ಕಾಫಿನಾಡು ಚಿಕ್ಕಮಗಳೂರು ಇನ್ನು ಮೂರು ದಿನಗಳ ಕಾಲ ಚಿನ್ನ, ಡೈಮಂಡ್ ವಜ್ರ ವೈಡೂರ್ಯಗಳ ನಾಡಾಗಿರುತ್ತೆ. ಸಿನಿಮಾ-ಧಾರಾವಾಹಿ, ಜಾಹೀರುತುಗಳಲ್ಲಿ ನೋಡಿದ ಒಡವೆಗಳ ಡಿಸೈನ್ ಗಾಗಿ ಮಹಿಳೆಯರು ಆರ್ಡರ್ ಕೊಡ್ತಿದ್ರು, ಕೆಲವರು ಊರೂರು ಸುತ್ತುತ್ತಿದ್ರು. ಆದ್ರೆ, ಒಂದೇ ಸೂರಿನಡಿ ದೇಶದ ಎಲ್ಲಾ ಪ್ರತಿಷ್ಠಿತ ಕಂಪನಿಗಳ ಡಿಸೈನ್ ಗಳು ಸಿಕ್ರೆ ಮಹಿಳೆಯರ ಸ್ಥಿತಿ ಮನ್ಸಲ್ಲೆ ಮೊಸ್ರನ್ನ ತಿಂದಂತಾಗುತ್ತೆ.
ಹಾಗಾಗಿ, ಕಾಫಿನಾಡಲ್ಲಿ ನಡೆಯುತ್ತಿರೋ ಬಂಗಾರದ ಸಂತೆಗೆ ಬರ್ತಿರೋ ಮಹಿಳೆಯರು ತಮಗೆ ಬೇಕಾದ ಡಿಸೈನ್ ಗಳ ವಡವೆಗಳನ್ನ ಖರೀದಿಸುತ್ತಾ ಖುಷಿ ಪಡ್ತಿದ್ದಾರೆ. ಈ ಕುರಿತ ಒಂದು ವರದಿ ಇಲ್ಲಿದೇ ನೋಡಿ…
ಹೌದು, ಅಕ್ಷಯ ತೃತಿಯ ಹಾಗೂ ಮದುವೆಯಂತಹ ಶುಭ-ಸಮಾರಂಭಗಳು ಆರಂಭಗೊಳ್ಳೊ ಕಾಲದಲ್ಲಿ ಕಾಫಿನಾಡಲ್ಲಿ ನಡೆಯುತ್ತಿರೋ ಬಂಗಾರದ ಜಾತ್ರೆ ಆಭರಣ ಪ್ರಿಯರಿಗೆ ಡಬಲ್ ಧಮಾಕ ತಂದಿದೆ. ಜ್ಯವೆಲ್ಸ್ ಆಫ್ ಇಂಡಿಯಾ ನೇತೃತ್ವದಲ್ಲಿ ಇದೇ ಮೊದಲ ಬಾರಿಗೆ ಕಾಫಿನಾಡಲ್ಲಿ ನಡೆಯುತ್ತಿರೋ ಈ ಮೇಳಕ್ಕೆ ಬೆಂಗಳೂರು, ಚೆನ್ನೈ, ಹೈದ್ರಾಬಾದ್, ಕೋಲ್ಕತ್ತ, ಮುಂಬೈ, ದೆಹಲಿ, ಸೂರತ್, ಪುಣೆ ಸೇರಿದಂತೆ ದೇಶದ ದಿ ಬೆಸ್ಟ್ ಅನ್ನಿಸುವಂತಹ ಚಿನ್ನಾಭರಣಗಳು ಒಂದೇ ಸೂರಿನಡಿ ಸಿಗ್ತಿರೋದು ಕಾಫಿನಾಡಿಗರಿಗೆ ಸಂತಸ ತಂದಿದೆ.
ಆಭರಣ ಪ್ರಿಯರು ತಮ್ಮ ಅಭಿರುಚಿ ಹಾಗೂ ಬಜೆಟ್ ಗೆ ತಕ್ಕನಾದ ಆಭರಣವನ್ನ ಖರೀದಿಸಬಹುದಾಗಿದೆ. ಕಾಫಿನಾಡಿನ ಸೌಂದರ್ಯ ಹೇಗಿದೆಯೋ ಅಷ್ಟೆ ಮನಮೋಹಕವಾದ ಒಡವೆ ಹಾಗೂ ಡಿಸೈನ್ ಗಳು ಇಲ್ಲಿವೆ. ಇನ್ನು ಮೂರು ದಿನಗಳ ಕಾಲ ಚಿಕ್ಕಮಗಳೂರಿನಲ್ಲಿ ಬಂಗಾರದ ಜಾತ್ರೆ ನೋಡಬಹುದು. ಇಂತಹಾ ಮೇಳ ದೇಶದ ಇತರೆ ಭಾಗದಲ್ಲಿ ನಡೆದಿದ್ರು ಕಾಫಿನಾಡಿನ ಮೇಳಕ್ಕೆ ವಿಶೇಷ ಸ್ಥಾನವಿದೆ. ಯಾಕಂದ್ರೆ, ಎಲ್ಲಾ ಪ್ರತಿಷ್ಠಿತ ಚಿನ್ನದ ಕಂಪನಿಗಳು ಚಿಕ್ಕಮಗಳೂರಿಗೆಂದೇ ಮತ್ತಷ್ಟು ವಿಶೇಷ, ವಿಭಿನ್ನವಾದ ಡಿಸೈನ್ ಗಳ ಆಭರಣವನ್ನ ವಿನ್ಯಾಸಗೊಳಿಸಿದ್ದಾರೆ.
ದೇಶದ ಪ್ರತಿಷ್ಠಿತ ಚಿನ್ನದ ಶೋ ರೂಂಗಳಾದ ಧವನಂ ಜ್ಯುವೆಲರ್ಸ್, ಎಂ.ಪಿ.ಸ್ವರ್ಣ ಮಹಲ್, ಥಾರ್ ಹ್ಯಾಂಡಿಕ್ರಾಫ್ಟ್ ಸೇರಿದಂತೆ ದೇಶದ ಹೆಸರಾಂತ 30ಕ್ಕೂ ಹೆಚ್ಚು ಚಿನ್ನದ ಮಾರಾಟ ಕಂಪನಿಗಳು ಇಲ್ಲಿ ಭಾಗವಹಿಸಿದ್ವು. ಮೇಳಕ್ಕೆ ಬಂದಿದ್ದ ಕೆಲ ಮಹಿಳೆಯರು ತಮಗೆ ಇಷ್ಟವಾದ ಒಡವೆಗಳನ್ನ ಹಾಕಿಕೊಂಡು ಖುಷಿಪಟ್ಟು ಖರೀದಿಸಿದ್ರು. ಯಾವುದೇ ಡಿಸೈನ್ನ ಯಾವುದೇ ಒಡವೆ ಕಂಡ್ರು ಒಂದಕ್ಕಿಂತ ಒಂದು ಚೆಂದ. ಮಹಿಳೆಯರಿಗೆ ಯಾವುದನ್ನ ಖರೀದಿಸಬೇಕೆಂದು ಗೊಂದಲಕ್ಕೀಡಾಗುವಷ್ಟು ಕಲೆಕ್ಷನ್ ಒಂದೇ ಸೂರಿನಡಿ ಸಿಕ್ಕಿದ್ರಿಂದ ಕಾಫಿನಾಡಿಗರು ಸಂತಸ ವ್ಯಕ್ತಪಡಿಸ್ತಾರೆ.
ಒಟ್ಟಾರೆಯಾಗಿ ಹಳ್ಳಿ ದಿಲ್ಲಿಯಾಗ್ಲಿ, ದಿಲ್ಲಿ ಹಳ್ಳಿಯಾಗ್ಲಿ, ಮಳೆ-ಬೆಳೆ ಬರ್ಲಿ-ಬಿಡ್ಲಿ ಕಂಪನಿಗಳು ಜನರನ್ನ ಸೆಳೆಯೋದ್ ಬಿಡಲ್ಲ. ಜನ ಬಂಗಾರವನ್ನ ಖರೀದಿಸೋದ್ ನಿಲ್ಸಲ್ಲ. ಇಡೀ ರಾಜ್ಯವೇ ಭೀಕರ ಬರಗಾಲದಿಂದ ತತ್ತರಿಸುತ್ತಿದ್ರೆ ಜನ ಬಂಗಾರದ ಬೇಟೆಗೆ ಪರಿತಪ್ಪಿಸುತ್ತಿದ್ದಾರೆ. ಕಾಫಿನಾಡಿನ ಕಾಫಿ ಬೆಳೆಗಾರರೇನು ಕಮ್ಮಿ ಸಾಹುಕಾರರಲ್ಲ ಬಿಡಿ. ಅದೇನೆ ಇದ್ರು, ಇಷ್ಟು ದಿನ ಒಡವೆ ಹಾಗೂ ಡಿಸೈನ್ ಗಾಗಿ ಊರೂರು ಸುತ್ತುತ್ತಿದ್ದೋರ್ಗೆ ಒಂದೇ ಸೂರಿನಡಿಯ ಈ ಮೇಳ ಎಲ್ಲರಿಗೂ ಖುಷಿ ತಂದಿದೆ…