News Kannada
Saturday, January 28 2023

ಕರ್ನಾಟಕ

ಮಡಿಕೇರಿಗೆ ಸುಸಜ್ಜಿತ ಖಾಸಗಿ ಬಸ್ ನಿಲ್ದಾಣ ಭಾಗ್ಯ!

Photo Credit :

ಮಡಿಕೇರಿಗೆ ಸುಸಜ್ಜಿತ ಖಾಸಗಿ ಬಸ್ ನಿಲ್ದಾಣ ಭಾಗ್ಯ!

ಮಡಿಕೇರಿ: ಮಡಿಕೇರಿ ನಗರಕ್ಕೊಂದು ಕಪ್ಪು ಚುಕ್ಕೆಯಾಗಿ ಕಿಷ್ಕಿಂದೆಯಂತಿದ್ದ ಖಾಸಗಿ ಬಸ್ ನಿಲ್ದಾಣದ ಬದಲಿಗೆ ಬೇರೊಂದು ಸುಸಜ್ಜಿತ ಬಸ್ ನಿಲ್ದಾಣ ನಿರ್ಮಾಣ ಕಾಮಗಾರಿ ಆರಂಭಗೊಂಡಿದ್ದು ಜನ ನೆಮ್ಮದಿಯುಸಿರು ಬಿಡುವಂತಾಗಿದೆ.

ಈಗಿರುವ ಬಸ್ ನಿಲ್ದಾಣದ ಬದಲಿಗೆ ಬೇರೊಂದು ಬಸ್ ನಿಲ್ದಾಣ ನಿರ್ಮಿಸಿ ಎಂಬ ಒತ್ತಾಯಗಳು ಮತ್ತು ಅದಕ್ಕಾಗಿ ಪ್ರಯತ್ನಗಳು ಕಳೆದ ಹದಿನಾರು ವರ್ಷಗಳಿಂದ ನಿರಂತರವಾಗಿ ನಡೆಯುತ್ತಾ ಬಂದಿತ್ತು. ಇದೀಗ ಕಾಲ ಕೂಡಿ ಬಂದಿದ್ದು, ಬಸ್ ನಿಲ್ದಾಣ ನಿರ್ಮಾಣದ ಕಾಮಗಾರಿ ಆರಂಭಗೊಂಡಿರುವುದು ಎಲ್ಲರಿಗೂ ಸಂತಸ ತಂದಿದೆ. ಈಗಿರುವ ಖಾಸಗಿ ಬಸ್ ನಿಲ್ದಾಣ ಹಿಂದಿನ ಕಾಲದಿಂದಲೂ ಇದೆ. ಮೂರು ದಶಕಗಳ ಹಿಂದೆ ಕೆಎಸ್ಆರ್ ಟಿಸಿ ಮತ್ತು ಖಾಸಗಿ ಬಸ್ ನಿಲ್ದಾಣ ಎರಡು ಒಂದೇ ಆಗಿತ್ತು. ಇಳಿಜಾರು ಮತ್ತು ಚಿಕ್ಕದಾದ ಬಸ್ ನಿಲ್ದಾಣವಾಗಿದ್ದು, ಆ ಕಾಲದಲ್ಲಿ ಬಸ್ ಮತ್ತು ಪ್ರಯಾಣಿಕರ ಸಂಖ್ಯೆ ಕಡಿಮೆ ಇದ್ದುದರಿಂದ ಯಾವುದೇ ತೊಂದರೆಯಿರಲಿಲ್ಲ. ಬಳಿಕ ಕೆಎಸ್ಆರ್ ಟಿಸಿ ಬಸ್ ನಿಲ್ದಾಣ ನಿರ್ಮಾಣದ ಬಳಿಕ ಇಲ್ಲಿ ಖಾಸಗಿ ಬಸ್ ಗಳು ಮಾತ್ರ ನಿಲ್ಲುತ್ತಾ ಬಂದಿವೆ. ಬಸ್ ಗಳ ಸಂಖ್ಯೆ ಜಾಸ್ತಿ ಇರುವ ಕಾರಣ ಇಲ್ಲಿ ಸದಾ ನೂಕು ನುಗ್ಗಲು, ಒತ್ತಡ ಇದ್ದೇ ಇರುತ್ತದೆ. ಒಂದು ರೀತಿಯಲ್ಲಿ ಕಿಷ್ಕಿಂಧೆಯಂತಿರುವ ಬಸ್ ನಿಲ್ದಾಣವನ್ನು ಸ್ಥಳಾಂತರಗೊಳಿಸಿ ನೂತನ ನಿಲ್ದಾಣ ನಿರ್ಮಿಸಬೇಕೆಂಬ ಕೂಗು 2001ರಲ್ಲಿ ಕೇಳಿ ಬಂದಿದ್ದು. ಈಗಿರುವ ಬಸ್ ನಿಲ್ದಾಣ ಸುರಕ್ಷಿತವಲ್ಲ ಎಂಬುದು ಎಲ್ಲರ ದೂರಾಗಿತ್ತು.

2001ರಿಂದಲೇ ಆಗಿನ ಪುರಸಭಾ ಅಧ್ಯಕ್ಷರಾಗಿದ್ದ ಕಾವೇರಮ್ಮ ಸೋಮಣ್ಣ ಅವರ ಕಾಲದಲ್ಲಿ ಪ್ರಸ್ತಾಪವನ್ನಿಡಲಾಗಿತ್ತು. ತದ ನಂತರ  ನಗರಸಭೆಯಾಗಿ ಮಾರ್ಪಾಡಾದ ಮೇಲೂ ಕೂಡ ಅಧ್ಯಕ್ಷರಾಗಿದ್ದ ಕಾವೇರಮ್ಮ ಸೋಮಣ್ಣ, ಪಿ.ಡಿ. ಪೊನ್ನಪ್ಪ, ಹೆಚ್.ಎಂ. ನಂದಕುಮಾರ್, ಜುಲೇಕಾಬಿ ಶ್ರೀಮತಿ ಬಂಗೇರ ಅವರ ಕಾಲದಲ್ಲೂ ಪ್ರಸ್ತಾವನೆ ಚಾಲ್ತಿಯಲ್ಲಿತ್ತು. ಆದರೆ ಎಲ್ಲಿ ನಿರ್ಮಾಣ ಮಾಡುವುದು ಎಂಬ ಗೊಂದಲ ಮುಂದುವರೆದಿತ್ತು.

ಪಿ.ಡಿ. ಪೊನ್ನಪ್ಪ ಅವರು ಅಧ್ಯಕ್ಷರಾಗಿದ್ದ ಸಮಯದಲ್ಲಿ ಶಾಸಕ ಕೆ.ಜಿ. ಬೋಪಯ್ಯ ಹಾಗೂ ಅಪ್ಪಚ್ಚುರಂಜನ್ ಅವರುಗಳ ಪ್ರಯತ್ನದ ಫಲವಾಗಿ ವೆಬ್ಸ್ ಬಳಿಯ ಕೃಷಿ ವಿವಿಗೆ ಸೇರಿದ 3 ಎಕರೆಯನ್ನು ಮಂಜೂರು ಮಾಡಿಸುವಲ್ಲಿ ಯಶಸ್ಸು ಕಂಡಿದ್ದರು. ಆ ನಂತರ ನಿರ್ಮಾಣಕ್ಕೆ ರೂ. 5 ಕೋಟಿ ಅನುದಾನ ಮಂಜೂರಾಗಿತ್ತು. ಆದರೆ ತಡೆಯಾಜ್ಞೆ, ಅಡ್ಡಿ-ಆತಂಕ, ಅನುದಾನದ ಕೊರತೆಯಿಂದ ನೆನೆಗುದಿಗೆ ಬಿದ್ದಿತ್ತಾದರೂ ಇದೀಗ ಚಾಲನೆ ದೊರೆತಿದ್ದು, ಸುಮಾರು ಒಂದೂವರೆ ಎಕರೆ ವಿಸ್ತೀರ್ಣದಲ್ಲಿ ಬಸ್ ನಿಲ್ದಾಣ ನಿರ್ಮಾಣಗೊಳ್ಳಲಿದೆ. ಈಗಾಗಲೇ ಇ-ಟೆಂಡರ್ ಮೂಲಕ ಗುತ್ತಿಗೆ ನೀಡಲಾಗಿದ್ದು, ಜಿಲ್ಲಾಧಿಕಾರಿಗಳು ಅನುಮತಿ ನೀಡಿರುವ ಹಿನ್ನೆಲೆಯಲ್ಲಿ ಕೆಲಸ ಪ್ರಾರಂಭವಾಗಿದೆ.

ಬಸ್ ನಿಲ್ದಾಣ ಹೈಟೆಕ್ ಮಾದರಿಯಲ್ಲಿದ್ದು, ಏಕಕಾಲದಲ್ಲಿ ಸುಮಾರು 18 ಬಸ್ ಗಳ ನಿಲುಗಡೆಗೆ ಅವಕಾಶ ದೊರೆಯಲಿದೆ. ಮಧ್ಯಭಾಗದಲ್ಲಿ ಕಟ್ಟಡ ಬರಲಿದ್ದು ಎರಡು ಬದಿಯಲ್ಲಿ ಬಸ್ ನಿಲುಗಡೆಗೆ ವ್ಯವಸ್ಥೆ ಮಾಡಿಕೊಡಲಾಗುತ್ತದೆ. ನಡುಭಾಗದ ಕಟ್ಟಡದಲ್ಲಿ ಹೋಟೆಲ್, ಮಳಿಗೆಗಳಿರುತ್ತವೆಯಂತೆ. ಅನತಿ ದೂರದಲ್ಲಿ ಶೌಚಾಲಯ ನಿರ್ಮಾಣಗೊಳ್ಳಲಿದೆಯಂತೆ. ಬೆಂಗಳೂರಿನ ಬಸಂತ್ ಕನ್ಸಲ್ಟೆಂನ್ಸಿ ಸಂಸ್ಥೆಯವರು ನಕಾಶೆ ತಯಾರಿಸಿಕೊಟ್ಟಿದ್ದು, ಮೈಸೂರಿನ ನಾಗರಾಜು ಗುತ್ತಿಗೆ ಪಡೆದೊಕೊಂಡಿದ್ದು ಕೆಲಸ ಆರಂಭಗೊಂಡಿದೆ. ಎಲ್ಲವೂ ಅಂದುಕೊಂಡಂತೆ ಆದರೆ ಇನ್ನೊಂದು ವರ್ಷದಲ್ಲಿ ನೂತನ ಖಾಸಗಿ ಬಸ್ ನಿಲ್ದಾಣ ಸೇವೆಗೆ ಲಭ್ಯವಾಗಲಿದೆ.

See also  ಹಿರೀಕಾಟಿ ಕಲ್ಲು ಗಣಿಗಾರಿಕೆಯಲ್ಲಿ ಕಾರ್ಮಿಕ ಸಾವು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

Editor's Pick

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು