News Kannada
Tuesday, September 27 2022

ಕರ್ನಾಟಕ

ಸಚಿವರುಗಳು ಮೊಕ್ಕಾಂ ಹೂಡಿದ್ರೆ ಪ್ರತಿಭಟನೆ: ರೇಣುಕಾಚಾರ್ಯ ಎಚ್ಚರಿಕೆ - 1 min read

Photo Credit :

ಸಚಿವರುಗಳು ಮೊಕ್ಕಾಂ ಹೂಡಿದ್ರೆ ಪ್ರತಿಭಟನೆ: ರೇಣುಕಾಚಾರ್ಯ ಎಚ್ಚರಿಕೆ

ಗುಂಡ್ಲುಪೇಟೆ: ರಾಜ್ಯದಲ್ಲಿ ಭೀಕರ ಬರಗಾಲ ಆವರಿಸಿ ಜನಜಾನುವಾರುಗಳು ಸಾಯುತ್ತಿದ್ದರೆ, ಅವರ ಸಮಸ್ಯೆಗೆ ಸ್ಪಂದಿಸದೆ ಸಚಿವರುಗಳು ಚುನಾವಣಾ ಕ್ಷೇತ್ರಗಳಲ್ಲಿ ಬೀಡುಬಿಟ್ಟರೆ ಅದನ್ನು ವಿರೋಧಿಸಿ ಬಿಜೆಪಿ ಪ್ರತಿಭಟನೆ ನಡೆಸಲಿದೆ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಎಚ್ಚರಿಕೆ ನೀಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲೆಡೆ ಭೀಕರ ಬರಗಾಲ ಆವರಿಸಿದೆ ಹೀಗಿರುವಾಗ ಜಿಲ್ಲಾ ಉಸ್ತುವಾರಿ ಸಚಿವರುಗಳು ರಾಜ್ಯಸರ್ಕಾರದಿಂದ ಹೆಚ್ಚಿನ ಅನುದಾನ ಬಿಡುಗಡೆ ಮಾಡಿಸಿ ರೈತರ ನೆರವಿಗೆ ಧಾವಿಸಬೇಕು. ಆದರೆ ಅದನ್ನು ಬಿಟ್ಟು ಚುನಾವಣೆಯಲ್ಲಿ ತೊಡಗಿಸಿಕೊಂಡು ಇಲ್ಲಿಯೇ ಮೊಕ್ಕಾಂ ಹೂಡಿದರೆ ಪ್ರತಿಭಟನೆ ನಡೆಸುವುದು ಅನಿವಾರ್ಯವಾಗಲಿದೆ ಎಂದು ಹೇಳಿದರು.  

ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರವರ ಬಗ್ಗೆ ಕಾಂಗ್ರೇಸ್ ಮುಖಂಡರಿಗೆ ಮಾತನಾಡುವ ನೈತಿಕ ಹಕ್ಕಿಲ್ಲ ಎಂದ ಅವರು ಬಿಜೆಪಿ ಅಧಿಕಾರವಿದ್ದಾಗ ಜಿಲ್ಲೆಗೆ ನಾನು ಉಸ್ತುವಾರಿ ಸಚಿವನಾಗಿದ್ದೆ  ಮಹದೇವಪ್ರಸಾದ್ ಶಾಸಕರಾಗಿದ್ದರು. ಆದರೆ ಯಾವುದೇ ರೀತಿಯ ಬೇದಭಾವ, ತಾರತಮ್ಯ ಮಾಡದೆ ಕ್ಷೇತ್ರದ ಅಭಿವೃದ್ದಿಗೆ ಹೆಚ್ಚಿನ ಅನುದಾನ ನೀಡಿ ಶ್ರಮಿಸಿದ್ದೇನೆ ಎಂದರು.

ಮಹದೇವಪ್ರಸಾದ್ ಬದುಕಿರುವವರೆಗೆ ಕುಟುಂಬ ರಾಜಕಾರಣಕ್ಕೆ ಆಸ್ಪದ ನೀಡಿರಲಿಲ್ಲ ಅವರ ಆತ್ಮಸಾಕ್ಷಿಗೆ ವಿರೋಧವಾಗಿ ಕಾಂಗ್ರೆಸ್ ಅಭ್ಯಥರ್ಥಿ ಗೀತಾಮಹದೇವಪ್ರಸಾದ್ ಚುನಾವಣೆಗೆ ನಿಂತಿದ್ದಾರೆ. ಏಕೆ ಕಾಂಗ್ರೆಸ್ ನಲ್ಲಿ ಯಾರೂ ಪ್ರಭಾವಿ ಮುಖಂಡರಿಲ್ಲವೆ? ಯಾರೂ ಸೂಕ್ತ ಅಭ್ಯರ್ಥಿ ಸಿಗದ ಕಾರಣ ಅವರನ್ನು ಗೀತಾರನ್ನು ಬಲಿಪಶುಮಾಡಲು ಸೂತಕದ ಮನೆಯಲ್ಲಿ ಅಭ್ಯರ್ಥಿ ಘೋಷಿಸಿದ್ದಾರೆ ಎಂದು ವ್ಯಂಗ್ಯವಾಡಿದರು.

See also  ಲೆ.ಜನರಲ್ ಪಟ್ಟಚೆರುವಂಡ ಚಂಗಪ್ಪ ತಿಮ್ಮಯ್ಯಗೆ ಹುಟ್ಟೂರಿನಲ್ಲಿ ಹೃದಯಸ್ಪರ್ಶಿ ಸನ್ಮಾನ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು