ಗುಂಡ್ಲುಪೇಟೆ: ವಿಧಾನಸಭೆ ಉಪಚುನಾವಣೆಯಲ್ಲಿ ತಮ್ಮ ಪಕ್ಷದ ಪರವಾಗಿ ಮತಯಾಚನೆ ಮಾಡಲು ಕ್ಷೇತ್ರಕ್ಕೆ ಆಗಮಿಸುತ್ತಿದ್ದ ದಿಗ್ಗಜರ ವಾಹನಗಳನ್ನು ಕಡ್ದಾಯವಾಗಿ ತಪಾಸಣೆ ಮಾಡುವ ಮೂಲಕ ಪೊಲೀಸ್ ಹಾಗೂ ಚುನಾವಣಾಧಿಕಾರಿಗಳು ತಮ್ಮ ಕರ್ತವ್ಯವನ್ನು ಸಮರ್ಪಕವಾಗಿ ನಿರ್ವಹಿಸಿದರು.
ಮೈಸೂರಿನಿಂದ ತಾಲೂಕಿನ ಹಿರಿಕಾಟಿ ಗೇಟ್ ಮೂಲಕ ಪ್ರವೇಶಿಸಿದ ವಿಧಾನ ಸಭಾಪತಿ ವೀರಣ್ಣಮತಿಘಟ್ಟಿ, ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಯ್ಲಿ, ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ, ಲೋಕಸಭೆಯ ವಿರೋಧಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಹಾಗೂ ಇತರ ಶಾಸಕರ ವಾಹನಗಳನ್ನು ತಪಾಸಣೆಗೊಳಪಡಿಸಲಾಯಿತು.
ಬೇಗೂರು ಠಾಣೆಯ ಪಿಎಸ್ಐ ಕಿರಣ್ ಕುಮಾರ್ ಹಾಗೂ ಸಿಬ್ಬಂದಿ ವಿಐಪಿ, ವಿವಿಐಪಿ ಸೇರಿದಂತೆ ಎಲ್ಲ ವಾಹನಗಳನ್ನು ಕಟ್ಟು ನಿಟ್ಟಾಗಿ ತಪಾಸಣೆ ಮಾಡುವ ಮೂಲಕ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾದರು.