News Kannada
Saturday, October 01 2022

ಕರ್ನಾಟಕ

ಸ್ಮಶಾನ ಜಾಗದಲ್ಲಿ ವಾಣಿಜ್ಯ ಮಳಿಗೆ ನಿರ್ಮಾಣಕ್ಕೆ ವಿರೋಧ - 1 min read

Photo Credit :

ಸ್ಮಶಾನ ಜಾಗದಲ್ಲಿ ವಾಣಿಜ್ಯ ಮಳಿಗೆ ನಿರ್ಮಾಣಕ್ಕೆ ವಿರೋಧ

ಕೆ.ಆರ್.ಪೇಟೆ: ಪಟ್ಟಣದ ಮುಖ್ಯ ರಸ್ತೆಯಲ್ಲಿರುವ ಮುಸ್ಲಿಂ ಸಮಾಜದ ಸ್ಮಶಾನದಲ್ಲಿ ಅಕ್ರಮವಾಗಿ ಜಾಮಿಯಾ ಮಸೀದಿ ಸಮಿತಿ ಪದಾಧಿಕಾರಿಗಳು ಲಕ್ಷಾಂತರ ಮೌಲ್ಯದ 30*50 ಅಳತೆಯ ಸ್ಮಶಾನದ ಭೂಮಿಯನ್ನೇ ಮುಚ್ಚಿ ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಲು ಕಾಮಗಾರಿ ನಡೆಸುತ್ತಿರುವುದು ಸಾರ್ವಜನಿಕರಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಸ್ಮಶಾನ, ಗುಂಡುತೋಪು, ಕೆರೆ-ಕಟ್ಟೆ ಒತ್ತುವರಿ ಮಾಡಿಕೊಂಡು ಬೇರೆ ಉದ್ದೇಶಗಳಿಗೆ ಬಳಕೆ ಮಾಡುವುದನ್ನು ಸುಪ್ರೀಂ ಕೋರ್ಟ್ ನಿಷೇಧಿಸಿದ್ದರೂ ಸಹ ಸ್ಮಶಾನ ಭೂಮಿಯನ್ನು ವಾಣಿಜ್ಯ ಉದ್ದೇಶಕ್ಕೆ ಬಳಕೆ ಮಾಡುತ್ತಿರುವುದನ್ನು ಸಾರ್ವಜನಿಕರು ಉಗ್ರವಾಗಿ ಖಂಡಿಸಿದ್ದಾರೆ.

ಕಾನೂನು ಬಾಹಿರವಾಗಿ ಸ್ಮಶಾನ ಪೂರ್ವ ಭಾಗವು ಮುಖ್ಯ ರಸ್ತೆಗೆ ಹೊಂದಿಕೊಂಡಂತೆ ಇರುವ ಕಾರಣ ಜಾಮೀಯ  ಮಸೀದಿಯ ಪದಾಧಿಕಾರಿಗಳು ವಾಣಿಜ್ಯ ಮಳಿಗೆ ನಿರ್ಮಿಸಿ ಆದಾಯ ಹೆಚ್ಚಿಸಿಕೊಳ್ಳಲು ಕಾನೂನು ಬಾಹಿರ ತೀರ್ಮಾನಕ್ಕೆ ಕೈಹಾಕಿದ್ದಾರೆ ಎನ್ನಲಾಗಿದೆ. ಇದಕ್ಕಾಗಿ ನೂರಾರು ಟ್ರ್ಯಾಕ್ಟರ್ ಗ್ರಾವೆಲ್ ಮಣ್ಣನ್ನು ತುಂಬಿ ಸ್ಮಶಾನ ಜಾಗವನ್ನು ಮುಚ್ಚುತ್ತಿದ್ದಾರೆ. ಜಾಮಿಯಾ ಮಸೀದಿ ಸಮಿತಿಯ ಅಧ್ಯಕ್ಷರೂ ಆಗಿರುವ ಕೇಂದ್ರದ ಮಾಜಿ ಸಚಿವ ಕೆ.ರೆಹಮಾನ್ಖಾನ್ ಅವರ ಹಿರಿಯ ಸಹೋದರ  ಕೆ.ಗೌಸ್ಖಾನ್ ಅವರ ನೇತೃತ್ವದಲ್ಲಿ ಪದಾಧಿಕಾರಿಗಳು ಈ ಕಾಮಗಾರಿಯನ್ನು ಅಕ್ರಮ ರಾಜಾರೋಷವಾಗಿ ಮಾಡುತ್ತಿದ್ದಾರೆ.

ತಾಲೂಕಿನ ಎಲ್ಲಾ ಮುಸ್ಲಿಂ ಸಮುದಾಯದವರನ್ನು ಇಲ್ಲಿಯೇ ಶವಸಂಸ್ಕಾರ ಮಾಡುವುದು ಇಲ್ಲಿನ ಮುಸ್ಲಿಂ ಬಂದುಗಳ ಸಂಪ್ರದಾಯವಾಗಿದೆ. ಜಿಲ್ಲೆಯಲ್ಲಿಯೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಕೆ.ಆರ್.ಪೇಟೆ ಪಟ್ಟಣವೊಂದರಲ್ಲಿಯೇ ಐದು ಸಾವಿರಕ್ಕೂ ಹೆಚ್ಚು ಮುಸ್ಲಿಮರು ವಾಸಿಸುತ್ತಿದ್ದಾರೆ.  ಈ ಜನಸಂಖ್ಯೆಗೆ ಹೋಲಿಕೆ ಮಾಡಿದರೆ ಈಗಿರುವ ಸ್ಮಶಾನ ಭೂಮಿಯು ಸಾಲದಾಗಿದೆ. ಆದರೆ ಕೆಲವು ದುರಾಸೆಯ ಪದಾಧಿಕಾರಿಗಳು ಇರುವ ಒಂದೇ ಒಂದು ಸ್ಮಶಾನ ಭೂಮಿಯಲ್ಲಿ ಅಕ್ರಮವಾಗಿ ವಾಣಿಜ್ಯ ಮಳಿಗೆಗಳನ್ನು ಪುರಸಭೆ, ವಕ್ಫ್ ಮಂಡಳಿ, ಇಲ್ಲವೇ ತಾಲೂಕು ಆಡಳಿತದ ಗಮನಕ್ಕೆ ತರದೇ ಜಾಮಿಯಾ ಮಸೀದಿ ಸಮಿತಿಯ ಸದಸ್ಯರು ಅಕ್ರಮ ಕಾಮಗಾರಿಗೆ ಮುಂದಾಗಿರುವುದು ಹಲವಾರು ಮುಸ್ಲಿಂ ಧರ್ಮನಿಷ್ಠ  ಬಂಧುಗಳು ಸೇರಿದಂತೆ ಹಿಂದೂಪರ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದೆ. ಈ ಹಿಂದೆ ಪಟ್ಟಣದ ಹೇಮಾವತಿ ಬಡಾವಣೆಯಲ್ಲಿ ಅಕ್ರಮವಾಗಿ ಪ್ರಾರ್ಥನಾ ಮಂದಿರವನ್ನು ನಿರ್ಮಿಸಿ ಹಿಂದೂಪರ ಸಂಘಟನೆಗಳ ಭಾರೀ ವಿರೋಧದಿಂದಾಗಿ ಪ್ರಾರ್ಥನಾ ಮಂದಿರವನ್ನು ತೆರವುಗೊಳಿಸಲಾಗಿತ್ತು.

ಪಟ್ಟಣದ ಸ್ಮಶಾನದಲ್ಲಿ ವಾಣಿಜ್ಯ ಮಳಿಗೆ ನಿರ್ಮಾಣಕ್ಕೆ ಮುಂದಾಗಿರುವುದಕ್ಕೆ ಜಾಮಿಯಾ ಮಸೀದಿ ಸಮಿತಿಯ ಉಪಾಧ್ಯಕ್ಷರಾದ ಉಮ್ಮರ್ಬೇಗ್ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಪಟ್ಟಣದಲ್ಲಿ ಅಕ್ರಮವಾಗಿ ಸ್ಮಶಾನ ಜಾಗದಲ್ಲಿ ನಡೆಸುತ್ತಿರುವ ಕಾಮಗಾರಿಗೆ ತಡೆ ನೀಡಿ ಪಟ್ಟಣದಲ್ಲಿ ಶಾಂತಿ ಸೌಹಾರ್ದತೆಯನ್ನು ಕಾಪಾಡುವಂತೆ ಪುರಸಭೆಯ ಮುಖ್ಯಾಧಿಕಾರಿ, ತಹಸೀಲ್ದಾರ್ ಮತ್ತು ಪೋಲಿಸರಿಗೆ ದೂರು ನೀಡಿದ್ದರೂ ಯಾವುದೇ ಕ್ರಮಕೈಗೊಳ್ಳದೇ ಅಕ್ರಮ ಕಾಮಗಾರಿಗೆ ಬೆಂಬಲ ನೀಡುತ್ತಿರುವ ತಾಲೂಕು ಆಡಳಿತದ ಕ್ರಮವನ್ನು ತೀವ್ರವಾಗಿ ಖಂಡಿಸಿದ್ದಾರೆ. ಇದು ಕಾನೂನು ಬಾಹಿರವಾದ ಚಟುವಟಿಕೆಯಾಗಿದ್ದು, ತಕ್ಷಣ ಕಾಮಗಾರಿಯನ್ನು ತಡೆ ಹಿಡಿದು ಸ್ಮಶಾನದ ಭೂಮಿಯನ್ನು ಉಳಿಸಬೇಕು. ಈ ಜಾಗದಲ್ಲಿ ಯಾವುದೇ ವಾಣಿಜ್ಯ ಮಳಿಗೆ ನಿರ್ಮಿಸಲು ಅವಕಾಶ ನೀಡಬಾರದು ಎಂದು ಜಿಲ್ಲಾಡಳಿತ ಹಾಗೂ ಜಿಲ್ಲಾ ವಕ್ಫ್ ಮಂಡಳಿಯನ್ನು ಉಮ್ಮರ್ ಬೇಗ್ ಒತ್ತಾಯಿಸಿದ್ದಾರೆ.

See also  ಪ್ರಶ್ನೆಪತ್ರಿಕೆ ಸೋರಿಕೆ: 9 ಮಂದಿ ಆರೋಪಿಗಳಿಗೆ ಸಿಸಿಬಿ ಕಸ್ಟಡಿ

 

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು