ಮಡಿಕೇರಿ: ಮಾಜಿ ಸೈನಿಕರಿಗೆ ನಿವೇಶನವನ್ನು ಒದಗಿಸುವ ನಿಟ್ಟಿನಲ್ಲಿ ಹೋರಾಟಗಳನ್ನು ಹಮ್ಮಿಕೊಂಡು ಗಮನ ಸೆಳೆದಿದ್ದ ಕೊತ್ತೋಳಿ ಮನೆ ಅಪ್ಪಯ್ಯ ಗೌಡ(47) ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ನಗರದ ಚಾಮುಂಡೇಶ್ವರಿ ನಗರದಲ್ಲಿರುವ ತಮ್ಮ ನಿವಾಸದಲ್ಲಿ ಇಂದು ಸಂಜೆ ಯಾರೂ ಇಲ್ಲದ ಸಂದರ್ಭ ಎದೆಗೆ ಕೋವಿಯಿಂದ ಗುಂಡು ಹಾರಿಸಿಕೊಂಡು ಮೃತಪಟ್ಟಿದ್ದಾರೆ. ಮೃತರು ಪತ್ನಿ ಹಾಗೂ ಇಬ್ಬರು ಗಂಡು ಮಕ್ಕಳನ್ನು ಅಗಲಿದ್ದಾರೆ. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ನಗರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಕೊತ್ತೋಳಿ ಮನೆ ಅಪ್ಪಯ್ಯ ಗೌಡ ಕೆಲವು ವರ್ಷಗಳ ಹಿಂದೆ ಜಿಲ್ಲೆಯ ಮಾಜಿ ಯೋಧರನ್ನು ಒಗ್ಗೂಡಿಸಿ ಹೋರಾಟಗಳನ್ನು ನಡೆಸುವ ಮೂಲಕ ಸರಕಾರದಿಂದ ನಿವೇಶನ ಒದಗಿಸಿಕೊಡುವ ಭರವಸೆ ನೀಡಿದ್ದರು. ಆದರೆ ಇವರ ಪ್ರಯತ್ನಗಳು ವಿಫಲವಾದ ನಂತರ ಹೋರಾಟದಿಂದೆ ಹಿಂದೆ ಸರಿದಿದ್ದರು.