ಮಡಿಕೇರಿ: ಸುಂಟಿಕೊಪ್ಪ ನಾಡು ಕಚೇರಿ ಬಳಿಯಲ್ಲಿ ನೂತನವಾಗಿ ನಿರ್ಮಿಸಲಾದ ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಚಾಲನೆ ನೀಡಿದರು.
ಆ ನಂತರ ಮಾತನಾಡಿದ ಶಾಸಕರು ಶುದ್ಧ ಕುಡಿಯುವ ನೀರು ಸೇವನೆಯಿಂದ ಕಾಯಿಲೆ ಬಾರದಂತೆ ಆರೋಗ್ಯವನ್ನು ಕಾಪಾಡಬಹುದು ನಾವು ರೋಗ ಬರುವ ಮುಂಚೆ ಅಗತ್ಯ ಕ್ರಮ ಕೈಗೊಳ್ಳುವುದು ಒಳಿತು ಎಂದರು. ಸೋಮವಾರಪೇಟೆ ನ್ಯಾಯಲಯಾದ ಬಳಿ 50 ಲಕ್ಷ ರೂ ವೆಚ್ಚದಲ್ಲಿ ನೀರು ಶುದ್ಧೀಕರಣ ಪರಿಶೀಲನಾ ಕೇಂದ್ರ ಸ್ಥಾಪಿಸಲಾಗಿದೆ. ನಾವು ಸೇವಿಸುವ ಕುಡಿಯುವ ನೀರಿನ ಟಿಡಿಎಸ್ನ್ನು ಅಲ್ಲಿ ಸಾರ್ವಜನಿಕರು ಪರಿಶೀಲಿಕೊಳ್ಳಬಹುದು ಎಂದು ಹೇಳಿದರು.
ಮಾಜಿ ಶಾಸಕ ಕೆ.ಎಂ. ಇಬ್ರಾಹಿಂ ಮಾತನಾಡಿ ಜನರ ಉಯೋಗಕ್ಕಾಗಿ ಸುಂಟಿಕೊಪ್ಪ ಜನತೆಗೆ ಸರಕಾರ ಹಾಗೂ ಶಾಸಕರ ಪ್ರಯತ್ನದಿಂದ ಶುದ್ಧ ಕುಡಿಯುವ ನೀರು ಒದಗಿಸಲಾಗಿದೆ. ಆದರೆ ಪಟ್ಟಣದ ಹೃದಯ ಭಾಗದಲ್ಲಿ ಈ ಕೇಂದ್ರ ಸ್ಥಾಪಿಸಿದರೆ ಜನರಿಗೆ ಇನ್ನಷ್ಟು ಪ್ರಯೋಜನವಾಗುತ್ತಿತ್ತು. ಇಲ್ಲಿಂದ ಈ ಘಟಕ ಸ್ಥಳಾಂತರಿಸುವುದು ಸೂಕ್ತ ಎಂದು ಹೇಳಿದರು.
ಜಿ.ಪಂ.ಸದಸ್ಯ ಚಂದ್ರಕಲಾ ಗ್ರಾಮೀಣಾಭಿವೃದ್ಧಿ ಸಚಿವರಾದ ಹೆಚ್.ಕೆ.ಪಾಟೀಲ್ ಅವರಿಗೆ ತಾನು ಮನವಿ ಸಲ್ಲಿಸಿದ ಮೇರೆ ಶಾಸಕರ ಪ್ರಯತ್ನದಿಂದ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣವಾಗಿದೆ ಜನರು ಇದರ ಪ್ರಯೋಜನ ಪಡೆದುಕೊಳ್ಳಬೇಕೆಂದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ಬಿ.ಬಿ.ಭಾರತೀಶ್ ಅವರು ನಾವು ಪ್ರತಿನಿತ್ಯ ಕುಡಿಯುವ ನೀರನ್ನು ಪರಿಶೀಲಿಸುವ ಅಗತ್ಯವಿದೆ ನೀರಿನಿಂದಲೇ ಹಲವಾರು ಕಾಯಿಲೆ ಬರುತ್ತಿದೆ ನೀರಿನ ಟಿಡಿಎಸ್ ಪರಿಶೀಲಿಸಿ ನೀರು ಸೇವಿಸಲು ಯೋಗ್ಯವಾಗಿದೆಯಾ ಎಂದು ತಿಳಿದುಕೊಳ್ಳುವುದು ಅಗತ್ಯ ಎಂದರು.
ಈ ಸಂದರ್ಭದಲ್ಲಿ ತಾ.ಪಂ.ಸದಸ್ಯೆ ಓಡಿಯಪ್ಪನ ವಿಮಾಲಾವತಿ, ಗ್ರಾ.ಪಂ.ಅಧ್ಯಕ್ಷೆ ರೋಸ್ ಮೇರಿ ರಾಡ್ರಿಗಸ್, ಉಪಾಧ್ಯಕ್ಷ ಪಿ.ಆರ್.ಸುಕುಮಾರ್, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮೇದಪ್ಪ, ಗ್ರಾ.ಪಂ.ಸದಸ್ಯರಾದ ಬಿ.ಎಂ.ಸುರೇಶ್, ಚಂದ್ರ, ರಜಾಕ್, ಗಿರಿಜಾ ಉದಯಕುಮಾರ್, ನಾಗರತ್ನ, ಶಿವಮ್ಮ, ಕಂದಾಯ ಪರಿವೀಕ್ಷಕರಾದ ಬಿ.ಪಿ.ಕೃಷ್ಣಪ್ಪ, ಮಡಿಕೇರಿ ಕ್ಷೇತ್ರ ಬಿಜೆಪಿ ಮಾಜಿ ಅಧ್ಯಕ್ಷ ಪಿ.ಕೆಶೇಷಪ್ಪ, ನಾಕೂರು ಶಿರಂಗಾಲ ಗ್ರಾ.ಪಂ.ಸದಸ್ಯ ಅಂಬೆಕಲ್ ಚಂದ್ರಶೇಖರ್, ನಗರ ಬಿಜೆಪಿ ಅಧ್ಯಕ್ಷ ಪಿ.ಆರ್.ಸುನೀಲ್, ಬಿಜೆಪಿ ಜಿಲ್ಲಾ ಸಮಿತಿ ಸದಸ್ಯ ಬಿ.ಕೆ.ಮೋಹನ್, ಕಾಂಗ್ರೆಸ್ ನಗರಾಧ್ಯಕ್ಷರಾದ ಕೆ.ಐ.ರಫೀಕ್, ಕಾರ್ಯದರ್ಶಿ ಹಸಕುಂಞ ಶರೀಫ್, ಗ್ರಾಮಾಭಿವೃದ್ಧಿ ಹೋರಾಟ ಸಮಿತಿ ಅಧ್ಯಕ್ಷ ಮಂಜುನಾಥ್, ಮಾಜಿ ಅಧ್ಯಕ್ಷ ಎಂ.ಎ.ಉಸ್ಮಾನ್, ಮಹಿಳಾ ಸಮಾಜದ ಅಧ್ಯಕ್ಷೆ ಲೀಲಾಮೇದಪ್ಪ, ಗ್ರಾಮಲೆಕ್ಕಿಗರು, ಸಹಾಯಕರು ಪಂಚಾಯಿತಿ ಸಿಬ್ಬಂದಿಗಳು ಉಪಸ್ಥಿತರಿದ್ದರು.