ಚಿಕ್ಕಮಗಳೂರು: ಬೈಕ್ ನಲ್ಲಿ ಹುಡುಗರ ಸಖತ್ ಸ್ಟಂಟ್ಸ್. ಒಂದೊಂದು ಸಾಹಸವು ಸೂಪರ್. ನೋಡುಗರ ಕಣ್ಣುನಿಗೆ ಹಬ್ಬವೂ ಹಬ್ಬ. ಹೌದು ಕಾಫಿನಾಡು ಚಿಕ್ಕಮಗಳೂರಿನಲ್ಲಿ ಅಬ್ಲೇಜ್ ಮೋಟಾರ್ಸ್ ಕ್ಲಬ್ ನಗರದ ಎಐಟಿ ಕಾಲೇಜು ಆವರಣದಲ್ಲಿ ಹಮ್ಮಿಕೊಂಡಿದ್ದ ಆಲ್ ಇಂಡಿಯಾ ಸ್ಟಂಟರ್ ಮತ್ತು ಬೈಕರ್ ಮೀಟ್ನಲ್ಲಿ ರಾಜ್ಯ ಮತ್ತು ಹೊರ ರಾಜ್ಯದ ಬೈಕ್ ಸವಾರರು ಬೈಕ್ ಸ್ಟಂಟ್ಸ್ ನಡೆಸಿದರು.
ಸವಾರರು ನಡೆಸಿದ ಬೈಕ್ ಸ್ಟಂಟ್ಸ್ ನೋಡುಗರಿಗೆ ಕೆಲ ಕಾಲ ಫುಲ್ ಮನರಂಜನೆಯನ್ನು ನೀಡಿತು. ಚಿಕ್ಕಮಗಳೂರಿನ ಎಐಟಿ ಕಾಲೇಜಿನ ಆವರಣದಲ್ಲಿ ಇಂದು ಬೈಕ್ಗಳದ್ದೇ ಸದ್ದು. ಇಲ್ಲಿನ ಅಬ್ಲೇಜ್ ಮೋಟಾರ್ಸ್ ಕ್ಲಬ್ ನಗರದ ಎಐಟಿ ಕಾಲೇಜು ಆವರಣದಲ್ಲಿ ಹಮ್ಮಿಕೊಂಡಿದ್ದ ಆಲ್ ಇಂಡಿಯಾ ಸ್ಟಂಟರ್ ಮತ್ತು ಬೈಕರ್ ಮೀಟ್ನಲ್ಲಿ ಬೈಕ್ ಸವಾರರು ಪ್ರದರ್ಶಿಸಿದ ಸ್ಟಂಟ್ಗಳು ನೆರೆದಿದ್ದ ನೋಡುಗರನ್ನು ರೋಮಾಂಚನಗೊಳಿಸಿತು. ಚಿಕ್ಕಮಗಳೂರು ಮತ್ತು ಬೆಂಗಳೂರು ಸೇರಿದಂತೆ ಮುಂಬೈ, ತಮಿಳುನಾಡು, ಕೇರಳದಿಂದ ಬೈಕ್ ಸವಾರರು ಆಗಮಿಸಿದ್ದರು. 150ಕ್ಕೂ ಹೆಚ್ಚು ಬೈಕ್ ನಲ್ಲಿ ನಡೆಸಿದ ಬೈಕ್ ಸ್ಟಂಟ್ಸ್ ರೋಮಾಂಚನಕಾರಿಯಾಗಿತ್ತು. ತುಸು ಅಪಾಯಕಾರಿ ಎನ್ನಸಿದ್ರೂ ಮಲೆನಾಡಿನ ಹುಡುಗರು ಬೈಕ್ ನಲ್ಲಿ ನಡೆಸಿದ ಸ್ಟಂಟ್ಸ್ ನ ಸಾಹಸವು ಸೂಪರ್ ಆಗಿತ್ತು.
ಎಫ್.ಜಿ. ಸ್ವುಜುಕೀಯ ಬೈಕ್ ಸೇರಿದಂತೆ ವಿವಿಧ ರೀತಿಯ ಬೈಕ್ ಗಳಲ್ಲಿ ಹುಡುಗರು 30ಕ್ಕೂ ವಿವಿಧ ಬಗೆಯ ಸ್ಟಂಟ್ಸ್ ನ ಪ್ರದರ್ಶನ ಮಾಡಿದ್ರು. ಕಾಫಿನಾಡು ಚಿಕ್ಕಮಗಳೂರಿನಲ್ಲಿ ವಿವಿಧ ರೀತಿ ಸಾಹಸ ಕ್ರೀಡೆಗಳು ನಡೆಯುತ್ತಲೇ ಇರುತ್ತದೆ. ಆದ್ರೆ ಇಂದು ನಡೆದ ಬೈಕ್ ಸಾಹಸ ಕ್ರೀಡೆ ಅಪಾಯಕಾರಿಯಾಗಿದ್ರು ಮುಂಜ್ರಾಗತೆಯ ಕ್ರಮವನ್ನು ತೆಗೆದುಕೊಂಡು ಹುಡುಗರು ಬೈಕ್ ಸ್ಟಂಟ್ಸ್ ಪ್ರದರ್ಶನ ಮಾಡಿದ್ರು.ಬೈಕ್ ಸವಾರಿ ಮಾಡುತ್ತಲೆ ಒಂದೇ ಚಕ್ರದಲ್ಲಿ ವಾಹನವನ್ನು ಮೇಲಕ್ಕೆತ್ತಿ ನಿಲ್ಲಿಸುವುದು. ಎಲ್ಲಾ ಬೈಕ್ಗಳು ಒಗ್ಗೂಡಿ ನಿಂತಲ್ಲಿಯೇ ಶಬ್ಧ ಮಾಡುತ್ತ ಹೊಗೆ ಉಗುಳುವುದು ಒಂದು ಕಾಲನ್ನು ಬೈಕ್ನಲ್ಲಿಟ್ಟು ಮತ್ತೊಂದನ್ನು ಕಾಲನ್ನು ಸೀಟಿನ ಹಿಂಬದಿಯ ರಾಡಿನ ಮೇಲಿಟ್ಟು ಸುತ್ತುವ ಮೂಲಕ ಪ್ರದರ್ಶನ ಮಾಡಿದ್ರು.
ಬಗೆ ಬಗೆಯ ಕಸರತ್ತುಗಳನ್ನು ಬೈಕ್ ಸವಾರರು ಮಾಡುತ್ತಿದ್ದಂತೆ ಬಹುತೇಕ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಸೀಟಿ ಊದುತ್ತ, ಚಪ್ಪಾಳೆ ಒಡೆಯುತ್ತ ಓಯ್ ಎಂದು ಕೂಗುತ್ತ ಸವಾರರನ್ನು ಹುರಿದುಂಬಿಸುತ್ತಿದ್ರು. ಇನ್ನು ಪುರುಷರಗಿಂತ ನಾವು ಏನು ಕಮ್ಮಿ ಇಲ್ಲ ಎನ್ನುವಂತೆ ಹುಡುಗಿಯರು ಕೂಡ ಬೈಕ್ ಸ್ಟಂಟ್ಸ್ ನಡೆಸಿ ಸಾರ್ವಜನಿಕರನ್ನು ರೋಮಾಂಚನಗೊಳಿಸಿದರು.
ಒಟ್ಟಾರೆಯಾಗಿ ಮಲೆನಾಡು ಭಾಗವಾದ ಚಿಕ್ಕಮಗಳೂರಿನ ಜನರಿಗೆ ಬೈಕ್ ಸಾಹಸ ಫುಲ್ ಮನರಂಜನೆಯನ್ನು ನೀಡಿತ್ತು. ಬೈಕ್ ಸ್ಟಂಟ್ ಕ್ರೈಂ ಅಲ್ಲ. ಇದು ಒಂದು ಕ್ರೀಡೆ ಎನ್ನುವುದರ ಬಗ್ಗೆ ಅರಿವು ಮೂಡಿಸುವುದರ ಜೊತೆಗೆ ಬೈಕ್ ಸ್ಟಂಟ್ ನಡೆಸಲು ನಿಗದಿತ ಸ್ಥಳವನ್ನು ಆಯ್ಕೆ ಮಾಡಬೇಕು ಎನ್ನುವುದರ ಬಗ್ಗೆ ಜಾಗೃತಿ ಮೂಡಿಸುವುದು ಅಬ್ಲೇಜ್ ಮೋಟಾರ್ಸ್ ಕ್ಲಬ್ ನ ಉದ್ದೇಶವಾಗಿತ್ತು.