ಮಡಿಕೇರಿ: ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ 6ನೇ ಕಾರ್ಮೆಲ್ ಕಪ್ ಟೆಕ್ವಾಂಡೊ ಚಾಂಪಿಯನ್ ಶಿಪ್ ನಲ್ಲಿ ನಗರದ ಮರ್ಕರ ಟೆಕ್ವಾಂಡೊ ಕ್ಲಬ್ ಗೆ ಉತ್ತಮ ತಂಡ ಪ್ರಶಸ್ತಿ ಲಭಿಸಿದ್ದು, 20 ವಿದ್ಯಾರ್ಥಿಗಳು ಪದಕ ಗೆದ್ದಿದ್ದಾರೆ.
ಕ್ಲಬ್ ನ ವಿದ್ಯಾರ್ಥಿಗಳು ಉತ್ತಮ ಸಾಧನೆ ತೋರುವ ಮೂಲಕ 12 ಚಿನ್ನ, 17 ಬೆಳ್ಳಿ ಹಾಗೂ 21 ಕಂಚಿನ ಪದಕಗಳನ್ನು ಗಳಿಸಿದ್ದಾರೆ. ಅರ್ಸಲಾನ್, ಚೇತನಾ ಶ್ರೀ, ಮಾನ್ವಿಕ್ ಮೌರ್ಯ, ಪ್ರಜ್ಞಾ ಎನ್.ಕೆ, ಮೃದುಲ್ ಎಂ.ಆರ್, ಜೀಷನ್, ಧೃವ ದೇವಯ್ಯ, ಯಜ್ಞ ಬಿ.ಆರ್, ನಿರುತ್ ಎನ್.ಎನ್, ಮೋಕ್ಷಿತ್ ಜಿ.ಹೆಚ್, ಹೊನ್ನತ್ತಿ ಕಾವೇರಮ್ಮ, ಸೋನಾಲ್ ಸೀತಮ್ಮ, ಮೋನಿಷ್ ಯು.ಡಿ, ರೋಷನ್ ಜಿ.ಕೆ, ಶ್ರೇಯಸ್ ಸೋಮಣ್ಣ, ನಿಕೇಶ್, ಶ್ರೇಯಸ್ ವೆಂಕಟಾದ್ರಿ, ನಮನ್ ಬೆಳ್ಳಿಯಪ್ಪ್ಪ, ಭೂಷಿತ ಬೆಳ್ಯಪ್ಪ ಹಾಗೂ ಮಿಸಾಜಲ್ ಪದಕಗಳನ್ನು ಗೆದ್ದ ವಿದ್ಯಾರ್ಥಿಗಳಾಗಿದ್ದಾರೆ.
ಕ್ಲಬ್ ನ ತರಬೇತುದಾರ ಕುಶಾಲ್ ಕುಮಾರ್ ಅವರ ನೇತೃತ್ವದಲ್ಲಿ ವಿದ್ಯಾರ್ಥಿಗಳು ಸ್ಪರ್ಧೆಯನ್ನು ಎದುರಿಸಿದ್ದರು.