News Kannada
Sunday, October 02 2022

ಕರ್ನಾಟಕ

ಗರ್ಭದಲ್ಲಿ ಶಿಶುವಿನ ಮರಣ: ಜಿಲ್ಲಾಸ್ಪತ್ರೆ ವಿರುದ್ಧ ಅಸಮಾಧಾನ - 1 min read

Photo Credit :

ಗರ್ಭದಲ್ಲಿ ಶಿಶುವಿನ ಮರಣ: ಜಿಲ್ಲಾಸ್ಪತ್ರೆ ವಿರುದ್ಧ ಅಸಮಾಧಾನ

ಮಡಿಕೇರಿ: ಗರ್ಭಿಣಿ ಮಹಿಳೆಯೊಬ್ಬರನ್ನು ಜಿಲ್ಲಾಸ್ಪತ್ರೆಯಲ್ಲಿ ದಾಖಲಿಸಿಕೊಳ್ಳಲು ವೈದ್ಯರು ಹಾಗೂ ಸಿಬ್ಬಂದಿ ವರ್ಗ ವಿಳಂಬ ಧೋರಣೆ ತೋರಿದ ಕಾರಣ ಹೊಟ್ಟೆಯಲ್ಲೇ ಶಿಶು ಮೃತಪಟ್ಟಿದೆ ಎಂದು ಕುಟುಂಬ ವರ್ಗ ಜಿಲ್ಲಾಸ್ಪತ್ರೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿರುವ ಪ್ರಕರಣ ನಡೆದಿದೆ.

ಮರಗೋಡು ನಿವಾಸಿ ಪ್ರಭಾಕರ್ ಎಂಬುವವರ ಪತ್ನಿ ಸುಮಾ ಗರ್ಭಿಣಿಯಾಗಿದ್ದು, ನಗರದ ಖಾಸಗಿ ಕ್ಲೀನಿಕ್ ನಲ್ಲಿ ಪರೀಕ್ಷೆ ಮಾಡಿಸಿಕೊಳ್ಳುತ್ತಿದ್ದರು. ಭಾನುವಾರ ಸುಮಾ ಅವರು ಪರೀಕ್ಷೆಗೆಂದು ಕ್ಲಿನೀಕ್ ಗೆ ತೆರಳಿದ ಸಂದರ್ಭ ಅಲ್ಲಿನ ವೈದ್ಯರು ಹೊಟ್ಟೆಯಲ್ಲಿ ನೀರು ತುಂಬಿರುವುದರಿಂದ ಜಿಲ್ಲಾಸ್ಪತ್ರೆಯಲ್ಲಿ ದಾಖಲಾಗುವಂತೆ ಸೂಚಿಸಿದರು ಎನ್ನಲಾಗಿದೆ.

ತಕ್ಷಣ ಸುಮಾ ಅವರನ್ನು ಜಿಲ್ಲಾಸ್ಪತ್ರೆಗೆ ಕರೆತಂದಾಗ ಜಿಲ್ಲಾಸ್ಪತ್ರೆಯ ವೈದ್ಯರೊಬ್ಬರು ಖಾಸಗಿ ಆಸ್ಪತ್ರೆಯಲ್ಲಿ ಸ್ಕ್ಯಾನಿಂಗ್ ಮಾಡುವಂತೆ ಸೂಚಿಸಿದ್ದಾರೆ. ಭಾನುವಾರ ರಜೆ ದಿನವಾಗಿರುವುದರಿಂದ ನಗರದಲ್ಲಿ ಸ್ಕ್ಯಾನಿಂಗ್ ಮಾಡಲು ಸಾಧ್ಯವಾಗಿರಲಿಲ್ಲ. ಈ ಬಗ್ಗೆ ಕುಟುಂಬಸ್ಥರು ನಗರದಲ್ಲಿರುವ ಸ್ಕ್ಯಾನಿಂಗ್ ಸೆಂಟರ್ ಗಳಲ್ಲಿ ವಿಚಾರಿಸಿ ಬಂದಿದ್ದರು. ಆದರೆ ಬೆಳಗ್ಗೆ 10 ಗಂಟೆ ಸುಮಾರಿಗೆ ಜಿಲ್ಲಾಸ್ಪತ್ರೆಗೆ ಬಂದಿದ್ದರೂ ಸಂಜೆ 4 ಗಂಟೆಯವರೆಗೆ ಸುಮಾ ಅವರನ್ನು ದಾಖಲಿಸಿಕೊಳ್ಳದೆ ಹೊರಗೆ ಕೂರಿಸಿದ್ದರು ಎಂದು ಕುಟುಂಬಸ್ಥರಾದ ರಾಜೇಶ್ ಆರೋಪಿಸಿದ್ದಾರೆ.

4.45 ಗಂಟೆ ಬಳಿಕ ಆಸ್ಪತ್ರೆಗೆ ದಾಖಲಿಸಿಕೊಂಡ ವೈದ್ಯರು ಮತ್ತು ಸಿಬ್ಬಂದಿ ವರ್ಗ ಪರೀಕ್ಷೆ ನಡೆಸಿ, ನಿನ್ನ ಶಿಶು ಸತ್ತು ಹೋಗಿದೆ ಎಂದು ತಿಳಿಸಿದ್ದಾರೆ. ಜಿಲ್ಲಾಸ್ಪತ್ರೆಯ ನಿರ್ಲಕ್ಷ್ಯವೇ ಶಿಶುವಿನ ಸಾವಿಗೆ ಕಾರಣವೆಂದು ಆರೋಪಿಸಿರುವ ಕುಟುಂಬಸ್ಥರು ಬೆಳಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಗರ್ಭಿಣಿ ಮಹಿಳೆಯೊಬ್ಬರನ್ನು ದಾಖಲಿಸಿಕೊಳ್ಳದಿರುವುದು ಅಮಾನವೀಯ ವರ್ತನೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ವೈದ್ಯರ ನಿರ್ಲಕ್ಷ್ಯವೇ ಶಿಶುವಿನ ಸಾವಿಗೆ ಕಾರಣವೆಂದು ಸುಮಾ ಅವರ ಕುಟುಂಬದ ಸದಸ್ಯರು ಆರೋಪಿಸಿದರೆ ಜಿಲ್ಲಾ ಆಸ್ಪತ್ರೆ ಇದನ್ನು ಅಲ್ಲಗಳೆದಿದೆ. ಸ್ಪಷ್ಟೀಕರಣ ನೀಡಿರುವ ಜಿಲ್ಲಾ ಸರ್ಜನ್ ಡಾ.ಅಬ್ದುಲ್ ಅಝೀಜ್, ಹೊಟ್ಟೆಯಲ್ಲಿ ಮಗುವಿನ ಚಲನ ವಲನವಿಲ್ಲವೆಂದು ಸುಮಾ ಅವರು ಆಸ್ಪತ್ರೆಗೆ ಆಗಮಿಸಿದ್ದರು. ಈ ಸಂದರ್ಭ ಪರೀಕ್ಷೆಗೆ ಒಳಪಡಿಸಿದಾಗ ಶಿಶು ಹೊಟ್ಟೆಯಲ್ಲಿ ಮೃತಪಟ್ಟಿರುವುದು ಕಂಡು ಬಂತು. ಜಿಲ್ಲಾ ಆಸ್ಪತ್ರೆಯಲ್ಲಿ ವೈದ್ಯರ ಕೊರತೆಯಿರುವುದರಿಂದ ಸ್ಕ್ಯಾನಿಂಗ್ ಮಾಡಲು ಸಾಧ್ಯವಾಗಲಿಲ್ಲವೆಂದು ಸ್ಪಷ್ಟಪಡಿಸಿದರು.

6 ತಿಂಗಳಿನಿಂದ ಸ್ಕ್ಯಾನಿಂಗ್ ಘಟಕಕ್ಕೆ ಬೀಗ:
ಜಿಲ್ಲಾ ಆಸ್ಪತ್ರೆಯಲ್ಲಿ ವೈದ್ಯರ ಕೊರತೆಯ ಸಮಸ್ಯೆಯಿಂದಾಗಿ ರೋಗಿಗಳು ಅತಂತ್ರ ಪರಿಸ್ಥಿತಿಯನ್ನು ಅನುಭವಿಸುತ್ತಿದ್ದು, ಸ್ಕ್ಯಾನಿಂಗ್ ಘಟಕಕ್ಕೆ ಅಗತ್ಯವಿರುವ ವೈದ್ಯರು ಲಭ್ಯವಿರದೆ ರೋಗಿಗಳು ಖಾಸಗಿ ಆಸ್ಪತ್ರೆಗಳನ್ನು ಅವಲಂಬಿಸಬೇಕಾಗಿದೆ.

ಮಡಿಕೆೇರಿಯಲ್ಲಿರುವ ಜಿಲ್ಲಾ ಆಸ್ಪತ್ರೆಗೆ ಪ್ರತಿದಿನ ನೂರಾರು ರೋಗಿಗಳು ಚಿಕಿತ್ಸೆಗೆಂದು ಆಗಮಿಸುತ್ತಾರೆ. ಇವರುಗಳಲ್ಲಿ ಮಹಿಳಾ ರೋಗಿಗಳ ಸಂಖ್ಯೆ ಹೆಚ್ಚು ಇದ್ದು, ಹೆರಿಗೆ ಮತ್ತು ಗರ್ಭಕೋಶದ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಸ್ಲ್ಯಾನಿಂಗ್ ಅಗತ್ಯವಾಗಿದೆ. ಆದರೆ, ಆರು ತಿಂಗಳ ಹಿಂದೆ ಸ್ಕ್ಯಾನಿಂಗ್ ಘಟಕದ ವೈದ್ಯರು ಸ್ವಯಂ ನಿವೃತ್ತಿ ಹೊಂದಿರುವುದರಿಂದ ವೈದ್ಯರ ನೆೇಮಕವಾಗದೆ ಸ್ಕ್ಯಾನಿಂಗ್ ಘಟಕದ ಕಾರ್ಯ ಸ್ಥಗಿತಗೊಂಡಿದೆ.

ಸ್ಕ್ಯಾನಿಂಗ್ ಘಟಕಕ್ಕೆ ಬೀಗ ಜಡಿಯಲಾಗಿದ್ದು, ತುರ್ತು ಪರಿಸ್ಥಿತಿಗಳಲ್ಲಿ ರೋಗಿಗಳು ಪ್ರಾಣ ಉಳಿಸಿಕೊಳ್ಳುವುದೆ ಕಷ್ಟಕರವಾಗಿದೆ. ಸ್ಕ್ಯಾನಿಂಗ್ ಗಾಗಿ ಖಾಸಗಿ ಆಸ್ಪತ್ರೆಗಳನ್ನೆ ಅವಲಂಬಿಸಬೇಕಾಗಿದ್ದು, ಬಡ ರೋಗಿಗಳು ಸಂಕಷ್ಟವನ್ನು ಎದುರಿಸಬೇಕಾಗಿದೆ. ಈ ಬಗ್ಗೆ ಸ್ಪಷ್ಟೀಕರಣ ನೀಡಿರುವ ಜಿಲ್ಲಾ ಸರ್ಜನ್ ಡಾ. ಅಬ್ದುಲ್ ಅಝೀಜ್, ಕಳೆದ ಆರು ತಿಂಗಳಿನಿಂದ ಸ್ಕ್ಯಾನಿಂಗ್ ಘಟಕಕ್ಕೆ ವೈದ್ಯರು ಬರುತ್ತಿಲ್ಲವೆಂದು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

See also  ಕನ್ನಡ ಶಾಲೆಗಳನ್ನು ಕಸಾಪ ದತ್ತು ಪಡೆಯಲಿ: ಶೋಭಾ ಸುಬ್ಬಯ್ಯ

ಇಲ್ಲಿಯವರೆಗೆ 11 ಬಾರಿ ವೈದ್ಯರ ಆಯ್ಕೆಗಾಗಿ ಅರ್ಜಿ ಆಹ್ವಾನಿಸಲಾಗಿದ್ದು, ಯಾರು ಕೂಡ ಹುದ್ದೆಯನ್ನರಸಿ ಬಂದಿಲ್ಲ. 12ನೇ ಸಂದರ್ಶನವನ್ನು ಏಪ್ರಿಲ್ 7 ಕ್ಕೆ ನಿಗದಿಪಡಿಸಲಾಗಿದ್ದು, ವೈದ್ಯರು ಬರುತ್ತಾರೆಯೆ ಎಂಬುವುದನ್ನು ಕಾದು ನೋಡಬೇಕಾಗಿದೆ ಎಂದು ತಿಳಿಸಿದರು. ಸ್ಕ್ಯಾನಿಂಗ್ ಘಟಕಕ್ಕೆ ಒಬ್ಬರು ವೈದ್ಯರು ಮತ್ತು ಇಬ್ಬರು ಸಹಾಯಕರ ಅಗತ್ಯವಿದೆ. ಒಬ್ಬರು ವೈದ್ಯರನ್ನಷ್ಟೆ ನಿಯೋಜಿಸಿಕೊಂಡರೆ ಒತ್ತಡ ಹೆಚ್ಚಾಗಲಿದೆ ಎಂದ ಡಾ.ಅಬ್ದುಲ್ ಅಝೀಜ್, ವೇತನ ಕಡಿಮೆ ಇರುವ ಕಾರಣ ಇತ್ತೀಚಿನ ದಿನಗಳಲ್ಲಿ ಸರ್ಕಾರಿ ಸೇವೆಯಲ್ಲಿ ಕಾರ್ಯನಿರ್ವಹಿಸಲು ವೈದ್ಯರು ಮುಂದೆ ಬರುತ್ತಿಲ್ಲವೆಂದು ಅಭಿಪ್ರಾಯಪಟ್ಟರು.

ವೈದ್ಯರ ನೇಮಕಕ್ಕಾಗಿ ನಮ್ಮ ಪ್ರಯತ್ನ ನಾವು ಮಾಡುತ್ತಿದ್ದು, ಈ ಬಗ್ಗೆ ಜನಪ್ರತಿನಿಧಿಗಳಿಗೆ ತಿಳಿದಿದೆ ಎಂದರು. ಒಟ್ಟಿನಲ್ಲಿ ಜಿಲ್ಲಾ ಆಸ್ಪತ್ರೆಯಲ್ಲಿ ವೈದ್ಯರ ಹುದ್ದೆಗಳು ತುಂಬದೇ ಇರುವುದರಿಂದ ಬಡ ರೋಗಿಗಳು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಫೋಟೋ :: ಸ್ಕ್ಯಾನಿಂಗ್

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು