News Kannada
Tuesday, February 07 2023

ಕರ್ನಾಟಕ

ಕನ್ನಡ ನಾಡಿನ ಶ್ರೀ ಗಂಧದ ವಿದೇಶದಲ್ಲಿ ಪಸರಿಸಿದ ವಿಶುಕುಮಾರ್!

Photo Credit :

ಕನ್ನಡ ನಾಡಿನ ಶ್ರೀ ಗಂಧದ ವಿದೇಶದಲ್ಲಿ ಪಸರಿಸಿದ ವಿಶುಕುಮಾರ್!

ಚಿಕ್ಕಮಗಳೂರು: ತರೀಕೆರೆ ತಾಲೂಕಿನ ಶ್ರೀಗಂಧದ ಮನುಷ್ಯ ಎಂದೇ ಖ್ಯಾತಿ ಆಗಿರುವ ಈ ವ್ಯಕ್ತಿ ವಿದೇಶಗಳಲ್ಲಿ ಕನ್ನಡ ನಾಡಿನ ಶ್ರೀ ಗಂಧದ ಪರಿಮಳವನ್ನು ವಿದೇಶದಲ್ಲಿ ಪಸರಿಸುವಂತೆ ಮಾಡಿದ್ದಾರೆ. ಆಫ್ರಿಕಾದ ಮಾಲವಿ ದೇಶದಲ್ಲಿ ಶ್ರೀಗಂಧದ ಗಿಡವನ್ನು ನೆಟ್ಟಿ ಆ ದೇಶದಲ್ಲೂ ಶ್ರೀಗಂಧ ಬೆಳೆಯಲು ಮುನ್ನುಡಿ ಬರೆದಿದ್ದಾರೆ.

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಶ್ರೀ ಗಂಧದ ಮನುಷ್ಯ ಎಂದೇ ಖ್ಯಾತಿಯನ್ನು ಪಡೆದಿರುವ ವಿಶುಕುಮಾರ್ ಅವರು ಹಲವಾರು ವರ್ಷಗಳಿಂದಾ ಶ್ರೀಗಂಧದ ಮರಗಳ ಪೋಷಣೆ ಪಾಲನೆ ಮಾಡಿಕೊಂಡು ಬಂದಿದ್ದಾರೆ. ಶ್ರೀ ಗಂಧದಿಂದಾ ಲಕ್ಷಾಂತರ ಆದಾಯವನ್ನು ಪಡೆದಿದ್ದು, ಈಗ ಕರ್ನಾಟಕದ ಶ್ರೀಗಂಧದಿಂದಲೇ ನಾನಾ ದೇಶದಲ್ಲಿ ಹೆಸರು ಪರಿಚಿತರಾಗುವಷ್ಟರ ಮಟ್ಟಿಗೆ ಬೆಳೆದಿದ್ದಾರೆ. ಆಫ್ರೀಕಾ ದೇಶದ ಮಾಲವಿಯಲ್ಲಿ ಪೆಸಿಫಿಕ್ ಹೆಸರಿನ ಕೃಷಿ ಅಭಿವೃದ್ದಿಗೆ ಸಂಬಂಧಿಸಿದ ಖಾಸಗೀ ಕಂಪನಿ ವಿಶುಕುಮಾರ್ ಅವರನ್ನು ಸಂಪರ್ಕಿಸಿ ಅವರ ದೇಶಕ್ಕೆ ಆಹ್ವಾನಿಸಿ ಶ್ರೀಗಂಧ ಬೆಳೆಗೆ ಸಂಭದಿಸಿದಂತೆ ಮಾಹಿತಿಯನ್ನು ಪಡೆದಿದ್ದಾರೆ.

ಈ ಬೆಳವಣಿಗೆಯ ಹಿಂದಿನ ವ್ಯಕ್ತಿ ಮಾಲವಿಯ ರೋಂಭೋದ ರೈತ ಇಸ್ಮಾಯಿಲ್,ಅವರು ಗೂಗಲ್ ನಲ್ಲಿ ಇವರ ಸಾಧನೆಯನ್ನು ಕಂಡೂ ಅವರ ದೇಶದಲ್ಲಿಯೂ ಶ್ರೀಗಂಧ ಬೆಳೆಯುವ ಉತ್ಸಾಕತೆಯನ್ನು ತೋರಿಸಿ ವಿಶುಕುಮಾರ್ ಅವರನ್ನು ಮಾಲವಿ ದೇಶಕ್ಕೆ ಕರೆಸಿಕೊಂಡಿದ್ದಾರೆ. ಶ್ರೀಗಂಧದ ಗಂಧ ಗಾಳಿಯೂ ತಿಳಿಯದ ಇಸ್ಮಾಯಿಲ್ ಅವರಿಗೆ ವಿಶುಕುಮಾರ್ ಅವರ ಸಂಪೂರ್ಣವಾದ ಮಾಹಿತಿಯನ್ನು ನೀಡಿ ಶ್ರೀಗಂಧವನ್ನು ಹೇಗೆ ಬೆಳೆಯುವುದು ಅದರ ಮಹತ್ವ ಏನು ಎಂಬುದರ ಬಗ್ಗೆ ತಿಳಿ ಹೇಳಿ ಗಿಡವನ್ನು ಮಾಲವಿ ದೇಶದಲ್ಲಿ ನೆಟ್ಟಿ ಬಂದಿದ್ದಾರೆ. ಇಸ್ಮಾಯಿಲ್ ಅವರ ಭೂಮಿ ಅರಣ್ಯ ಪ್ರದೇಶದಿಂದ ಕೂಡಿದ ಫಲವತ್ತತೆಯ 5 ಸಾವಿರ ಎಕರೆಯ ಭೂಮಿಯಲ್ಲಿ ಶ್ರೀಗಂಧ ಬೆಳೆಯಲು ಮುಂದಾಗಿದ್ದು ಹೀಗಾಗಲೇ ಮಾಲವಿ ದೇಶದ ಕೃಷಿ ಇಲಾಖೆಯ ಅಧಿಕಾರಿಗಳು ಶ್ರೀಗಂಧದ ಬೀಜಗಳನ್ನು ಪಡೆದು ಪರೀಕ್ಷೆಯನ್ನು ಮಾಡಿದ್ದಾರೆ.

ಪರಿಸರಕ್ಕೆ ಹೊಂದಿಕೊಳ್ಳುವ ಗುಣ ಹಾಗೂ ಇತರೆ ಬೆಳೆಗಳಿಗೆ ಹಾನಿಯಾಗದ ಪ್ರಾಯೋಗಿಕ ಪರೀಕ್ಷೆಯಲ್ಲಿ ಉತ್ತೀರ್ಣವಾಗಿದ್ದು ರಾಜ್ಯದ ಶ್ರೀಗಂಧ ದೂರದ ಮಾಲವಿ ದೇಶದಲ್ಲಿ ತನ್ನ ಕಂಪನ್ನು ಪಸರಿಸಲಿದೆ. ಈಗಾಗಲೇ ಮಾಲವಿ ದೇಶದ ಮಣ್ಣನ್ನು ತಂದಿರುವ ವಿಶುಕುಮಾರ್ ಬೆಂಗಳೂರಿನ ಇಂಡಿಯನ್ ವುಡ್ ಸೈನ್ಸ್ ಟೆಕ್ನಾಲಜಿಗೆ ಪರೀಕ್ಷೆಗೆ ಕಳುಹಿಸಿ ಕೊಟ್ಟಿದ್ದಾರೆ. ಇವರ ಈ ಸಾಧನೆಯನ್ನು ಕಂಡು ತರೀಕೆರೆ ತಾಲೂಕಿನ ಜನರು ಸಂತೋಷವನ್ನು ವ್ಯಕ್ತಪಡಿಸುತ್ತಿದ್ದಾರೆ.

ಒಟ್ಟಾರೆಯಾಗಿ ಹಲವಾರು ವರ್ಷಗಳಿಂದಾ ಶ್ರೀಗಂಧದ ರಕ್ಷಣೆಗೆಗಾಗಿ ಕಷ್ಟ ಪಟ್ಟಿದ್ದಕ್ಕೆ ಈಗ ಅದರಿಂದ ನೆಮ್ಮದಿ ಸಿಗುವಂತಾಗಿದ್ದು ಈಗಾಗಲೇ ಥೈಲ್ಯಾಂಡ್ ನಿಂದಲೂ ವಿಶುಕುಮಾರ್ ಅವರಿಗೆ ಕರೆ ಬಂದಿದ್ದು ಇನ್ನೇನು ಕೆಲ ದಿನಗಳಲ್ಲೇ ಥೈಲ್ಯಾಂಡ್ ದೇಶಕ್ಕೆ ಕನ್ನಡದ ಶ್ರೀಗಂಧದ ಕಂಪನ್ನು ಅಲ್ಲಿ ಬಿತ್ತಿ ಬರಲಿದ್ದಾರೆ.

See also  ಕಣ್ಮನ ಸೆಳೆದ ಜಾನಪದ ನೃತ್ಯ ಕಾರ್ಯಕ್ರಮ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು