ಜನ-ಜಾನುವಾರುಗಳ ಕುಡಿಯೋ ನೀರಿನ ಸಮಸ್ಯೆಯ ಸರದಿ ಮುಗೀತು. ಇನ್ನೇನಿದ್ರು ಕಾಡು ಪ್ರಾಣಿಗಳದ್ದು. ಇಷ್ಟು ದಿನ ಬೆರಳೆಣಿಕೆಯಷ್ಟು ಕಾಡುಪ್ರಾಣಿಗಳು ನೀರನ್ನ ಅರಸಿ ನಾಡಿಗೆ ಬರ್ತಿದ್ವು. ಇನ್ಮುಂದೆ ಆ ಸಂಖ್ಯೆ ಗಣನೀಯವಾಗಿ ಏರಿಕೆಯಾದ್ರು ಆಶ್ಚರ್ಯವಿಲ್ಲ. ಯಾಕಂದ್ರೆ, ಕಾಡೊಳಗೂ ಪ್ರಾಣಿಗಳಿಗೆ ಕುಡಿಯೋಕೆ ನೀರಿಲ್ಲ.
ಇನ್ನೆರಡು ತಿಂಗಳು ಮಳೆ ಬಾರದಿದ್ರೆ ನಾಡು ಕಾಡುಪ್ರಾಣಿಗಳ ಆವಾಸ ಸ್ಥಾನವಾಗೋದ್ರಲ್ಲಿ ಎರಡು ಮಾತಿಲ್ಲ. ಕಾಫಿನಾಡಲ್ಲಿ ಜನ-ಜಾನುವಾರುಗಳ ಸ್ಥಿತಿ ಹೇಳುವಂತಿದ್ರೆ, ಪಾಪ ಕಾಡುಪ್ರಾಣಿಗಳ ಸ್ಥಿತಿ ಹೇಳತೀರದ್ದು. ಈ ಕುರಿತು ಒಂದು ವರದಿ ಇಲ್ಲಿದೇ ನೋಡಿ…
ಹೌದು..ಚಿಕ್ಕಮಗಳೂರಿನ ಕಡೂರು ತಾಲೂಕಿನ ಬಾಸೂರು ಕಾವಲ್ ಹೊರತುಪಡಿಸಿದ್ರೆ ರಾಜ್ಯದಲ್ಲಿ ಕೃಷ್ಣಮೃಗಗಳ ಸಂತತಿ ಮತ್ತೆಲ್ಲೂ ಸಿಗಲ್ಲ. 1800 ಎಕರೆಯ ಈ ಕಾವಲ್ ನಲ್ಲಿ ಕೆರೆ-ಹಳ್ಳ, ಕೊಳ್ಳಗಳು ಇದ್ವು. ಆದ್ರೆ, ದೂರಾಲೋಚನೆ ಇಲ್ಲದ ಅಧಿಕಾಗಳಿಂದ ಈ ಪ್ರಾಣಿಗಳಿಗೂ ಕುಡಿಯೋಕೆ ನೀರಿಲ್ಲ. ಇಷ್ಟು ದಿನ ಸುಮ್ಮನಿದ್ದ ಅಧಿಕಾರಿಗಳು ಇದೀಗ ಇಲ್ಲಿ 20ಕ್ಕೂ ಹೆಚ್ಚು ಕೃತಕ ಹೊಂಡಗಳನ್ನ ನಿರ್ಮಿಸಿ ಪ್ರತಿನಿತ್ಯ ಹತ್ತಾರು ಟ್ಯಾಂಕರ್ ನಲ್ಲಿ ನೀರು ತುಂಬಿಸ್ತಿದ್ದಾರೆ.
ಪ್ರಾಣಿಗಳಿಗೆ ನೈಜತೆಯಂತಿರಲು ಗುಂಡಿಯೊಳಗೆ ದುಂಡನೆಯ ಕಲ್ಲನ್ನೂ ಹಾಕಿದ್ದಾರೆ. ಆದ್ರೆ, ಜಿಲ್ಲೆಯ ಸೋಶಿಯಲ್ ಫಾರೆಸ್ಟ್ ಗಳಲ್ಲಿ ಯಾವುದೇ ನೀರಿನ ಮೂಲಗಳಿಲ್ಲ. ಇದ್ದ ನೀರಿನ ಮೂಲಗಳು ಬತ್ತಿವೆ. ನೀರನ್ನ ಅರಸಿ ಕಾಡುಪ್ರಾಣಿಗಳು ನಾಡಿನತ್ತ ಮುಖ ಮಾಡ್ತಿರೋ ಪ್ರಕರಣಗಳು ಹೆಚ್ಚಿವೆ. ಇಷ್ಟು ದಿನ ಕಾಡಿನಲ್ಲೇ ಹುಟ್ಟಿ ಹರಿಯುತ್ತಿದ್ದ ನೀರಿನ ಮೂಲಗಳಿಂದ ಕಾಡುಪ್ರಾಣಿಗಳಿಗೆ ಅಷ್ಟಾಗಿ ತೊಂದರೆಯಾಗಿರಲಿಲ್ಲ. ಆದ್ರೆ, ಕಾಡಿನ ಪರಿಸ್ಥಿತಿ ಈಗ ಮತ್ತಷ್ಟು ಶೋಚನಿಯ ಸ್ಥಿತಿ ತಲುಪಿದೆ. ದಟ್ಟಕಾನನದಿಂದ ಕೂಡಿರೋ ಹೆಬ್ಬೆ, ಮುತ್ತೋಡಿ, ಲಕ್ಕವಳ್ಳಿ, ಕೆಮ್ಮಣ್ಣುಗುಂಡಿ ಅರಣ್ಯ ವಲಯಗಳ ಸ್ಥಿತಿ ಇದಕ್ಕಿಂತ ಭಿನ್ನವಾಗಿಲ್ಲ. ಈ ನಾಲ್ಕು ವಲಯ ಅಸಂಖ್ಯಾತ ಕಾಡುಪ್ರಾಣಿಗಳಿಗೂ ಈ ಬಾರಿಯ ಭೀಕರ ಬರದ ಛಾಯೆ ತಟ್ಟಿದೆ.
ಭದ್ರಾ ಹಿನ್ನೀರಿನಲ್ಲಿ ಒಂದಷ್ಟು ನೀರಿರೋದ್ರಿಂದ ಮುತ್ತೋಡಿ ಹಾಗೂ ಲಕ್ಕವಳ್ಳಿ ವಲಯದ ಸ್ಥಿತಿ ಪರವಾಗಿಲ್ಲ. ಆದ್ರೆ, ಹೆಬ್ಬೆ ಹಾಗೂ ಕೆಮ್ಮಣ್ಣುಗುಂಡಿ ವಲಯಗಳ ಸ್ಥಿತಿ ಮತ್ತಷ್ಟು ಶೋಚನಿಯ. ಈಗಾಗ್ಲೇ ನಾಲ್ಕು ವಲಯಗಳಲ್ಲಿ ಇರೋ ಅಲ್ಪ-ಸ್ವಲ್ಪ ನೀರನ್ನ ಅಲ್ಲಲ್ಲೆ ಇಂಗು ಗುಂಡಿಗಳ ಮೂಲಕ ನೀರು ಹರಿದು ಹೋಗದಂತೆ ಕಾಪಾಡ್ತಿದ್ದಾರೆ. ನೀರು ಹೆಚ್ಚಾಗಿರೋ ಕಡೆ ಅಲ್ಲಲ್ಲೆ ನಿರ್ಮಿಸಿರೋ ಗುಂಡಿಗಳು ತುಂಬಿ ನೀರು ಹರಿಯುಂತೆ ಕ್ರಮ ಕೈಗೊಂಡಿದ್ದಾರೆ. ಆದ್ರೆ, ಮಳೆಯ ಅಭಾವ ಹೀಗೆ ಮುಂದುವರೆದು ಇನ್ನೆರಡು ತಿಂಗಳಲ್ಲಿ ಮಳೆ ಬಾರದಿದ್ರೆ ಕಾಡುಪ್ರಾಣಿಗಳ ಸ್ಥಿತಿ ಬಗ್ಗೆ ಅರಣ್ಯಾಧಿಕಾರಿಗಳೇ ಆತಂಕ ವ್ಯಕ್ತಪಡಿಸ್ತಾರೆ.
ಒಟ್ಟಾರೆಯಾಗಿ ಭೀಕರ ಬರದಿಂದ ರಾಜ್ಯಾದ್ಯಂತ ದಿನದಿಂದ ದಿನಕ್ಕೆ ಜನ-ಜಾನುವಾರುಗಳ ಸ್ಥಿತಿ ಬದಲಾಗ್ತಾ ಹೋಗ್ತಿದೆ. ಇನ್ನೆರಡು ತಿಂಗಳಲ್ಲಿ ಮಳೆ ಬಾರದಿದ್ರೆ ಜನ ಹಾಗೂ ಮೂಕ ಪ್ರಾಣಿಗಳ ಸಾವಿಗೆ ಲೆಕ್ಕವಿರಲ್ಲ. ಈ ಸರ್ಕಾರಗಳನ್ನ ನೆಚ್ಚಿಕೊಂಡ್ರೆ ಆಗೋಲ್ಲ. ರಾಜ್ಯವನ್ನ ದೇವರೇ ಕಾಪಾಡ್ಬೇಕು…