ಚಿಕ್ಕಮಗಳೂರು: ಪಂಚರಾಜ್ಯಗಳ ಚುನಾವಣೆ ಫಲಿತಾಂಶ ರಾಜ್ಯದಲ್ಲಿ ಮುಂಬರೋ ವಿಧಾನಸಭೆ ಚುನಾವಣೆಯ ದಿಕ್ಸೂಚಿಯಲ್ಲ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ಚಿಕ್ಕಮಗಳೂರಿನ ಸಖರಾಯಪಟ್ಟಣದಲ್ಲಿ ಮಾತನಾಡಿದ ಅವ್ರು, ರೈತರ ಸಾಲ ಮನ್ನಾ ಮಾಡಿ ಎಂದು ಕೇಳಲು ಬಿಜೆಪಿ ನಾಯಕರಿಗೆ ಯಾವ ಯೋಗ್ಯತೆ ಹಾಗೂ ನೈತಿಕತೆ ಇದೆ ಎಂದು ಪ್ರಶ್ನಿಸಿದ್ರು. ನಾನು ಸಮ್ಮಿಶ್ರ ಸರ್ಕಾರ ನಡೆಸುವಾಗ ಆರ್ಥಿಕ ಸಚಿವರಾಗಿದ್ದ ಯಡಿಯೂರಪ್ಪನವರು ಸಾಲ ಮನ್ನಾ ಮಾಡೋದಕ್ಕೆ ವಿರೋಧ ವ್ಯಕ್ತಪಡಿಸಿದರು. 2010ರಲ್ಲಿ ಅತಿವೃಷ್ಠಿಯಿಂದ ಹಲವು ಗ್ರಾಮಗಳು ಜಲಾವೃತವಾದಾಗ ಕಲಾಪದಲ್ಲಿ ಸಾಲ ಮನ್ನಾ ಮಾಡಿ ಎಂದಿದ್ದಕ್ಕೆ ಖಜಾನೆ ಅಕ್ಷಯಪಾತ್ರೆ ಅಲ್ಲ ಸಾಲ ಮನ್ನಾ ಮಾಡಲು ದುಡ್ಡೆಲ್ಲಿದೆ ಎಂದಿದ್ರು ಯಡಿಯೂರಪ್ಪ. ಈ ಸರ್ಕಾರಕ್ಕೆ ಜನ ನಿಮ್ಮನ್ನ ಓಡಿಸೋ ಮುನ್ನ ಕೊನೆಯಾದಾಗಿ ಸಾಲ ಮನ್ನಾ ಮಾಡಿ ಎಂದು ಹೇಳಿದ್ದಾರೆ.
ಯಡಿಯೂರಪ್ಪರವನ್ನ ಕೇಳ ಬಯಸ್ತೇನೆ ನೀವೇನು ಮಾಡಿದ್ದೀರಾ ಬಿಎಸ್ವೈ ವಿರುದ್ಧ ಕಿಡಿಕಾರಿದ್ರು.ನಂಜನಗೂಡು ಹಾಗೂ ಗುಂಡ್ಲುಪೇಟೆ ಉಪಚುನಾವಣೆಯ ಕುರಿತಂತೆ ಕಾರ್ಯಕರ್ತರ ಜೊತೆ ಮಾತನಾಡಿ ನಂತರ ತಿರ್ಮಾನಕ್ಕೆ ಬರಲಾಗುವುದು ಎಂದೂ ಚಿಕ್ಕಮಗಳೂರಿನ ಸಖರಾಯಪಟ್ಟಣದಲ್ಲಿ ಹೇಳಿದರು.