ಅದಕ್ಕೆ ಹೇಳೋದು ಈ ಮಣ್ಣಿನ ಸತ್ವ ಅಂಥದ್ದೆಂದು. ಜಗತ್ತು ಎಷ್ಟೆ ಮುಂದುವರೆದಿದ್ರು ಈ ಪುಣ್ಯಭೂಮಿಯ ಮುಂದೆ ಕೈ ಕಟ್ಟಿಯೇ ನಿಲ್ಲಬೇಕು. ಚಂದ್ರನ ಮೇಲೂ ಕಾಲಿಟ್ಟು ಜಗತ್ತಿನಲ್ಲಿ ನಾವೇ ಮೊದ್ಲು ಅನ್ನೋರೆಲ್ಲಾ ಕೆಲ ವಿಚಾರಗಳಲ್ಲಿ ಭಾರತದೆದುರು ತಲೆ ಎತ್ತಿ ನಿಲ್ಲಲಾರ್ರು. ಯಾಕಂದ್ರೆ, ನಾವೀಗ ಹೇಳ ಹೊರಟಿರೋ ಕಥೆಯೇ ಅಂಥದ್ದು.
ವೀ ಆರ್ ಫಸ್ಟ್ ಇನ್ ದಿ ವಲ್ಡ್ ಅನ್ನೋ ಅಮೇರಿಕಾ, ಚೀನಾ, ಜರ್ಮನಿಯವ್ರೆಲ್ಲಾ ಭಾರತೀಯರೆದುರು ಸೈಲೆಂಟಾಗಿ ಸೈಡಲ್ಲಿರ್ಬೇಕು. ಸಾವಿರಾರು ವರ್ಷಗಳಿಂದ ವೈವಿದ್ಯತೆಯಲ್ಲಿ ಏಕತೆ ಸಾರಿದ ಈ ಮಣ್ಣಿನ ಆ ತಾಕತ್ ಯಾವುದೆಂಬ ಕುತೂಹಲದ ಕುರಿತು ಒಂದು ವರದಿ ಇಲ್ಲಿದೇ ನೋಡಿ..
ಹೌದು ಜಯಲಲಿತಾ ಅನಾರೋಗ್ಯಕ್ಕೆ ತುತ್ತಾಗ ಡಾಕ್ಟ್ರು ಬ್ರಿಟನ್ನಿಂದ ಬಂದ್ರು. ಆದ್ರೆ, ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿಗೆ ಆಸ್ಟ್ರೇಲಿಯಾದ ರೋಗಿ ಬಂದ್ರು. ಇದು ನಮ್ಮ ಆಯುರ್ವೇದಿಕ್ ಔಷಧಿಯ ಶಕ್ತಿ ಅಂತ ಎದೆಯುಬ್ಬಿಸಿ ಹೇಳ್ಬೋದು. ಹೌದು, ಈಕೆಯ ಹೆಸರು ಇಸಬೆಲ್ಲಾ ಲೂಕಾಸ್. ಮೂಲತಃ ಆಸ್ಟ್ರೇಲಿಯಾದವ್ಳು. 20ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರೋ ಈಕೆ ಹಾಲಿವುಡ್ನ ಹೆಸರಾಂತ ನಟಿ. ಹಾಲಿವುಡ್ ಚಿತ್ರಗಳೆಂದ್ರೆ ಆ್ಯಕ್ಷನ್, ಸ್ಟಂಟು, ಫೈಟ್ಗೇನು ಕೊರತೆ ಇರೋಲ್ಲ. ಸಿನಿಮಾಕ್ಕಾಗಿ ದೇಶ-ದೇಶ ಸುತ್ತಿದ್ದ ಈಕೆ ಮಾನಸಿಕ ಹಾಗೂ ದೈಹಿಕ ಸ್ಟ್ರೆಸ್ಗೆ ಒಳಗಾಗಿದ್ಲು. ತನ್ನ ದೇಹದ ಸ್ಥಿತಿಗತಿಯನ್ನ ಹತೋಟಿಗೆ ತಂದುಕೊಳ್ಳಲು ಈಕೆ ಆಯ್ಕೆ ಮಾಡಿಕೊಂಡ ಜಾಗ ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನ ಹರಿಹರಪುರವನ್ನ.
ಭಾರತದ ಆಯುರ್ವೇದಿಕ್ ಚಿಕಿತ್ಸೆಯಿಂದಾಗಿ ನಾನೂ ಮೊದಲಿನಂತಾಗಿ ಸಂತೋಷದಿಂದ ನನ್ನ ದೇಶಕ್ಕೆ ಹಿಂತಿರುಗುತ್ತಿದ್ದೇನೆ. ಹ್ಯಾಟ್ಸಾಫ್ ಇಂಡಿಯಾ ಅಂಡ್ ಇಂಡಿಯನ್ ಮೆಡಿಷನ್ ಎಂದು ಸಂತಸ ವ್ಯಕ್ತಪಡಿಸ್ತಾಳೆ. ಕಳೆದ ಮೂರು ವಾರಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ಇಸಬೆಲ್ಲಾ ಇದೀಗ ಸಂಪೂರ್ಣ ಗುಣಮುಖರಾಗಿದ್ದು, ನಾಳೆ ಆಸ್ಟ್ರೇಲಿಯಾಕ್ಕೆ ಹಿಂದಿರುಗಲಿದ್ದಾಳೆ. ಚಿಕ್ಕಮಗಳೂರು ಜಿಲ್ಲೆ ಕೊಪ್ಪಾದ ಆರೋಗ್ಯನಿಕೇತನ ಆಯುರ್ವೇದಾಶ್ರಮದಲ್ಲಿ ಸದ್ಯ 15ಕ್ಕೂ ಹೆಚ್ಚು ವಿದೇಶಿಗರು ಚಿಕಿತ್ಸೆ ಪಡೆಯುತ್ತಿದ್ದಾರೆ. ಕಳೆದ 10 ವರ್ಷದಿಂದ ಆಯುರ್ವೇದ ಚಿಕಿತ್ಸೆ ನಡೆಸುತ್ತಿರೋ ಈ ಆಶ್ರಮದಲ್ಲಿ ಈವರಗೆ ಮೂರು ಸಾವಿರಕ್ಕೂ ಅಧಿಕ ವಿದೇಶಿಗರು ಚಿಕಿತ್ಸೆ ಪಡೆದಿದ್ದು, ಈಗಲೂ ವಾರ್ಷಿಕ ನೂರಾರು ಜನ ಚಿಕಿತ್ಸೆ ಪಡೆಯುತ್ತಿದ್ದಾರೆ.
ಅಮೇರಿಕಾ, ರಷ್ಯಾ, ಜಪಾನ್ ಸೇರಿದಂತೆ ನಾಲ್ಕೈದು ದೇಶದವ್ರು ಇಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಭಾರತದ ಆಯುರ್ವೇದ ಹಾಗೂ ಇಲ್ಲಿನ ಪಥ್ಯದ ಚಿಕಿತ್ಸೆಯಿಂದ ನಮ್ಮ ದೇಹದ ಆಂತರಿಕ ಹಾಗೂ ಬಾಹ್ಯ ಸ್ಥಿತಿಗತಿಗಳು ತುಂಬಾ ಬದಲಾಗಿದೆ ಎಂದು ಇಲ್ಲಿನ ಚಿಕಿತ್ಸೆ ಬಗ್ಗೆ ಹರ್ಷ ವ್ಯಕ್ತಪಡಿಸ್ತಾರೆ. ಜೊತೆಗೆ ಅಮೇರಿಕಾದ ಕೆಲ ವಿದ್ಯಾರ್ಥಿಗಳು ಇಲ್ಲಿನ ಆಯುರ್ವೇಧದ ಚಿಕಿತ್ಸೆಯನ್ನ ಕಲಿಯುತ್ತಿದ್ದಾರೋದು ಭಾರತದ ಹೆಗ್ಗಳಿಕೆ. ಒಟ್ಟಾರೆಯಾಗಿ ಜಗತ್ತಿನೆದುರು ಭಾರತ ಹಲವು ವಿಚಾರಗಳಲ್ಲಿ ಇಂದಿಗೂ ವಿಶ್ವಕ್ಕೆ ಮಾದರಿಯಾಗಿದೆ. ಅದಕ್ಕಾಗೆ ನಾನಾ ದೇಶದ ಜನ ಈ ಮಣ್ಣಲ್ಲಿ ಬದುಕೋಕೆ ಬಯಸೋದು ಜೀವಂತ ಸಾಕ್ಷಿ. ಭಾರತವನ್ನ ಯಾರು ಹಗುರವಾಗಿ ಕಾಣ್ಬಾರ್ದು ಅನ್ನೋದಕ್ಕೆ ಇದೊಂದು ಬೆಸ್ಟ್ ಎಕ್ಸಾಂಪಲ್. ಜಗತ್ತು ಎಷ್ಟೆ ಮುಂದುವರೆದಿದ್ರು ವಿಶ್ವದ ಹತ್ತಾರು ದೇಶದ ಜನ ಭಾರತದ ಪುರಾತನ ಔಷಧಿ ಪದ್ಧತಿಗೆ ಮಾರುಹೋಗಿದ್ದಾರೆಂದ್ರೆ ನಿಜಕ್ಕೂ ನಾವು ಭಾರತೀಯರು ಎಂದು ಹೇಳಿಕೊಳ್ಳಲು ಹೆಮ್ಮೆಯಾಗೋದ್ರಲ್ಲಿ ಅನುಮಾನವಿಲ್ಲ…