ಚಿಕ್ಕಮಗಳೂರು: ನಗರದ ಎಂ.ಜಿ.ರಸ್ತೆಯಿಂದ ಹಾದು ಅಂಬೇಡ್ಕರ್ ರಸ್ತೆಗೆ ತೆರಳುವ ನಡುವೆ ಚೊಕ್ಕಣ್ಣ ಬೀದಿಯಲ್ಲಿ ಸುಮಾರು ವರ್ಷಗಳಿಂದ ಕಲ್ಯಾಣ್ ಕೆಫೆ ಎಂಬ ಹೆಸರಿನ ಹೋಟೆಲ್ ನಿಂದ ಅಕ್ಕ ಪಕ್ಕದ ನೂರಾರು ಸಂಸಾರಿಗಳ ವಾಸದ ಮನೆ ಓಡಾಡುವ ಜನಗಳಿಗೆ ಹಾಗೂ ವಾಹನಗಳಿಗೆ ದಿನಂಪ್ರತಿ ಬೆಳಗ್ಗೆ 6 ರಿಂದ ರಾತ್ರಿ 10ರವರೆಗೆ ತುಂಬಾ ತೊಂದರೆಯಾಗುತ್ತಿದೆ.
ಈ ರಸ್ತೆ ತುಂಬ ಕಿರಿದಾಗಿದ್ದು, ದಿನನಿತ್ಯ ನೂರಾರು ವಾಹನಗಳು ಓಡಾಡುತ್ತವೆ. ಈ ರಸ್ತೆಯಲ್ಲಿ ಈಗಾಗಲೆ ತೋಟದಮ್ಮ ದೇವಸ್ಥಾನ ಮತ್ತು ಸಾಯಿ ಮಂದಿರ ಹಾಗೂ ಸಾಯಿ ಮಂದಿರದ ಶಾಲೆಗಳಿವೆ. ಈ ಹೋಟೆಲಿಗೆ ಬರುವ ಗ್ರಾಹಕರು ರಸ್ತೆಯ ಮದ್ಯದಲ್ಲಿ ವಾಹನವನ್ನು ನಿಲ್ಲಿಸಿ ಓಡಾಡುವ ಬೇರೆ ವಾಹನ ಮತ್ತು ಜನಗಳಿಗೆ ತೊಂದರೆ ಕೊಡುತ್ತಿದ್ದಾರೆ. ರಸ್ತೆಯ ಅಕ್ಕಪಕ್ಕದಲ್ಲಿ ಧೂಮಪಾನ ಮಾಡಿಕೊಂಡು ರಸ್ತೆಯಲ್ಲಿ ಓಡಾಡುವ ಶಾಲಾ ಮಕ್ಕಳು ಪೊಷಕರು ಅಕ್ಕಪಕ್ಕದಲ್ಲಿ ವಾಸಿಸುವ ಜನಸಾಮಾನ್ಯರಿಗೆ ತುಂಬಾ ತೊಂದರೆಯಾಗುತ್ತಿದೆ.
ಬೀಡಿ ಸಿಗರೇಟ್ ಮತ್ತು ಉಳಿದಿರುವ ತಿಂಡಿ ದೇವಸ್ಥಾನ ಪಕ್ಕದಲ್ಲಿ ಅಕ್ಕ ಪಕ್ಕದ ಮನೆಯ ಮುಂದೆ ರಸ್ತೆಗೆ ಬಿಸಾಡುವುದರಿಂದ ಸೊಳ್ಳೆ ಮತ್ತು ನೊಣಗಳಿಂದ ಪರಿಸರ ನೈರ್ಮಲ್ಯವಾಗುತ್ತಿದೆ. ನೆಮ್ಮದಿಯಿಂದ ಬದುಕಲು ಸಾಧ್ಯವಾಗುತ್ತಿಲ್ಲ. ದೇವಾಲಯಕ್ಕೆ ಬರುವ ಭಕ್ತಾಧಿಗಳಿಗೆ ಮತ್ತು ಮಹಿಳೆಯರಿಗೆ, ಹುಡಿಗಿಯರಿಗೆ ಚುಡಯಿಸುತ್ತಾರೆ. ಶಾಲಾ ಮಹಿಳಾ ಪೊಷಕರಿಗೆ ಆ ರಸ್ತೆಯಲ್ಲಿ ಓಡಾಡಲು ತುಂಬ ಮುಜುಗರವಾಗುತ್ತಿದೆ ಎಂದು ಆರೋಪಿಸಿದ್ದಾರೆ.