News Kannada
Friday, September 30 2022

ಕರ್ನಾಟಕ

ಅನುದಾನಕ್ಕಾಗಿ ಒತ್ತಾಯ: ಆಡಳಿತ ಪಕ್ಷದ ಸದಸ್ಯೆಯಿಂದಲೇ ನಗರಸಭೆ ವಿರುದ್ಧ ಪ್ರತಿಭಟನೆ - 1 min read

Photo Credit :

ಅನುದಾನಕ್ಕಾಗಿ ಒತ್ತಾಯ: ಆಡಳಿತ ಪಕ್ಷದ ಸದಸ್ಯೆಯಿಂದಲೇ ನಗರಸಭೆ ವಿರುದ್ಧ ಪ್ರತಿಭಟನೆ

ಮಡಿಕೇರಿ: ತಮ್ಮ ವಾರ್ಡ್ ಗೆ ಅಭಿವೃದ್ಧಿ ಕಾರ್ಯಗಳಿಗೆ ಕನಿಷ್ಠ 40 ಲಕ್ಷ ರೂ. ಅನುದಾನ ನೀಡಬೇಕೆಂದು ಒತ್ತಾಯಿಸಿ ನಗರಸಭೆಯ ಆಡಳಿತ ಪಕ್ಷ ಕಾಂಗ್ರೆಸ್ ನ ಸದಸ್ಯರಾದ ಲೀಲಾ ಶೇಷಮ್ಮ ನಗರಸಭಾ ಕಛೇರಿ ಎದುರು ಪ್ರತಿಭಟನೆ ನಡೆಸಿದರು.

ಅನುದಾನ ಹಂಚಿಕೆಯಲ್ಲಿ ತಾರತಮ್ಯವಾಗಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು. ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸೇರಿದ ತಮ್ಮ 7ನೇ ವಾರ್ಡ್ ಗೆ ನಗರರೋತ್ಥಾನದ 3ನೇ ಹಂತದಲ್ಲಿ ಹೆಚ್ಚಿನ ಅನುದಾನ ನೀಡದೆ ಅನ್ಯಾಯ ಮಾಡಲಾಗಿದೆ. ನಗರೋತ್ಥಾನ ಹಾಗೂ ಸಾಮಾನ್ಯ ಅನುದಾನದಡಿ ತಲಾ 14 ಲಕ್ಷ ರೂ.ಗಳನ್ನು ಮಾತ್ರ ಮೀಸಲಿಡಲಾಗಿದೆ. 7ನೇ ವಾರ್ಡ್ ನಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸೇರಿದ 40ಕ್ಕೂ ಹೆಚ್ಚಿನ ಕುಟುಂಬಗಳಿದ್ದು, ಸೌಲಭ್ಯ ವಂಚಿತರಾಗಿದ್ದಾರೆ. ರಸ್ತೆ ಚರಂಡಿ, ತಡೆಗೋಡೆ ನಿರ್ಮಾಣವಾಗಬೇಕಾಗಿದ್ದು, ನಗರಸಭೆ ನೀಡುತ್ತಿರುವ ಅಲ್ಪ ಮೊತ್ತದ ಅನುದಾನದಿಂದ ಯಾವುದೇ ಕಾಮಗಾರಿಯನ್ನು ಪೂರ್ಣಗೊಳಿಸಲು ಸಾಧ್ಯವಿಲ್ಲವೆಂದು ಲೀಲಾಶೇಷಮ್ಮ ಗಮನ ಸೆಳೆದರು.

ಏಳನೇ ವಾರ್ಡ್ ನ್ನು ನಿರ್ಲಕ್ಷಿಸುತ್ತಿರುವುದರಿಂದ ಸ್ಥಳೀಯ ನಿವಾಸಿಗಳು ತಮ್ಮ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಕನಿಷ್ಠ 40 ಲಕ್ಷ ರೂ. ಅನುದಾನ ನೀಡದಿದ್ದಲ್ಲಿ ತಮ್ಮ ನಗರಸಭಾ ಸದಸ್ಯ ಸ್ಥಾನಕ್ಕೆ ರಾಜಿನಾಮೆ ನೀಡುವುದಾಗಿ ಎಚ್ಚರಿಕೆ ನೀಡಿದರು.

ಸ್ಥಳಕ್ಕೆ ಆಗಮಿಸಿದ ನಗರಸಭಾ ಅಧ್ಯಕ್ಷರಾದ ಕಾವೇರಮ್ಮ ಸೋಮಣ್ಣ, ಉಪಾಧ್ಯಕ್ಷರಾದ ಟಿ.ಎಸ್.ಪ್ರಕಾಶ್, ಸ್ಥಾಯಿ ಸಮಿತಿ ಅಧ್ಯಕ್ಷರಾದ ಕೆ.ಎಸ್. ರಮೇಶ್ ಹಾಗೂ ಪೌರಾಯುಕ್ತರಾದ ಬಿ.ಶುಭ ಅವರು ಲೀಲಾಶೇಷಮ್ಮ ಅವರ ಮನವೊಲಿಸುವ ಪ್ರಯತ್ನ ಮಾಡಿದರು. ಆದರೆ, ಸ್ಥಳದಲ್ಲೆ ಸಮಸ್ಯೆ ಬಗೆಹರಿಸುವಂತೆ ಲೀಲಾ ಶೇಷಮ್ಮ ಪಟ್ಟು ಹಿಡಿದರು. ಸುಮಾರು 35 ಲಕ್ಷಕ್ಕೂ ಅಧಿಕ ಅನುದಾನವನನ್ನು ನೀಡುವ ಭರವಸೆ ನೀಡಿದ ನಂತರ ಲೀಲಾ ಶೇಷಮ್ಮ ಪ್ರತಿಭಟನೆಯಿಂದ ಹಿಂದೆ ಸರಿದರು.

ದೇಶಪ್ರೇಮಿ ಯುವಕ ಸಂಘದ ಪ್ರಮುಖ ಅರುಣ್ ಶೆಟ್ಟಿ ಕೂಡ ಪ್ರತಿಭಟನೆಗೆ ಬೆಂಬಲ ಸೂಚಿಸಿದರು.

See also  ಲಾಕ್‌ ಡೌನ್‌ ನಿಂದ ನಮ್ಮ ಮೆಟ್ರೋಗೆ 904 ಕೋಟಿ ರೂ ನಷ್ಟ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು