News Kannada
Tuesday, February 07 2023

ಕರ್ನಾಟಕ

ಬಂಡೀಪುರದ ಕೆರೆಗೆ ಹರಿದು ಬಂದ ನೀರು!

Photo Credit :

ಬಂಡೀಪುರದ ಕೆರೆಗೆ ಹರಿದು ಬಂದ ನೀರು!

ಗುಂಡ್ಲುಪೇಟೆ: ಬಂಡೀಪುರ ಹುಲಿ ಯೋಜನೆಯ  ಗೋಪಾಲಸ್ವಾಮಿ ಬೆಟ್ಟ, ಓಂಕಾರ್, ಕುಂದಕೆರೆ, ಮದ್ದೂರು, ಮೂಲೆಹೊಳೆ, ಎನ್.ಬೇಗೂರು, ಗುಂಡ್ರೆ, ಕಲ್ಕೆರೆ ಅರಣ್ಯ ಪ್ರದೇಶದಲ್ಲಿ ಮಳೆ ಬಂದಿದ್ದರಿಂದ ಸ್ವಲ್ಪ ಮಟ್ಟಿಗೆ ನೆಮ್ಮದಿ ಕಂಡು ಬಂದಿದೆ.

ಸುಡು ಬಿಸಿಲಿಗೆ ಬತ್ತಿ ಹೋಗಿದ್ದ ಕೆರೆಗಳು, ಅಗ್ನಿಗೆ ಆಹುತಿಯಾಗಿದ್ದ ಅರಣ್ಯ ಸದ್ಯ ಮಳೆಯಿಂದ ಚೇತರಿಕೆ ಕಂಡಿದೆ. ಸಾಧಾರಣ ಮಳೆ ಸುರಿದ ಕಾರಣ ನೀರು ಕೆರೆಗೆ ಹರಿದು ಬಂದಿದೆ. ಇದರಿಂದ ಬತ್ತಿಗೆ ಕೆರೆಗಳಿಗೆ ಜೀವಸೆಲೆ ಬಂದಂತಾಗಿದೆ. ಮತ್ತೊಂದೆಡೆ ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಸುಟ್ಟುಹೋಗಿದ್ದ ಮರಗಳು ಒಣಗಿ ಸಾಯುವ ಹಂತಕ್ಕೆ ಬಂದಿದ್ದವು. ಮಳೆ ಬಾರದೆ ಹೋದರೆ ಹೇಗಪ್ಪಾ ಅರಣ್ಯವೇ ನಾಶವಾಗಿ ಬಿಡುತ್ತದೆಯೇನೋ ಎಂದು ಆತಂಕದಲ್ಲಿದ್ದ ಜನರಿಗೆ ಕಳೆದ ಕೆಲವು ದಿನಗಳಲ್ಲಿ ಸುರಿದ ಮಳೆ ಜೀವ ತುಂಬಿದೆ.

ಇದರಿಂದ ಕಳೆದ ಹಲವಾರು ತಿಂಗಳಿಂದ ಕುಡಿಯುವ ನೀರಿಗಾಗಿ ಪರದಾಡುತ್ತಾ? ನೀರಿಗಾಗಿಯೇ ಕಾಡುಬಿಟ್ಟು ಹೋಗಿದ್ದ ಪ್ರಾಣಿಗಳಿಗೂ ಮಳೆ ಬಂದು ಕೆರೆಗೆ ನೀರು ಹರಿದು ಬಂದಿರುವುದು ನೆಮ್ಮದಿಯನ್ನು ನೀಡಿದ್ದಂತು ಸತ್ಯ. ಬೆಂಕಿಗೆ ಸಿಕ್ಕಿ ಬೂದಿಯಾಗಿದ್ದ ಕುರುಚಲು ಕಾಡು, ಕರಕಲಾದ ಮರಗಿಡಗಳು ಮಳೆ ಬಿದ್ದು ಒಂಚೂರು ಭೂಮಿ ತೇವಗೊಂಡ ಪರಿಣಾಮ ಸಾವಿನ ಅಂಚಿನಲ್ಲಿದ್ದವು ಬದುಕುವಂತಾಗಿದೆ. ಹುಲ್ಲುಗಳು ಚಿಗುರ ತೊಡಗಿದ್ದು, ಮುಂದಿನ ದಿನಗಳಲ್ಲಿ ಮಳೆ ಬಂದರೆ ಮತ್ತೆ ಅರಣ್ಯದಲ್ಲಿ ಹಸಿರು ಕಾಣಿಸಬಹುದೇನೋ?

See also  ಡಿಕೆಶಿ ಬಂಧನ: ಎರಡು ದಿನ ಬಳಿಕ ಸಹಜ ಸ್ಥಿತಿಗೆ ರಾಮನಗರ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು