಂಕಿ. ಸುಟ್ಟು ಕರಕಲಾಗಿರೋ ನೂರಾರು ಎಕರೆ ಅರಣ್ಯ ಪ್ರದೇಶ. ಬೆಂಕಿ ನಂದಿಸಲು ಹರಸಾಹಸ ಪಡುತ್ತಿರೋ ಅರಣ್ಯ ಸಿಬ್ಬಂದಿ. ಹೌದು ಈ ದೃಶ್ಯ ಕಂಡು ಬಂದಿದ್ದು ಕಾಫಿನಾಡು ಚಿಕ್ಕಮಗಳೂರಿನ ಚಂದ್ರದ್ರೋಣ ಪರ್ವತಶೇಣಿ ತಪ್ಪಲಿನ ನೆತ್ತಿಚೌಕ ಮತ್ತು ಮಹಲ್ ಬಳಿ ಪ್ರಪಂಚದ ಸೂಕ್ಷ್ಮ ಪ್ರದೇಶಗಳಲ್ಲಿ ಒಂದಾಗಿರೋ ಪಶ್ಚಿಮಘಟ್ಟ ಅರಣ್ಯ ಪ್ರದೇಶದ ಸೌಂದರ್ಯಕ್ಕೆ ಕಾರಣವೇ ಈ ಶೋಲಾ ಕಾಡುಗಳು. ನೀರನ್ನ ಹಿಡಿದಿಟ್ಟುಕೊಂಡು ವರ್ಷಪೂರ್ತಿ ನೀರನ್ನ ಹರಿಸೋ ಸಾಮಥ್ರ್ಯವಿರೋ ಶೋಲಾ ಕಾಡುಗಳು ಸದ್ಯ ಬೆಂಕಿಗಾಹುತಿಯಾಗಿ ಪ್ರಕೃತಿ ಸೌಂದರ್ಯ ಬರಡು ಆಗುತ್ತಿದೆ. ಕಾಡ್ಗಿಚ್ಚು ಹಾಗೂ ಪ್ರವಾಸಿಗರು ಸೇರಿದಂತೆ ಅರಣ್ಯ ಪ್ರದೇಶದ ಸುತ್ತಮುತ್ತಲಿನ ಪ್ರದೇಶದಲ್ಲಿ ಸಾಗೋ ಕೆಲ ದಾರಿಹೊಕ್ಕರ ಬೇಜವಬ್ಧಾರಿತನದಿಂದ ಅರಣ್ಯ ಪ್ರದೇಶಕ್ಕೆ ಬೆಂಕಿ ಕಿಡಿ ತಗುಲಿ ಶೋಲಾ ಕಾಡು ಸೇರಿದಂತೆ ನೂರಾರು ಎಕರೆ ಅರಣ್ಯ ಪ್ರದೇಶ ಸಂಪೂರ್ಣ ನಾಶವಾಗುತ್ತಿದೆ.
ಬೆಂಕಿ ನಂದಿಸೋ ಬಗ್ಗೆ ಅರಣ್ಯ ಇಲಾಖೆ ಸೂಕ್ತ ಕ್ರಮಗಳನ್ನ ಕೈಗೊಳ್ಳುತ್ತಿದ್ದರೂ ಯಾವುದೇ ಪ್ರಯೋಜನ ಆಗದೇ ಬೆಂಕಿಯ ರಭಸಕ್ಕೆ ನೂರಾರು ಎಕರೇ ಪ್ರದೇಶ ಬೆಂಕಿಯಿಂದಾ ಹತ್ತಿ ಉರಿಯುತ್ತಿದೆ. ಸದ್ಯ ಅರಣ್ಯ ಪ್ರದೇಶದಲ್ಲಿ ಮರಗಳ ಎಲೆಗಳು ಸಂಪೂರ್ಣ ಉದುರಿದ್ದು, ಅರಣ್ಯ ಪ್ರದೇಶದ ಹುಲ್ಲುಗಾವಲು ಒಣಗಿ ಬರಡಾಗಿ ನಿಂತಿದೆ. ಇಲ್ಲಿ ಒಂದೇ ಒಂದೇ ಬೆಂಕಿ ಕಿಡಿ ನೆಲಕ್ಕೆ ಬಿದ್ರು ಆ ಪ್ರದೇಶ ಸಂಪೂರ್ಣ ಬೆಂಕಿಗೆ ಆಹುತಿಯಾಗುತ್ತೆ. ಬೆಂಕಿಯನ್ನ ತಡೆಗಟ್ಟಲು ಈಗಾಗಲೇ ಫೈರ್ ಲೈನ್ ನಿರ್ಮಿಸಲಾಗಿದೆ, ಗಾಳಿಕೆರೆ ಹಾಗೂ ಮುಳ್ಳಯ್ಯನಗಿರಿಗಳಲ್ಲಿ ಬೆಂಕಿ ಕ್ಯಾಂಪ್ ಗಳನ್ನ ತೆರೆಯಲಾಗಿದ್ದು, ಆ ಅರಣ್ಯ ಪ್ರದೇಶದಲ್ಲಿ 24 ಗಂಟೆ ಸಿಬ್ಬಂದಿಗಳನ್ನ ನೇಮಿಸಿ ಅರಣ್ಯ ಸಂರಕ್ಷಣೆ ಕ್ರಮಕೈಗೊಳ್ಳಗುತ್ತಿದ್ದು ಮಹಲ್ ಮತ್ತು ನೆತ್ತಿಚೌಕ ಪ್ರದೇಶದ ಸ್ಥಳೀಯರು ನೂರಾರು ಸಂಖ್ಯೆಯಲ್ಲಿ ಆಗಮಿಸಿ ಅರಣ್ಯ ಇಲಾಖೆಯ ಸಿಬ್ಬಂಧಿಗಳ ಜೊತೆ ಕೈ ಜೋಡಿಸಿ ಬೆಂಕಿಯನ್ನು ನಂಧಿಸುತ್ತಿದ್ದಾರೆ. ಇಂದೂ ಹೊತ್ತಿದ ಬೆಂಕಿಯಿಂದಾ ನೂರಾರು ಎಕರೆ ಪ್ರದೇಶ ಬೆಂಕಿಗೆ ಆಹುತಿಯಾಗಿದ್ದು ಇಲ್ಲಿರುವ ಸಾವಿರಾರೂ ಸರಿಸೃಪಗಳು ಮತ್ತು ಪಕ್ಷಿಗಳು ಸಾವನ್ನಪ್ಪಿದೆ.ಅಲ್ಲದೇ ಬೆಂಕಿಯ ಜ್ವಾಲೆಯನ್ನು ಕಂಡು ಅಕ್ಕ ಪಕ್ಕದಲ್ಲಿರುವ ಕಾಡು ಪ್ರಾಣಿಗಳು ದಿಕ್ಕಾಪಾಲಾಗಿ ಹೊಡುವಂತಹ ಪರಿಸ್ಥಿತಿ ನಿರ್ಮಾಣ ಆಗಿದೆ.
ಒಟ್ಟಾರೆಯಾಗಿ ಚಂದ್ರದ್ರೋಣ ಪರ್ವತ ಶ್ರೇಣಿಯಲ್ಲಿ ಹಸಿರ ಸಿರಿಯನ್ನ ಸವಿಯಲು ಆಗಮಿಸೋ ಪ್ರವಾಸಿಗರಿಗೆ ಬೇಸಿಗೆ ಕಾಲ ಬಂತೆಂದ್ರೆ ಹಚ್ಚಹಸಿರಿನಿಂದ ಕಂಗೋಳಿಸೋ ಪರಿಸರವನ್ನ ಸಂಭ್ರಮಿಸಲು ಸಾಧ್ಯವಾಗುವುದಿಲ್ಲ. ಬೇಸಿಗೆಯಲ್ಲಿ ಅಲ್ಲಲ್ಲಿ ಬೆಂಕಿ ಕಾಣಿಸಿಕೊಳ್ಳೋದ್ರಿಂದ ಅರಣ್ಯ ಪ್ರದೇಶ ಸಂಪೂರ್ಣ ಬರುಡಾಗಿರುತ್ತೆ. ಅರಣ್ಯ ಇಲಾಖೆ ಫೈರ್ ಲೈನ್ ಹಾಗೂ ಫೈರ್ ಕ್ಯಾಂಪ್ ಗಳಿಂದ ಯಾವ ಮಟ್ಟಿಗೆ ಮುಂದಿನ ದಿನಗಳಲ್ಲಿ ಅರಣ್ಯ ಪ್ರದೇಶವನ್ನ ಕಾಪಾಡುತ್ತೆ ಎಂಬುದನ್ನ ಕಾದುನೋಡಬೇಕಾಗಿದೆ.