ಚಿಕ್ಕಮಗಳೂರು: ಜನರಿಗೆ ಗನ್ ತೋರಿಸಿದ ಚಿಕ್ಕಮಗಳೂರು ಗ್ರಾಮಾಂತರ ಠಾಣೆ ಪಿಎಸ್ಐ ಗವಿರಾಜ್ ಗೆ ಜನ ಕಪಾಳಕ್ಕೆ ಬಾರಿಸಿದ ಘಟನೆ ಚಿಕ್ಕಮಗಳೂರಿನ ಮೂಗ್ತಿಹಳ್ಳಿ ಗ್ರಾಮದಲ್ಲಿ ನಡೆದಿದೆ.
ಮೂಗ್ತಿಹಳ್ಳಿ ಗ್ರಾಮದ ಬಳಿ ಗ್ರಾಮಾಂತರ ಪಿಎಸ್ಐ ಗವಿರಾಜ್ ತೆರಳುತ್ತಿದ್ದ ಕಾರಿಗೂ ಮತ್ತೊಂದು ಕಾರಿಗೂ ಡಿಕ್ಕಿ ಸಂಭವಿಸಿದೆ. ಈ ಸಂದರ್ಭ ಪಿಎಸ್ಐ ಗವಿರಾಜ್ ಹಾಗೂ ಸ್ಥಳೀಯರ ನಡುವೆ ಗಲಾಟೆ ಸಂಭವಿಸಿದೆ. ಗಲಾಟೆ ವೇಳೆ ಪಿಎಸ್ಐ ಗವಿರಾಜ್ ಆತ್ಮರಕ್ಷಣೆಗಾಗಿ ತಮ್ಮ ಗನ್ ಹೊರಕ್ಕೆ ತೆಗೆದಿದ್ದಾರೆ. ಆಗ ಅಲ್ಲಿದ್ದ ಓರ್ವ ವ್ಯಕ್ತಿ ಗವಿರಾಜ್ ಕಪಾಳಕ್ಕೆ ಹೊಡೆದಿದ್ದಾನೆ. ಘಟನೆ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಬಿಗುವಿನ ವಾತಾವರಣ ಉಂಟಾಯಿತು. ಈ ವೇಳೆ ಗ್ರಾಮಸ್ಥರು ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು. ಸ್ಥಳಕ್ಕೆ ಎಸ್ಪಿ ಅಣ್ಣಾಮಲೈ ಸೇರೆದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ್ದಾರೆ. ಈ ವೇಳೆ ಎಸ್ಪಿ ಜೊತೆಯೂ ಸ್ಥಳೀಯರು ವಾಗ್ವಾದ ನಡೆಸಿದ್ದಾರೆ.