News Kannada
Thursday, September 29 2022

ಕರ್ನಾಟಕ

ಮುಕ್ತ ಪಾರದರ್ಶಕ ಚುನಾವಣೆಗಾಗಿ ಕಟ್ಟುನಿಟ್ಟಿನ ಕ್ರಮ - 1 min read

Photo Credit :

ಮುಕ್ತ ಪಾರದರ್ಶಕ ಚುನಾವಣೆಗಾಗಿ ಕಟ್ಟುನಿಟ್ಟಿನ ಕ್ರಮ

ಚಾಮರಾಜನಗರ: ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಪ್ರಕ್ರಿಯೆಯನ್ನು ಮುಕ್ತ ಹಾಗೂ ಪಾರದರ್ಶಕವಾಗಿ ನಡೆಸುವ ಉದ್ದೇಶದಿಂದ ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ, ಬಿ. ರಾಮು ತಿಳಿಸಿದರು.

ಗುಂಡ್ಲುಪೇಟೆ ತಾಲ್ಲೂಕು ಕಚೇರಿಯಲ್ಲಿ ಇಂದು  ಚುನಾವಣಾ ಹಿನ್ನಲೆಯಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಟಿಯಲ್ಲಿ ಜಿಲ್ಲಾಧಿಕಾರಿಯವರು ಈ ವಿಷಯ ತಿಳಿಸಿದರುಚುನಾವಣಾ  ನೀತಿ ಸಂಹಿತೆ ಪಾಲನೆಗೆ ನಿಗಾವಹಿಸಲು ಸೆಕ್ಟರ್ ಅಧಿಕಾರಿಗಳಾಗಿ 19 ತಂಡ ಒಳಗೊಂಡ 38 ಅಧಿಕಾರಿಗಳು, 6 ಪ್ಲೈಯಿಂಗ್ ಸ್ಕ್ವಾಡ್ ಗೆ 24 ಅಧಿಕಾರಿಗಳು, ವೀಡಿಯೋ ಸರ್ವೆಯಲೆನ್ಸ್ 6 ತಂಡಕ್ಕೆ 6 ಅಧಿಕಾರಿಗಳು, ಒಂದು  ವೀಡಿಯೋ ವೀವಿಂಗ್ ತಂಡ ಅಧಿಕಾರಿಗಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ.  11 ಚೆಕ್ ಪೋಸ್ಟ್ ಗಳನ್ನು ತೆರೆಯಲಾಗಿದ್ದು, 101 ಅಧಿಕಾರಿಗಳನ್ನು ನಿಯೋಜಿಸಲಾಗಿದೆ ಎಂದರು.

ಮತದಾರರಿಗೆ ಆಮಿಷ ಒಡ್ಡುವ ಪ್ರಕರಣಗಳು, ದಾಖಲೆ ಇಲ್ಲದೆ ಸಾಗಿಸುವ ಹಣ, ಉಡುಗೊರೆ ವಸ್ತುಗಳು ಇನ್ನಿತರೆ ಸಾಮಗ್ರಿಗಳ ಮೇಲೆ ನಿಗಾ ಇಡಲಾಗಿದೆ.  ಚೆಕ್ ಪೋಸ್ಟ್ ಗಳಲ್ಲಿ ತಪಾಸಣೆ ಮಾಡುವ ವೇಳೆ ವೀಡಿಯೋ ಚಿತ್ರೀಕರಣ ಮಾಡಲಾಗುತ್ತಿದೆ. ಈಗಾಗಲೇ 10 ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳು ದಾಖಲಾಗಿವೆ. ಅಬಕಾರಿ ನಿಯಮ ಉಲ್ಲಂಘಿಸಿದ 54 ಪ್ರಕರಣಗಳು ದಾಖಲು ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಮತ, ಜಾತಿ ಆಧಾರದ ಮೇಲೆ ಮತಯಾಚನೆ ಮಾಡುವಂತಿಲ್ಲ.  ಚುನಾವಣಾ ಪ್ರಚಾರ, ಸಮಾರಂಭ ಮಾಡುವ ವೇಳೆ ಅಧಿಕಾರಿಗಳು ಗಮನಿಸಲಿದ್ದಾರೆ.  ಸಭೆ, ಸಮಾರಂಭಗಳಿಗೆ ಅನುಮತಿ ಪಡೆಯುವುದನ್ನು ಕಡ್ಡಾಯ ಮಾಡಲಾಗಿದೆ. ನೀತಿ ಸಂಹಿತೆ ಉಲ್ಲಂಘನೆ ಮಾಡುವುದು ಕಂಡು ಬಂದರೆ ಕೂಡಲೇ ಪ್ರಕರಣ ದಾಖಲಿಸುತ್ತಿದ್ದಾರೆ ಎಂದರು.
ವಾಹನಗಳ ತಪಾಸಣೆಯನ್ನು ವ್ಯಾಪಕವಾಗಿ ಮಾಡಲಾಗುತ್ತಿದೆ. ದ್ವಿಚಕ್ರವಾಹನ, ಕೆ.ಎಸ್.ಆರ್.ಟಿ.ಸಿ. ಸೇರಿದಂತೆ ಎಲ್ಲಾ ವಾಹನಗಳ ತಪಾಸಣೆ ಮಾಡಲಾಗುತ್ತಿದೆ. ಅಬಕಾರಿ ಅಧಿಕಾರಿಗಳು ಎಲ್ಲೆಡೆ ತಪಾಸಣೆಯನ್ನು ಚುರುಕುಗೊಳಿಸಿದ್ದಾರೆ.  ನಿಯಮ ಮೀರಿ ಅತೀ ಕಡಿಮೆ ಪ್ರಮಾಣದಲ್ಲಿ  ಮದ್ಯ ಸಂಗ್ರಹ ಮಾಡುತ್ತಿರುವವರ ವಿರುದ್ಧ ಪ್ರಕರಣ ದಾಖಲಿಸಲಾಗುತ್ತಿದೆ.  ಹೀಗಾಗಿ ಮದ್ಯ ಮಾರಾಟ ವಹಿವಾಟು ಸಹ ಈ ಹಿಂದಿಗಿಂತ ಕಡಿಮೆ ಯಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ಚುನಾವಣೆಯಲ್ಲಿ ಅಭ್ಯರ್ಥಿಗಳು ಮಾಡುವ  ವೆಚ್ಚದ ಬಗ್ಗೆ ಮಾಹಿತಿ ನೀಡಬೇಕಾಗಿದೆ.  ಚುನಾವಣಾ ಸಂಬಂಧ ಪ್ರಚಾರ, ಸಭೆ, ಸಮಾರಂಭಗಳು, ವಾಹನಗಳು ಇನ್ನಿತರ  ಅವಶ್ಯ ಸಾಮಗ್ರಿಗಳಿಗೆ ನಿರ್ದಿಷ್ಟ ದರದಂತೆ ಲೆಕ್ಕ ನೀಡಬೇಕಿದೆ.  ಆ ಪ್ರಕಾರವೇ ಪರಿಗಣನೆಗೆ ತೆಗೆದು ಕೊಳ್ಳಲಾಗುತ್ತಿದೆ. ಪ್ರತಿ ಖರ್ಚನ್ನು ಚುನಾವಣಾ ವೆಚ್ಚ ತಂಡ ಪರಿಶೀಲಿಸಿ ಅಭ್ಯರ್ಥಿಗಳ ಲೆಕ್ಕಕ್ಕೆ ತೆಗೆದುಕೊಳ್ಳಲಿದೆ ಎಂದರು.

ಚುನಾವಣಾ ಪ್ರಕ್ರಿಯೆ ಮೇಲೆ ನಿಗಾವಹಿಸಲು ಚುನಾವಣಾ ಆಯೋಗವು ವೀಕ್ಷಕರನ್ನು ನೇಮಕಮಾಡಿದ್ದು, ಈಗಾಗಲೇ ವೀಕ್ಷಕರು ಕಾರ್ಯಾರಂಭ ಮಾಡಿದ್ದಾರೆ.  ಸಾಮಾನ್ಯ ವೀಕ್ಷಕರಾಗಿ  ಇಂದ್ರ ವಿಕ್ರಮ್ ಸಿಂಗ್ ಅವರು ಇದ್ದು, ಅವರ ಮೊಬೈಲ್ ಸಂಖ್ಯೆ 8277027322 ಆಗಿದೆ.  ಚುನಾವಣಾ ವೆಚ್ಚ ವೀಕ್ಷಕರಾಗಿ ಕೆ. ಸುಭೇಂದ್ರ  ಅವರು ಇದ್ದು,  ಅವರ ಮೊಬೈಲ್ ಸಂಖ್ಯೆ: 9405512345 ಆಗಿದೆ.  ಪೊಲೀಸ್ ಚುನಾವಣಾ ವೀಕ್ಷಕರಾಗಿ ಜಾಕೋಬ್ ಜಾಬ್ ಅವರು ಇದ್ದು ಅವರ ಮೊಬೈಲ್ ಸಂಖ್ಯೆ: 09497996949 ಆಗಿದೆ. ವೀಕ್ಷಕರ ಸ್ಥಿರ ದೂರವಾಣಿ ಸಂಖ್ಯೆಯು 08226-223830 ಮತ್ತು 223840 ಆಗಿರುತ್ತದೆ. ಸಾರ್ವಜನಿಕರು ಚುನಾವಣಾ ಸಂಬಂಧ ದೂರುಗಳು, ಅಹವಾಲುಗಳನ್ನು ಸಲ್ಲಿಸಬಹುದಾಗಿದೆ ಎಂದರು.

See also  ಕಾಸರಗೋಡು: ಬೆಂಕಿ ತಗುಲಿ ಗಂಭೀರ ಸ್ಥಿತಿಯಲ್ಲಿದ್ದ ಮಹಿಳೆ ಸಾವು

ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಕುಲದೀಪ್ ಕುಮಾರ್ ಆರ್. ಜೈನ್  ಅವರು ಮಾತನಾಡಿ ಚುನಾವಣೆಗೆ ಸಾಕಷ್ಟು ಪೊಲೀಸ್ರನ್ನು ನಿಯೋಜಿಸಲಾಗಿದೆ. ಮುಕ್ತ ಹಾಗೂ ಪಾರದರ್ಶಕ ಚುನಾವಣೆ ನಡೆಸಲು ಅಗತ್ಯ ವಿರುವ ಎಲ್ಲಾ ಕ್ರಮಗಳನ್ನು ಪೊಲೀಸ್ ಇಲಾಖೆಯಿಂದಲೂ ತೆಗೆದುಕೊಳ್ಳಲಾಗಿದೆ ಎಂದರು.ಗುಂಡ್ಲುಪೇಟೆ ವಿಧಾನ ಸಭಾ ಕ್ಷೇತ್ರದ ಚುನಾವಣಾಧಿಕಾರಿ ನಲಿನ್ ಅತುಲ್, ಸಾಮಾನ್ಯ ವೀಕ್ಷಕರಾದ  ಇಂದ್ರ ವಿಕ್ರಮ್ ಸಿಂಗ್,  ಚುನಾವಣಾ ವೆಚ್ಚ ವೀಕ್ಷಕರಾದ ಕೆ. ಸುಭೇಂದ್ರ, ಪೊಲೀಸ್ ಚುನಾವಣಾ ವೀಕ್ಷಕರಾದ ಜಾಕೋಬ್ ಜಾಬ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಕೆ. ಹರೀಶ್ ಕುಮಾರ್, ಅಬಕಾರಿ ಉಪಾಯುಕ್ತ ನಾಗೇಶ್ ಸುದ್ದಿಗೋಷ್ಟಿಯಲ್ಲಿ ಹಾಜರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು