News Kannada
Monday, October 03 2022

ಕರ್ನಾಟಕ

ನಿರುದ್ಯೋಗಿಗಳಿಗೆ ವಂಚಿಸುತ್ತಿದ್ದವನು ಸಿಕ್ಕಿಬಿದ್ದ! - 1 min read

Photo Credit :

ನಿರುದ್ಯೋಗಿಗಳಿಗೆ ವಂಚಿಸುತ್ತಿದ್ದವನು ಸಿಕ್ಕಿಬಿದ್ದ!

ಶ್ರೀರಂಗಪಟ್ಟಣ: ಖಾಸಗಿ ಕಂಪನಿಗಳಲ್ಲಿ ಕೆಲಸ ಕೊಡಿಸುವುದಾಗಿ ಹೇಳಿ ನಿರುದ್ಯೋಗಿ ಯುವಕರಿಂದ ಹಣ ವಸೂಲಿ ಮಾಡಿ ಬಳಿಕ ವಂಚಿಸುತ್ತಿದ್ದ ಆರೋಪಿಯನ್ನು ಹಿಡಿದು ಹಣ ವಸೂಲಿ ಮಾಡಿದ  ಘಟನೆ ಗಂಜಾಂನಲ್ಲಿ ನಡೆದಿದೆ.  

ತಲಕಾಡು ಮೂಲದ ನವೀನ್ ಯುವಕರಿಗೆ ವಂಚಿಸಿ ಸಿಕ್ಕಿಬಿದ್ದವನು. ಈತ ಉದ್ಯೋಗಕ್ಕಾಗಿ ಅಲೆದಾಡುವ ಯುವಕರನ್ನು ಪರಿಚಯಿಸಿಕೊಂಡು ಅವರಿಗೆ ಪ್ರತಿಷ್ಠಿತ ಖಾಸಗಿ ಕಂಪನಿಗಳಲ್ಲಿ ಉದ್ಯೋಗ ಕೊಡಿಸುವ ಬಗ್ಗೆ ಭರವಸೆ ನೀಡುತ್ತಿದ್ದನು. ಬಳಿಕ ಅವರ ಬಳಿಯಿರುವ ವಿದ್ಯಾಭ್ಯಾಸ ಮಾಡಿದ ಸರ್ಟಿಫಿಕೇಟ್ ಜೆರಾಕ್ಸ್ ಪತ್ರಗಳನ್ನು ಪಡೆದು ಇಂತಹ ಉದ್ಯೋಗಕ್ಕೆ ಇಂತಿಷ್ಟು ಹಣ ಎಂದು ಹೇಳಿ ಯುವಕರಿಗೆ ಆಸೆ ಹುಟ್ಟಿಸಿ ಅವರಿಂದ ಹಣ ವಸೂಲಿ ಮಾಡಿ ನಂತರ ಆ ಕಂಪನಿಗೆ ಬಾ, ಈ ಕಂಪನಿಗೆ ಬಾ ಎಂದು ಫೋನ್ ಮೂಲಕ ಹೇಳುತ್ತಿದ್ದನಾದರೂ ಬಳಿಕ ಯುವಕರನ್ನು ಸುತ್ತಾಡಿಸಿ ನಾಪತ್ತೆಯಾಗುತ್ತಿದ್ದನು.

ಹೀಗೆ ಹಲವು ಯುವಕರಿಗೆ ನಾಮ ಹಾಕಿರುವ ನವೀನ್ ಯಾರಿಗೂ ಕಾಣದಂತೆ ತಲೆಮರೆಸಿಕೊಂಡು ಸುತ್ತಾಡುತ್ತಿದ್ದನು.  ಈತನಿಂದ ವಂಚನೆಗೊಳಗಾದ ಯುವಕರು ತಾವು ನೀಡಿದ ಹಣವನ್ನು ಹೇಗಾದರು ಮಾಡಿ ವಸೂಲಿ ಮಾಡಬೇಕೆಂಬ ಹಠಕ್ಕೆ ಬಿದ್ದಿದ್ದು ಅದರಂತೆ ಆತನನ್ನು ಹಿಡಿಯುವ ಪ್ರಯತ್ನ ಮಾಡಿ, ನವೀನ್ ಗೆ ಬೇರೆ ಯುವಕನಿಂದ ಕೆಲಸಕ್ಕೆಂದು ದೂರವಾಣಿ ಮೂಲಕ ಕರೆ ಮಾಡಿಸಿ ಶ್ರೀರಂಗಪಟ್ಟಣಕ್ಕೆ ಕರೆಯಿಸಿಕೊಂಡು, ಆತ ಹಣ ಪಡೆಯುವುದನ್ನು ಮೊಬೈಲ್ ಮೂಲಕ ಚಿತ್ರಿಸಿಕೊಂಡು ಹಣ ಪಡೆಯುತ್ತಿದ್ದ ವೇಳೆ ಯುವಕರು ಆತನ ಸುತ್ತುವರೆದು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಆ ನಂತರ  ಗಂಜಾಂನ ಗುಂಬಸ್ ರಸ್ತೆಯಲ್ಲಿರುವ ಫಾರಂ ಹೌಸ್ ಗೆ ಕರೆದೊಯ್ದು ತಾವು ನೀಡಿದ ಹಣವನ್ನು ವಸೂಲಿ ಮಾಡಿ ನಂತರ ಬಿಟ್ಟು ಕಳುಹಿಸಿದ್ದಾರೆ.

See also  ರಾಯಚೂರು: ಕಲ್ಲಿದ್ದಲು ಸಾಗಿಸುವ ಬೆಲ್ಟ್ ಗೆ ಸಿಲುಕಿ ಯುವಕ ದುರ್ಮರಣ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು