News Kannada
Friday, September 30 2022

ಕರ್ನಾಟಕ

ಮತದಾರರ ಕೈಯ್ಯಲ್ಲಿದೆ ಅಭ್ಯರ್ಥಿಗಳ ಭವಿಷ್ಯ! - 1 min read

Photo Credit :

ಮತದಾರರ ಕೈಯ್ಯಲ್ಲಿದೆ ಅಭ್ಯರ್ಥಿಗಳ ಭವಿಷ್ಯ!

ಮೈಸೂರು: ನಂಜನಗೂಡು ಮತ್ತು ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಇಂದು(ಏ.9) ನಡೆಯುತ್ತಿದ್ದು, ಬೆಳಿಗ್ಗೆ 7ಗಂಟೆಯಿಂದಲೇ ಮತದಾನ ಆರಂಭವಾಗಿದ್ದು ಇಷ್ಟು ದಿನಗಳ ಕಾಲ ಮುಖ್ಯಮಂತ್ರಿಗಳು, ಸಚಿವರು, ಸಂಸದರು, ಹಿರಿಯ ಮುಖಂಡರು ಎಲ್ಲರನ್ನೂ ಹತ್ತಿರದಿಂದ ನೋಡಿದ, ಅವರ ಮಾತುಗಳನ್ನು ಕೇಳಿದ ಕ್ಷೇತ್ರದ ಪ್ರತಿ ಗ್ರಾಮಗಳ ಮತದಾರರು ಮತ ಚಲಾಯಿಸುವ ಮೂಲಕ ಅಭ್ಯರ್ಥಿಗಳ ಭವಿಷ್ಯ ಬರೆಯುತ್ತಿದ್ದಾರೆ.

ಈ ನಡುವೆ ಕಳೆದ ಕೆಲವು ದಿನಗಳಿಂದ ತಮ್ಮ ಕ್ಷೇತ್ರದಲ್ಲಿ ಬೀಡುಬಿಟ್ಟು ಮನೆಮನೆಗೆ ಆಗಮಿಸಿ, ರೋಡ್ ಶೋ ನಡೆಸಿ, ಭಾರೀ ಸಮಾವೇಶ ನಡೆಸಿ ಮತಯಾಚಿಸಿದ ನಾಯಕರು ಕ್ಷೇತ್ರದಿಂದ ಕಾಲ್ಕಿತ್ತಿದ್ದಾರೆ. ನಾಯಕರ ವಾಕ್ಸಮರ, ಪಕ್ಷ ಪಕ್ಷಗಳ ನಡುವಿನ ಆರೋಪ-ಪ್ರತ್ಯಾರೋಪ ಎಲ್ಲವನ್ನು ನೋಡಿದ ಮಂದಿ ಇದೀಗ ತಮಗೆ ಯಾರು ಬೇಕೋ ಅವರಿಗೆ ಸದ್ದಿಲ್ಲದೆ ಮತಹಾಕಿ ಮನೆಹಾದಿ ಹಿಡಿಯುತ್ತಿದ್ದಾನೆ.ಇದುವರೆಗೆ ಪಕ್ಷಗಳ ನಾಯಕರು ಯಾವೆಲ್ಲ ಲೆಕ್ಕಾಚಾರಗಳನ್ನು ಮಾಡಿಕೊಂಡಿದ್ದರೋ ಅದೆಲ್ಲವನ್ನು ತಲೆಕೆಳಗೆ ಮಾಡುವ, ತಮಗೆ ಯಾರು ಬೇಕೋ ಅವರನ್ನು ಆಯ್ಕೆ ಮಾಡುವ ಅಧಿಕಾರವನ್ನು ಹೊಂದಿರುವ ಮತದಾರರು ಅದನ್ನು ಗೌಪ್ಯವಾಗಿ ಮಾಡಿ ಬರುತ್ತಿದ್ದಾರೆ. ನಂಜನಗೂಡಿನಲ್ಲಿ ಒಟ್ಟು 236 ಮತಗಟ್ಟೆಗಳಿದ್ದು, ಇದರಲ್ಲಿ 72 ಮತಗಟ್ಟೆಗಳನ್ನು ಅತಿಸೂಕ್ಷ್ಮ ಮತಗಟ್ಟೆಗಳೆಂದು, ಗುಂಡ್ಲುಪೇಟೆಯಲ್ಲಿ 250 ಮತಗಟ್ಟೆಗಳಿದ್ದು, 33 ಸೂಕ್ಷ್ಮ ಹಾಗೂ 39 ಅತಿ ಸೂಕ್ಷ್ಮ ಮತಗಟ್ಟೆಗಳೆಂದು ಚುನಾವಣಾ ಆಯೋಗ ಗುರುತಿಸಿದೆ.ನಂಜನಗೂಡಿನಲ್ಲಿ 2,00,498, ಗುಂಡ್ಲುಪೇಟೆಯಲ್ಲಿ 2,00,862 ಮತದಾರರು ಅಭ್ಯರ್ಥಿಗಳ ರಾಜಕೀಯ ಭವಿಷ್ಯವನ್ನು ಬರೆಯಲಿದ್ದಾರೆ.

ಚುನಾವಣೆ ಸಂದರ್ಭ ಯಾವುದೇ ತೊಂದರೆಯಿಲ್ಲದೆ ನಿರ್ಭೀತಿಯಿಂದ ಮತಚಲಾಯಿಸಲು ಅನುಕೂಲವಾಗುವಂತೆ ಸೂಕ್ತ ಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದು, ನಂಜನಗೂಡಿನಲ್ಲಿ 6 ಅರೆಸೇನಾ ಪಡೆಗಳ 6 ತುಕಡಿಯೊಂದಿಗೆ 2 ಸಾವಿರ ಪೊಲೀಸರನ್ನು ಚುನಾವಣಾ ಬಂದೋಬಸ್ತ್ಗಾಗಿ ನಿಯೋಜಿಸಲಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೇರಿದಂತೆ ಡಿವೈಎಸ್ಪಿ 5, ಪಿಎಸ್ಐ 56, ಪಿಎಸ್ಐ 56, ಆರ್ಪಿಐ 1, ಎಎಸ್ಐ 167, ಹೆಡ್ ಕಾನ್ಸ್ಟೆಬಲ್ 409, ಕಾನ್ಸ್ಟೆಬಲ್ 423, ಆರ್ಎಸ್ಐ ಇಬ್ಬರು ಹಾಗೂ ಹೆಚ್ಜಿಗಳು 210 ಮಂದಿ, 55 ಸಹಾಯಕ ಸಬ್ಇನ್ಸ್ಪೆಕ್ಟರ್, 128 ಹೆಡ್ಕಾನ್ಸ್ಟೆಬಲ್, 250 ಪೊಲೀಸ್ ಕಾನ್ಸ್ಟೆಬಲ್, 365 ಸಿಪಿಎಂಎಫ್, 194 ಹೋಂಗಾರ್ಡ್ಗಳನ್ನು ನಿಯೋಜಿಸಲಾಗಿದೆ.

ನೀತಿ ಸಂಹಿತೆ ಉಲ್ಲಂಘನೆ!
ನಂಜನಗೂಡು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕಳಲೆ ಕೇಶವಮೂರ್ತಿ ಅವರು ಮುಂಜಾನೆಯೇ ತಮ್ಮ ಊರಿನ ಕಳಲೆ ಗ್ರಾಮದ ಮತಗಟ್ಟೆಗೆ ಆಗಮಿಸಿ ಮತ ಚಲಾಯಿಸುವ ಮೂಲಕ ಗಮನಸೆಳೆದಿದ್ದಾರೆ. ಆದರೆ ಇದರ ಜೊತೆಯಲ್ಲಿಯೇ ಮತಚಲಾವಣೆ ಸಂದರ್ಭ ಅವರು ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಮತಗಟ್ಟೆಯ 100 ಮೀಟರ್ ದೂರದಲ್ಲಿ ಯಾವುದೇ ಶಾಮಿಯಾನ ಹಾಕಿ ಮತಯಾಚಿಸುವುದಾಗಲೀ, ಪಕ್ಷದ ಚಿಹ್ನೆಯಿರುವ ಶಾಲು, ಬ್ಯಾಡ್ಜ್ ಬಳಸುವಂತಿಲ್ಲ. ಆದರೆ ಇಲ್ಲಿ ಸರತಿ ಸಾಲಿನಲ್ಲಿ ನಿಂತು ಮತಚಲಾಯಿಸಿದ ಕಾಂಗ್ರೆಸ್ ಅಭ್ಯರ್ಥಿ ಕಳಲೆ ಕೇಶವಮೂರ್ತಿ ಅವರು ಮತಚಲಾವಣೆ ವೇಳೆ ಪಕ್ಷದ ಚಿಹ್ನೆಯಿರುವ ಶಾಲು ಹಾಕಿಕೊಂಡಿದ್ದು ನೀತಿಸಂಹಿತೆಯ ಉಲ್ಲಂಘನೆ ಎಂದು ಹೇಳಲಾಗುತ್ತಿದ್ದು, ಚುನಾವಣಾಧಿಕಾರಿಗಳು ಯಾವ ರೀತಿಯ ಕ್ರಮ ಕೈಗೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

See also  ಯಡಿಯೂರಪ್ಪ ಮಾತ್ರ ಅವರ ಮುಂದಿನ ಕಾರ್ಯ ಕ್ರಮವನ್ನು ನಿರ್ಧರಿಸಬಹುದಿತ್ತು: ಬಸವರಾಜ ಬೊಮ್ಮಾಯಿ

ಇನ್ನು ಇಲ್ಲಿನ ಬಿಜೆಪಿ ಅಭ್ಯರ್ಥಿ ಶ್ರೀನಿವಾಸ ಪ್ರಸಾದ್ ಅವರು ಮೈಸೂರು ನಿವಾಸಿ ಆಗಿರುವುದರಿಂದ ಅವರಿಗೆ ಮತಚಲಾಯಿಸಲು ಅವಕಾಶವಿಲ್ಲವಾಗಿದೆ. ಇಲ್ಲಿ ಸುಮಾರು 11 ಮಂದಿ ಅಭ್ಯರ್ಥಿಗಳು ಕಣದಲ್ಲಿದ್ದರೂ ಮುಖ್ಯವಾಗಿ ಶ್ರೀನಿವಾಸಪ್ರಸಾದ್ ಮತ್ತು ಕಳಲೆ ಕೇಶವಮೂರ್ತಿ ಅವರ ನಡುವೆ ನೇರ ಸ್ಪರ್ಧೆ ಇದೆ. ಗುಂಡ್ಲುಪೇಟೆಯಲ್ಲಿ ಸುಮಾರು ಏಳು ಮಂದಿ ಕಣಕ್ಕಿಳಿದಿದ್ದರೂ ಬಿಜೆಪಿಯ ನಿರಂಜನ್ ಕುಮಾರ್ ಮತ್ತು ಕಾಂಗ್ರೆಸ್ ಅಭ್ಯರ್ಥಿ ಗೀತಾಮಹದೇವಪ್ರಸಾದ್ ಅವರ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. ನಿರಂಜನ್ ಕುಮಾರ್ ಅವರಿಗೆ ಇದು ಮೂರನೇ ಚುನಾವಣೆಯಾಗಿದ್ದರೆ, ಗೀತಾಮಹದೇವಪ್ರಸಾದ್ ಅವರಿಗೆ ಇದು ಮೊದಲ ಚುನಾವಣೆಯಾಗಿದೆ. ಎರಡು ಕ್ಷೇತ್ರಗಳನ್ನು ಗಮನಿಸಿದರೆ ಇಲ್ಲಿ ಇದುವರೆಗೆ ಬಿಜೆಪಿ ಖಾತೆ ತೆರೆದಿಲ್ಲ.

ಒಟ್ಟಾರೆ ಭಾರೀ ಕುತೂಹಲ ಕೆರಳಿಸಿರುವ ಚುನಾವಣೆಯ ಮತದಾನ ಆರಂಭಗೊಂಡಿದ್ದು, ಸಂಜೆ ವೇಳೆಗೆ ಮತದಾರರು ಗೌಪ್ಯ ಮತದಾನ ಮಾಡಲಿದ್ದು, ಯಾರಿಗೆ ವಿಜಯದ ಮಾಲೆಯನ್ನು ಮತದಾರರು ಕರುಣಿಸಿದ್ದಾರೆ ಎಂಬುದನ್ನು ನೋಡಲು ಏ.13ತನಕ ಕಾಯಲೇ ಬೇಕಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು