ಚಿಕ್ಕಮಗಳೂರು: ರೈತರ ಸಾಲ ಮನ್ನಾಗೊಳಿಸುವ ಭರವಸೆಯೊಂದಿಗೆ ಕಾದು ನಿಂತಿದ್ದ ರೈತರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನಿರಾಸೆಗೊಳಿಸಿದ್ದಾರೆ. ಬರದ ದವಡೆಯ ಸಂದರ್ಭದಲ್ಲಿ ಸಾಲ ಮನ್ನಾ ಇಲ್ಲ ಎಂದಾಗ ಅನ್ನದಾತರಿಗೆ ತೀವ್ರ ನಿರಾಸೆ ಉಂಟಾಗುವುದು ಸಹಜ. ಹೀಗಾಗಿಯೇ ಮಂಡ್ಯದಲ್ಲಿ ರೈತರೋರ್ವರು ಆತ್ಮಹತ್ಯೆಗೆ ಶರಣಾಗಿದ್ದಾರೆ ಆದರೆ ತಕ್ಷ ಣದ ಪರಿಹಾರ ಮುಖ್ಯವಾಗುತ್ತದೆ ಎಂದ ಅವರು, ಈ ಹಿಂದಿನ ಮೂರು ಲಕ್ಷ ರೂ.ಗಳವರೆಗೆ ಶೂನ್ಯ ಬಡ್ಡಿ, 10 ಲಕ್ಷದವರೆಗೆ ಶೇ.3ರಷ್ಟು ಬಡ್ಡಿಯಲ್ಲಿನ ಸಾಲಸೌಲಭ್ಯ ಮುಂದುವರೆದಿದೆ ನಿಜ. ಆದರೆ ಈಗಾಗಲೇ ಮಾಡಿರುವ ಸಾಲ ತೀರಿಸಲಾಗದ ಸ್ಥಿತಿಯಿಂದ ಕೃಷಿಕರು ಪಾರಾಗಬೇಕಾಗಿದೆ ಎಂದರು.
ಬಜೆಟ್ ನಲ್ಲಿ ಎಲ್ಲಾ ವರ್ಗಗಳನ್ನು ತೃಪ್ತಿಪಡಿಸುವ ಪ್ರಯತ್ನ ಮಾಡಲಾಗಿದ್ದು, ಈ ಬಜೆಟ್ ಮುಂದಿನ ಚುನಾವಣೆಯ ಪ್ರಣಾಳಿಕೆಯಂತೆ ಕಂಡು ಬರುತ್ತಿದೆ. ಆರ್ಥಿಕ ಬೆಳವಣಿಗೆಗೆ ಗೋಚರಿಸುತ್ತಿಲ್ಲ. ಆರ್ಥಿಕ ಶಿಸ್ತು ಕಾಯ್ದೆಗೆ ಹತ್ತಿರವಾಗಿ ಸಾಲ ಮಾಡುವ ಗುರಿಯಡಿ ಉಳಿತಾಯ ಬಜೆಟ್ ಎಂದು ಸಿದ್ಧರಾಮಯ್ಯ ಘೋಷಿಸಿದ್ದಾರೆ.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ತೊಂಬತ್ತು ಸಾವಿರ ಕೋಟಿ ಸಾಲ ಮಾಡಲಾಗಿದೆ. ಈ ಬಜೆಟ್ ನಲ್ಲೂ ಸಾಲದ ವಿವರವಿದೆ. ಆದರೆ ಪ್ರಗತಿ ನಿರೀಕ್ಷಿತ ಮಟ್ಟದಲ್ಲಿಲ್ಲ ಎಂದು ನುಡಿದರು. ಕಳೆದ 50 ದಿನಗಳನ್ನು ಮುಖ್ಯಮಂತ್ರಿಗಳು ಬಜೆಟ್ ಸಿದ್ಧಪಡಿಸಲು ತೆಗೆದುಕೊಂಡಿದ್ದಾರೆ ಎಂದ ಅವರು ಯಾವುದೇ ಪಕ್ಷ ಅಧಿಕಾರದಲ್ಲಿದ್ದರೂ ಚುನಾವಣೆ ಸಂದರ್ಭದಲ್ಲಿ ಜನತೆಯನ್ನುಸಂತೃಪ್ತಿಪಡಿಸುವುದು ಸಹಜ. ಕೃಷಿ, ಗ್ರಾಮೀಣಾಭಿವೃದ್ಧಿಗೆ ಕಡಿಮೆ ಮೊತ್ತ ನಿಗದಿಯಾದರೆ ಒಟ್ಟಾರೆ ಜನರ ನಿರೀಕ್ಷೆ ಹುಸಿಯಾಗಿದೆ ಎಂದ ಅವರು, ತಮ್ಮ ಕ್ಷೇತ್ರದ ಕಳಸವನ್ನು ತಾಲೂಕು ಕೇಂದ್ರವಾಗಿಸಬೇಕಾಗಿತ್ತು. ಆ ಭಾಗದ ಜನತೆ ತಾಲೂಕು ಕೇಂದ್ರಕ್ಕೆ ಬರಲು ಬಹಳಷ್ಟು ದೂರ ಕ್ರಮಿಸುವುದನ್ನು ತಪ್ಪಿಸಬೇಕಾಗಿತ್ತು ಎಂದು ತಿಳಿಸಿದರು.
ಈ ಹಿಂದಿನ ಮತ್ತು ಇಂದಿನ ಕಂದಾಯ ಸಚಿವರಿಗೆ ತಾವು ನಿಯೋಗದ ಮೂಲಕ ತೆರಳಿ ಮನವಿಸಲ್ಲಿಸಿದ್ದರೂ ಪರಿಗಣನೆಯಾಗಿಲ್ಲ. ಬೇರೆ ಜಿಲ್ಲೆಗಳಿಗೆ 2/3 ತಾಲೂಕು ನೀಡಿ ತಮ್ಮ ಜಿಲ್ಲೆಗೆ ಅನ್ಯಾಯಮಾಡಲಾಗಿದೆ. ಬರದಿಂದ ತತ್ತರಿಸಿರುವ ರೈತರಿಗೆ ನೆರವಾಗಲು ಸಾಲಮನ್ನಾ ಮಾಡಬೇಕಾಗಿತ್ತು. ಕಸ್ತೂರಿ ರಂಗನ್ ವರದಿ ಕುರಿತಂತೆ ಸರ್ಕಾರ ವಿಶೇಷ ಗಮನಹರಿಸಬೇಕು ಎಂದು ಒತ್ತಾಯಿಸಿದ ಅವರು ತಮ್ಮ ಕ್ಷೇತ್ರದಲ್ಲಿ 26ಹಳ್ಳಿಗಳು ಸೇರಿದ್ದು ಜನತೆ ಭಯ ಭೀತರಾಗಿದ್ದಾರೆ ಎಂದರು.