News Kannada
Thursday, December 08 2022

ಕರ್ನಾಟಕ

ಕೃಷಿ-ತೋಟಗಾರಿಗಳಲ್ಲಿ ಹೊಸ ಆವಿಷ್ಕಾರ, ಪದ್ಧತಿ ಸೀಮಿತ: ಕೆ.ಅಣ್ಣಾಮಲೈ

Photo Credit :

ಕೃಷಿ-ತೋಟಗಾರಿಗಳಲ್ಲಿ ಹೊಸ ಆವಿಷ್ಕಾರ, ಪದ್ಧತಿ ಸೀಮಿತ: ಕೆ.ಅಣ್ಣಾಮಲೈ

ಚಿಕ್ಕಮಗಳೂರು: ಕೃಷಿ-ತೋಟಗಾರಿಕಾ ಕ್ಷೇತ್ರಗಳಲ್ಲಿ ಹೊಸ ಆವಿಷ್ಕಾರ, ಪದ್ಧತಿ ಆಚರಣೆಗೆ ತರುವ ಸಂದರ್ಭಗಳು ಸೀಮಿತವಾಗಿವೆ. ಯಶಸ್ವಿ ಪ್ರಯೋಗ ಸ್ಫೂರ್ತಿಯಾಗುತ್ತದೆ ಎಂದು ಎಸ್ಪಿ ಕೆ.ಅಣ್ಣಾಮಲೈ ತಿಳಿಸಿದರು.

ಅವರು ಕರ್ನಾಟಕ ಪ್ಲಾಂಟರ್ಅಸೋಸಿಯೇಷನ್ ಎಮ್ಮೆದೊಡ್ಡಿಯ ವಿಜಯಶ್ರೀ ಪ್ಲಾಂಟೇಷನ್ನಲ್ಲಿ ಹಮ್ಮಿಕೊಂಡಿದ್ದ ‘ಮಿಶ್ರ ಬೆಳೆಯ ತೋಟ ವೀಕ್ಷಣೆ’ ನಂತರ ನಡೆದ ‘ವೈಜ್ಞಾನಿಕ ಅಧಿವೇಶನ’ ಉದ್ಘಾಟಿಸಿ ಮಾತನಾಡಿದರು. ಆಯಾ ಪ್ರದೇಶದ ಕೃಷಿಯಲ್ಲಿ ಹಳೆಯ ಪದ್ಧತಿಗಳನ್ನು ಅನುಸರಿಸುವುದು ಸರ್ವೇಸಾಮಾನ್ಯ. ಹೊಸ ಪದ್ಧತಿ ಅಳವಡಿಸಿಕೊಳ್ಳುವುದು ಬಹಳ ಕಡಿಮೆ. ಇಲ್ಲಿ ಮಿಶ್ರ ಬೆಳೆಯ ವೈಜ್ಞಾನಿಕ ನಿರ್ವಹಣೆಯ ಉತ್ತಮತೋಟ ಇತರೆ ಬೆಳೆಗಾರರಿಗೆ ಸ್ಫೂರ್ತಿಯಾಗುತ್ತದೆ. ಬಳಕೆ ಮಾಡಿಕೊಳ್ಳಬಹುದಾದ ಹೊಸ ಸಾಧ್ಯತೆಗಳನ್ನು ಸದಸ್ಯರಿಗೆ ಪರಿಚಯಿಸುವ ಮೂಲಕ ಕೆಪಿಎ ಉತ್ತಮ ಕಾರ್ಯ ಮಾಡಿದೆ ಎಂದರು.

ಕೆಪಿಎ ಅಧ್ಯಕ್ಷ ಡಾ.ಎಂ.ಎಂ.ಚಂಗಪ್ಪ ಮಾತನಾಡಿ, ವೈದ್ಯಕೀಯ ವೃತ್ತಿಯನ್ನು ತೊರೆದ ಡಾ.ವಿವೇಕ್, ಕೃಷಿ ಅವಲಂಬಿಸಿ ಬಹುಬೆಳೆಗಳನ್ನು ಬೆಳೆದು ಯಶಸ್ವಿಯಾಗಿರುವುದು ಮಾದರಿ. ಕೃಷಿಗೆ ಮಣ್ಣು ಮತ್ತು ವಾತಾವರಣಕ್ಕಿಂತ ಪ್ರಕೃತಿಯ ಮೇಲಿನ ಪ್ರೀತಿ, ಪರಿಶ್ರಮ, ಬಂಡವಾಳ ತೊಡಗಿಸುವುದು, ಪೂರ್ಣಸಮಯ ನೀಡುವುದು ಮುಖ್ಯ. ವೈಜ್ಞಾನಿಕವಾದ ನಿರ್ವಹಣೆಯಿಂದ ಲಾಭದಾಯಕವಾಗಿ ಮುನ್ನಡೆಯಬಹುದೆಂಬುದನ್ನು ತೋರಿಸಿಕೊಟ್ಟಿದ್ದಾರೆ. ಅತ್ಯಾಧುನಿಕ ಆವಿಷ್ಕಾರಗಳು-ಹೊಸ ಸಾಧ್ಯತೆಗಳನ್ನು ಕೃಷಿಯಲ್ಲಿ ಅಳವಡಿಸಿಕೊಂಡಿರುವುದು ಅವರ ಯಶಸ್ಸಿನ ಸೂತ್ರಗಳಲ್ಲೊಂದು ಎಂದರು.

ತೋಟದ ಮಾಲೀಕ ಡಾ.ವಿವೇಕ್ ತಮ್ಮ ಮಾತನಾಡಿ, 2003ನೇ ಸಾಲಿನಲ್ಲಿ ಮೂರು ಜನರಿಂದ ಒಟ್ಟು 80ಎಕರೆ ಕೃಷಿಭೂಮಿಯನ್ನು ಖರೀದಿಸಿ ಮೊದಲು ಸುತ್ತಬೇಲಿಯನ್ನು ಅಳವಡಿಸಲಾಯಿತು. ನೆಲಸಮತಟ್ಟು ಮಾಡಿ ನಾಲ್ಕು ಕೃಷಿ ಹೊಂಡಗಳನ್ನು ತೋಡಲಾಯಿತು.  ಅಗತ್ಯ ರಸ್ತೆಗಳನ್ನು ನಿರ್ಮಿಸಿದ ನಂತರ  ಅಡಿಕೆ, ವೆನಿಲ್ಲಾ, ಪಚೋರಿಯೊಂದಿಗೆ ಕೃಷಿ ಆರಂಭಿಸಲಾಯಿತು.  ಹನಿನೀರಾವರಿ ಅಳವಡಿಸಿದ್ದು, ಬೇರಿನ ಮೂಲಕ ಸಣ್ಣಪೈಪ್ಗಳಲ್ಲಿ ಗೊಬ್ಬರವನ್ನೂ ನೀರಿನೊಂದಿಗೆ ನೀಡಲಾಯಿತು. 63ಕೆ.ವಿ.ಯ 4ಟ್ರಾನ್ಸ್ಫಾರ್ಮರ್ಗಳನ್ನು ಅಳವಡಿಸಿದ್ದು ಒಟ್ಟಾರೆ 18 ಕೊಳವೆಬಾವಿಗಳನ್ನು ಕೊರೆಸಲಾಗಿದೆ. ಎಲ್ಲ ಕೊಳವೆಯನೀರನ್ನು ಕೃಷಿಹೊಂಡಕ್ಕೆ ಹರಿಸಿ ಅಲ್ಲಿಂದ ಮೈಕ್ರೋಸ್ಪಿಂಕ್ಲÀರ್ ಮೂಲಕ ಗಿಡಗಳಿಗೆ ನೀರು-ಗೊಬ್ಬರ ಪೂರೈಸಲಾಯಿತು.

See also  ಸರಕಾರದ ಹಣ ದುರುಪಯೋಗಪಡಿಸಿಕೊಂಡ ಸಿಬ್ಬಂದಿಗೆ 3 ವರ್ಷ ಜೈಲು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು