News Kannada
Thursday, December 08 2022

ಕರ್ನಾಟಕ

ಹಾಸನ ಬಯಲು ಶೌಚಮುಕ್ತ ನಗರವಾಗಿ ಶೀಘ್ರ ಘೋಷಣೆ

Photo Credit :

ಹಾಸನ ಬಯಲು ಶೌಚಮುಕ್ತ ನಗರವಾಗಿ ಶೀಘ್ರ ಘೋಷಣೆ

ಹಾಸನ: ಸ್ವಚ್ಛ ನಗರಗಳ ಸ್ಥಾನ ಪಡೆದು ಹೆಸರು ಮಾಡಿದ್ದ ಹಾಸನ ಶೀಘ್ರದಲ್ಲೇ ಬಯಲು ಶೌಚ ಮುಕ್ತ ನಗರವೆಂದು ಘೋಷಿಸಲ್ಪಡಲಿದೆ ಇದೇ ರೀತಿ ಸಕಲೇಶಪುರ ಮತ್ತು ಬೇಲೂರು ಪುರಸಭೆಗಳು ಹಾಗೂ ಆಲೂರು ಪಟ್ಟಣ ಪಂಚಾಯ್ತಿ ಕೂಡ ಇದೇ ಹಾದಿಯಲ್ಲಿವೆ.

ಹಾಸನ ನಗರದ 35 ವಾರ್ಡ್ ಗಳಲ್ಲಿಯೂ ಬಯಲು ಶೌಚ ವ್ಯವಸ್ಥೆಯಿಂದ ಮುಕ್ತವಾಗಿದ್ದು ಮಾರ್ಚ್ 2017ರೊಳಗೆ ಈ ಕುರಿತು ಅಧಿಕೃತ ಘೋಷಣೆಯಷ್ಟೇ ಬಾಕಿ ಇದೆ.

ಜಿಲ್ಲಾಧಿಕಾರಿ ವಿ.ಚೈತ್ರ ಅವರ ಅಧ್ಯಕ್ಷತೆಯಲ್ಲಿ ಮಾರ್ಚ್ 22ರಂದು ನಡೆದ ಸ್ವಚ್ಛ ಭಾರತ್ ಮಿಷನ್ ಅನುಷ್ಠಾನದ ಪ್ರಗತಿ ಪರಿಶೀಲನಾ ಸಭೆಯಲ್ಲಿ ನಗರಸಭೆ ಅಧ್ಯಕ್ಷರಾದ ಡಾ:ಹೆಚ್.ಎಸ್.ಅನಿಲ್ ಕುಮಾರ್, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಾದ ಕೃಷ್ಣಮೂರ್ತಿ ಮತ್ತು ಪೌರಾಯುಕ್ತರಾದ ನಾಗಭೂಷಣ್ ಈ ವಿಷಯ ತಿಳಿಸಿದ್ದಾರೆ.

ಹಾಸನ ನಗರದಲ್ಲಿ ಇತ್ತೀಚಿನ ಸಮೀಕ್ಷೆ ಪ್ರಕಾರ ನಗರ ವ್ಯಾಪ್ತಿಯಲ್ಲಿ 111 ಶೌಚಾಲಯಗಳನ್ನು ನಿರ್ಮಿಸಲು ಬಾಕಿ ಇತ್ತು ಅದರಲ್ಲಿ 96 ಪೂರ್ಣಗೊಂಡಿದ್ದು 10 ಪ್ರಗತಿಯಲ್ಲಿವೆ ಇನ್ನು ಕೇವಲ 5 ಶೌಚಾಲಯಗಳನ್ನು ಪ್ರಾರಂಭಿಸಲು ಬಾಕಿ ಇದ್ದು ಶೀಘ್ರವೇ ಪೂರ್ಣಗೊಳ್ಳಲಿದೆ ಎಂದು ನಗರಸಭೆ ಆಯುಕ್ತರು ಮಾಹಿತಿ ನೀಡಿದರು.

ಇದೇ ರೀತಿ ಸಕಲೇಶಪುರ ಮತ್ತು ಬೇಲೂರು ಪುರಸಭೆಗಳ ಎಲ್ಲಾ ತಲಾ 23 ವಾರ್ಡ್ ಗಳು ಹಾಗೂ ಆಲೂರು ಪಟ್ಟಣ ಪಂಚಾಯ್ತಿಯ ಎಲ್ಲಾ 11 ವಾರ್ಡ್ ಗಳು ಬಯಲು ಶೌಚ ಮುಕ್ತ ವಾರ್ಡ್ ಗಳೆಂದು ಘೋಷಿಸಿಕೊಳ್ಳಲು ಸಿದ್ಧವಾಗುತ್ತಿವೆ. ಸಕಲೇಶಪುರದಲ್ಲಿ ಕೇವಲ 82 ವೈಯಕ್ತಿಕ ಶೌಚಾಲಯಗಳ ನಿರ್ಮಾಣ ಬಾಕಿ ಇತ್ತು ಇದರಲ್ಲಿ ಈಗಾಗಲೇ 30 ಪೂರ್ಣವಾಗಿದ್ದು 35 ಪ್ರಗತಿಯಲ್ಲಿವೆ.

ಬೇಲೂರಿನಲ್ಲಿ 362 ವೈಯಕ್ತಿಕ ಶೌಚಾಲಯಗಳ ನಿರ್ಮಾಣ ಬಾಕಿಯಲ್ಲಿ 210 ಪೂರ್ಣಗೊಂಡಿದ್ದು 152 ಪ್ರಾರಂಭವಾಗಬೇಕಿದೆ. ಆಲೂರಿನಲ್ಲಿ ಬಾಕಿ ಉಳಿದಿದ್ದ 57 ವೈಯಕ್ತಿಕ ಶೌಚಾಲಯಗಳ ಪೈಕಿ 15 ಪೂರ್ಣಗೊಂಡಿದ್ದು 33 ಪ್ರಗತಿಯಲ್ಲಿವೆ. 9 ಮಾತ್ರ ಇನ್ನೂ ಪ್ರಾರಂಭವಾಗಬೇಕಿದೆ ಎಂದು ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಾದ ಕೃಷ್ಣಮೂರ್ತಿ ತಿಳಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ವಿ.ಚೈತ್ರ ಅವರು ಹಾಸನ ಸಕಲೇಶಪುರ, ಬೇಲೂರು ಮತ್ತು ಆಲೂರುಗಳು ಸಂಪೂರ್ಣ ಬಯಲು ಶೌಚಮುಕ್ತವೆಂದು ಘೋಷಿಸಲ್ಪಡುವುದು ಸಂತಸದ ವಿಚಾರ. ಆದರೆ ಅಧಿಕಾರಿಗಳು ಎಲ್ಲಾ ವಾರ್ಡ್ ಗಳಲ್ಲಿ ಸೂಕ್ಷ್ಮವಾಗಿ ಪರಿಶೀಲನೆ ನಡೆಸಬೇಕು. ವೈಯಕ್ತಿಕ ಶೌಚಾಲಯಗಳ ನಿರ್ಮಾಣಕ್ಕೆ ಸ್ಥಳಾವಕಾಶದ ಕೊರತೆ ಇರುವವರಿಗೆ ಸಮುದಾಯ ಶೌಚಾಲಯ ಸೌಲಭ್ಯ ಒದಗಿಸಿ ಎಂದರಲ್ಲದೆ, ಸ್ವಚ್ಛ ಭಾರತ ಅಭಿಯಾನದ ಯಶಸ್ಸಿಗೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿ ಸಿಬ್ಬಂದಿ, ಸಂಘಸಂಸ್ಥೆಗಳು ಮತ್ತು ಸಾರ್ವಜನಿಕರ ಸಹಕಾರ ಅಗತ್ಯ ಎಂದು ಜಿಲ್ಲಾಧಿಕಾರಿಯವರು ಹೇಳಿದರು.

ಜಿಲ್ಲಾ ಸ್ವಚ್ಛ ಭಾರತ ಮಿಷನ್ ರಾಯಭಾರಿ ಜಿ.ಎಲ್.ಮುದ್ದೇಗೌಡ, ನಗರ ಸ್ಥಳೀಯ ಸಂಸ್ಥೆಗಳ ಆಯುಕ್ತರು, ಪೌರಾಯುಕ್ತರು, ಮುಖ್ಯಾಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

See also  ತಂಬಾಕು ಬೆಳೆಯಿಂದ ನಷ್ಟ: ರೈತ ಆತ್ಮಹತ್ಯೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು