ಮೂಡಿಗೆರೆ: ದತ್ತಪೀಠವು ಹಿಂದೂಗಳಿಗೆ ಸೇರಿದ್ದೆಂದು ಎಲ್ಲಾ ನ್ಯಾಯಾಲಗಳು ವಿವಾಧತೀತವಾಗಿ ಒಪ್ಪಿಕೊಂಡಿದೆ. ಈ ಸಮಸ್ಯೆ ಬಗೆಹರಿಸಲು ರಾಜ್ಯ ಸರಕಾರಕ್ಕೆ ಸೂಚಿಸಿದ್ದು, ಈ ಹಿಂದೆ ಅಲ್ಲಿಂದ ಕಾಣೆಯಾಗಿರುವ ಹಿಂದೂ ದೇವರಗಳ ಪ್ರತಿಮೆ, ಪಾದುಕೆಗಳನ್ನು ಪುನರ್ ಸ್ಥಾಪಿಸಬೇಕು. ಗೋರಿಗಳ ತೆರವುಗೊಳಿಸಿ ಹಿಂದೂ ಅರ್ಚಕರ ನೇಮಕ ಮಾಡುವಂತೆ ವಿಎಚ್‍ಪಿ ಮತ್ತು ಭಜರಂಗದಳ ಮುಖಂಡರು ತಹಸೀಲ್ದಾರ್ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ವಿಎಚ್‍ಪಿ ತಾಲೂಕು ಅಧ್ಯಕ್ಷ ಭರತ್ ಕನ್ನಹಳ್ಳಿ ಮಾತನಾಡಿ, ದತ್ತಾತ್ರೆಯ ಪೀಠ ಜಾಗರ ಹೋಬಳಿಯ ಇನಾಂ ದತ್ತಾತ್ರೆಯ ಪೀಠ ಗ್ರಾಮದ ಸ.ನಂ. 95, 96 ರಲ್ಲಿ ಹಿಂದೂಗಳ ದೇವಸ್ಥಾನಗಳಿದ್ದು, ಸಾವಿರಾರು ವರ್ಷಗಳಿಂದ ಹಿಂದೂಗಳು ಪೂಜಿಸುತ್ತಾ ಬಂದಿದ್ದು, ಮಹಾಮದೀಯರ ಆಕ್ರಮಣಕ್ಕೆ ತುತ್ತಾಗಿ ಹಿಂದೂಗಳಿಂದ ಬಲವಂತವಾಗಿ ಕಿತ್ತುಕೊಂಡು ಅಲ್ಲಿ ಇಸ್ಲಾಂ ವಿವಾಧಿತ ಸ್ಥಳವನ್ನಾಗಿಸುವ ಹುನ್ನಾರ ನಡೆದಿತ್ತು.
ವಾಸ್ತವವಾಗಿ ಶ್ರೀ ಬಾಬಾಬುಡನ್ ಸ್ವಾಮಿ ದರ್ಗವು ಇದೇ ಗ್ರಾಮದ ನಾಗೇನಹಳ್ಳಿ ಸ.ನಂ.57ರಲ್ಲಿದೆ. ದತ್ತಪೀಠದ ವಿರೋಧಿಗಳು ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಜಿಲ್ಲಾ ನ್ಯಾಯಾಲಯದಿಂದ ಭಾರತದ ಉಚ್ಚ ನ್ಯಾಯಾಲಯದವರೆಗೆ ದಾವೆಗಳನ್ನು ಹೋಡಿದ್ದು, ಇದನ್ನು ಪರಿಶೀಲಿಸಿದ ಉಚ್ಚ ನ್ಯಾಯಾಲಯವು ಎಲ್ಲಾ ದಾವೆಗಳನ್ನು ವಜಾಗೊಳಿಸಿ ದತ್ತಪೀಠ ಹಿಂದೂಗಳದ್ದೆ. ಇದನ್ನು ರಾಜ್ಯ ಸರಕಾರ ಇತ್ಯರ್ಥಗೊಳಿಸಬೇಕೆಂದು ಆದೇಶ ನೀಡಿದ್ದರೂ ರಾಜ್ಯ ಸರಕಾರ ಇಲ್ಲಿಯವರೆಗೂ ಮೌನ ವಹಿಸಿದೆ. ಇದರಿಂದ ಹಿಂದೂಗಳನ್ನು ಕೆರಳಿಸಿ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಹುನ್ನಾರವಿದು ಎಂದು ದೂರಿದರು.