News Kannada
Wednesday, October 05 2022

ಕರ್ನಾಟಕ

ಪರಿಸರ ಜಾಗೃತಿ: ಕುಡಿಯುವ ನೀರು ಅಗತ್ಯತೆ ಅರಿಯೋಣ-ಸಂರಕ್ಷಿಸೋಣ - 1 min read

Photo Credit :

ಪರಿಸರ ಜಾಗೃತಿ: ಕುಡಿಯುವ ನೀರು ಅಗತ್ಯತೆ ಅರಿಯೋಣ-ಸಂರಕ್ಷಿಸೋಣ

ಮಡಿಕೇರಿ: ಬಿಸಿಲಿನ ತಾಪ ಏರುತ್ತಾ ಇದೆ. ಮೇ ತಿಂಗಳಿನ ಉಷ್ಣಾಂಶ ಈಗಲೇ ಬಂದ ಹಾಗೇ ಆಗಿದೆ. ಕೊಡಗಿನಲ್ಲಿ 32 ಡಿಗ್ರಿ ಸೆಲ್ಸಿಯಸ್ ಇದ್ದು, ನಗರೀಕರಣದ ಆರ್ಭಟಕ್ಕೆ ಕಾಡಿನಲ್ಲಿನ ಮರಗಳು ನಾಶವಾಗಿ ಪ್ರಕೃತಿಯ ಅಸಮತೋಲನದಿಂದ ಹವಾಮಾನ ಏರಿಳಿತಕ್ಕೆ ಮನುಷ್ಯರಾದ ನಾವು ಪ್ರತ್ಯಕ್ಷವಾಗಿಯೋ, ಪರೋಕ್ಷವಾಗಿಯೋ, ಗೊತ್ತಿದ್ದೋ ಗೊತ್ತಿಲ್ಲದೆಯೋ ಕಾರಣರಾಗಿದ್ದೇವೆ.

ಪರಿಸ್ಥಿತಿ ಹೀಗೆ ಮುಂದುವರೆದರೆ ಬರುವ ವರ್ಷಗಳಲ್ಲಿ ತಾಪಮಾನ 50 ಡಿಗ್ರಿ ಸೆಲ್ಸಿಯಸ್ ಗಡಿ ದಾಟುವುದರಲ್ಲಿ ಯಾವುದೇ ಸಂದೇಹವಿಲ್ಲ. ಮಾಹಿತಿ ಅನ್ವಯ ಕಳೆದ 10 ವರ್ಷಗಳ ಅವಧಿಯಲ್ಲಿ ಸುಮಾರು 10 ಕೋಟಿಯಷ್ಟು ಮರ ನಾಶವಾದರೂ 1 ಲಕ್ಷದಷ್ಟು ಮರ ಅಭಿವೃದ್ಧಿ ಪಡಿಸಿಲ್ಲ. ಒಂದು ಮರ ಕಡಿದುದಕ್ಕೆ ಪರ್ಯಾಯ ಒಂದು ಗಿಡ ನೆಡುವುದು. ಆದರೆ ಅದು ನಡೆಯಲಿಲ್ಲ. ನಮ್ಮ ಕೈಯಲ್ಲಿ ಆದ ತಪ್ಪನ್ನು ನಾವೇ ಸರಿಪಡಿಸಬೇಕೆ ವಿನಾ ಬೇರೆಯವರಿಂದ ಸಾಧ್ಯವಿಲ್ಲ.

ಸರ್ಕಾರದ ಹಲವಾರು ಕಾರ್ಯಕ್ರಮಗಳಲ್ಲಿ ಅದರಲ್ಲಿಯೂ ಮುಖ್ಯವಾಗಿ ವನ ಮಹೋತ್ಸವದಂತಹ ಕಾರ್ಯಕ್ರಮಗಳಲ್ಲಿ ಸಾರ್ವಜನಿಕರು ಹೆಚ್ಚಾಗಿ ತೊಡಗಿಸಿಕೊಳ್ಳುವುದು ಅನಿವಾರ್ಯ. ಇದರ ಜೊತೆಗೆ ಇತರ ಸರ್ಕಾರೇತರ ಸಂಸ್ಥೆಗಳು ಕೂಡ ಅರಣ್ಯ ಅಭಿವೃದ್ಧಿಯ ಕಡೆ ಗಮನಹರಿಸಿದ್ದು ಹೆಮ್ಮೆಯ ವಿಚಾರ. ಅದರ ಜೊತೆಗೆ ನಾಗರಿಕರಾದ ನಾವುಗಳು ಕೂಡ ಈ ಕಾರ್ಯಕ್ರಮದಲ್ಲಿ ತೊಡಗಿಸಿಕೊಳ್ಳುವ ಅನಿವಾರ್ಯತೆ ಹೆಚ್ಚಾಗಿದೆ. ಗಿಡ ನೆಡುವುದು ತುಂಬಾ ಸುಲಭ ಆದರೆ ಅದನ್ನು ಸಾಕಿ ದೊಡ್ಡದು ಮಾಡುವುದು ಒಂದು ಜವಾಬ್ದಾರಿ. ಈ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸಿ ಹೆಸರು ಮಾಡಿದವರು ಸಾಲು ಮರದ ತಿಮ್ಮಕ್ಕ.

ಪ್ರತಿಯೊಬ್ಬರೂ ಗಿಡ ನೆಡಲು ಸ್ಥಳ ಗುರುತಿಸಿ ಹೆಚ್ಚಾಗಿ ರಸ್ತೆಯ ಬದಿಯಲ್ಲಿ, ಮೈದಾನದ ಸುತ್ತ, ಪಾದರಸ್ತೆಯ ಬದಿಯಲ್ಲಿ, ಹೆದ್ದಾರಿಗಳ ಬದಿಯಲ್ಲಿ, ಹೂತೋಟ, ಹೊಲ, ಗದ್ದೆಗಳೊಂದಿಗೆ ಮನೆಯ ಸುತ್ತಲಿನ ಹಿತ್ತಲಿನಲ್ಲಿ  ಕಾಣುವ ಖಾಲಿ ಜಾಗದಲ್ಲಿ ನೀರಿನ ಲಭ್ಯತೆ ಆಧರಿಸಿ 2 ರಿಂದ 3 ಇಂಚು ಆಳದ ಸಣ್ಣ ಗುಣಿಗಳನ್ನು ಮಾಡಿ ಅದರಲ್ಲಿ ಶತಾವರಿ, ಬೇಲ್,ತುಳಸಿ, ಮಾವು, ನಿಂಬೆ, ಬೇವು, ಹಲಸಿನ ಹಣ್ಣು, ಕಿತ್ತಳೆ, ಹೀಗೆ ತರವಾರಿ ಬೀಜಗಳನ್ನು ಹಾಕಿ ಬೇಸಿಗೆ ಕಾಲದಲ್ಲಿ 2 ದಿನಕ್ಕೊಮ್ಮೆ ನೀರು ಹಾಕುವುದು. ಮಳೆಗಾಲದಲ್ಲಿ ನೀರಿನ ಅಗತ್ಯತೆ ಇರುವುದಿಲ್ಲ. ನಾಗರಿಕರಾದ ನಾವು ಇದನ್ನು ಒಂದು ರಾಷ್ಟ್ರೀಯ ಆಂದೋಲನವಾಗಿ ಪರಿಗಣಿಸುವುದು ಒಳ್ಳೆಯದು.

ಕೃಷಿ ಪ್ರಧಾನವಾದ ದೇಶ ಹಾಗೂ ಜಿಲ್ಲೆಯಲ್ಲಿ ಕೂಡ ಇದರ ಬಗ್ಗೆ ಚಿಂತನೆ ಅಗತ್ಯ. ಯಾವ ರೈತ ತಮ್ಮ ಜಮೀನನ್ನು ಖಾಲಿ ಬಿಡಲು ಇಷ್ಟ ಪಡುವುದಿಲ್ಲ. ಜಮೀನು ಹಸಿರಾಗಿದ್ದರೆನೇ ರೈತನಿಗೆ ನಿದ್ರೆ. ಆದರೆ ಏನು ಮಾಡುವುದು. ಪ್ರಕೃತಿಯ ವಿರುದ್ಧ ಹೋಗಲಾರದೆ ಜಮೀನು ಖಾಲಿ ಬಿಡಲಾಗದೆ ಸಂಕಷ್ಟದ ಪರಿಸ್ಥಿತಿ ಬಂದಿದೆ. ಆದರೂ ನಿಭಾಯಿಸಲೇ ಬೇಕು. ಇಷ್ಟು ವರ್ಷಗಳು ಕೂಡ ಇಂತಹ ಪರಿಸ್ಥಿತಿಯನ್ನು ನಮ್ಮ ರೈತರು ಸವಲಾಗಿ ಸ್ವೀಕರಿಸಿ ಯಶಸ್ವಿಯಾಗಿ ಎದುರಿಸಿದ್ದಾರೆ. ಇಲಾಖೆಗಳು, ಸಂಶೋಧನ ಕೇಂದ್ರಗಳು, ಕೃಷಿ ವಿಜ್ಞಾನಿಗಳು ಕೂಡ ಈ ಬಗ್ಗೆ ಮಾಹಿತಿ ಕೊಡುತ್ತಾ ಬಂದಿರುತ್ತಾರೆ. ಜೊತೆಗೆ ರೈತರಿಗೂ ಅವರ ಜಮೀನಿನ ಹಾಗೂ ಕೆಲಸದ ಅನುಭವ ಇರುತ್ತದೆ.

See also  ಚಿಕ್ಕಮಗಳೂರು: ಮರಗಳನ್ನು ಕಡಿಯದಂತೆ ಹಿರಿಯ ಅರಣ್ಯ ಅಧಿಕಾರಿಗಳ ಆದೇಶ

ಆ ಬಗ್ಗೆ ಮತ್ತೊಮ್ಮೆ ಯೋಚಿಸಿ, ಚರ್ಚಿಸಿ ಕಾರ್ಯೋನ್ಮುಖರಾಗುವುದು. ಒಂದು ಉದಾಹರಣೆಯಾಗಿ ಕೊಡಗು ಜಿಲ್ಲೆಯಲ್ಲಿ ಸಾಮಾನ್ಯವಾಗಿ ನವೆಂಬರ್ ತಿಂಗಳಿಂದ ಬೇಸಿಗೆ ಇದ್ದು ಜೂನ್ 15ರ ನಂತರ ಮಳೆಬರುವುದು ವಾಡಿಕೆ. ಹಾಗೆಯೇ ಗಿಡ ನೆಡುವ, ನಾಟಿ ಮಾಡುವ, ಕಾರ್ಯಕ್ರಮಗಳು ಸಾಮಾನ್ಯವಾಗಿ ಮೇ, ಜೂನ್ ತಿಂಗಳಿನಲ್ಲಿ ಆರಂಭಗೊಳ್ಳುತ್ತದೆ. ಹೀಗಿದ್ದರೂ ಕೂಡ ಕೆಲವು ರೈತ ಬಾಂಧವರು ಅವರ ವೈಯಕ್ತಿಕ ಆಸಕ್ತಿಯಂತೆ, ಮಾರುಕಟ್ಟೆಯ ಲಾಭ ಪಡೆಯಲು ಬೇಸಿಗೆಯಲ್ಲೂ ನಾಟಿ ಮಾಡುತ್ತಾರೆ ಇದು ತಪ್ಪಲ್ಲ. ಆದರೂ ಮೊದಲು ಅವರು ನೀರಿನ ಲಭ್ಯತೆ ಗಮನಿಸಬೇಕಾಗುತ್ತದೆ. ಒಂದೊಮ್ಮೆ ಕಾರಣಾಂತರಗಳಿಂದ ನೀರು ಸಿಗದೆ ಇದ್ದ ಸಂದರ್ಭಗಳಲ್ಲಿ ಪಕ್ಕದಿಂದ ನೀರು ತರುವ ವ್ಯವಸ್ಥೆಯಾದರೂ ಇರಬೇಕು. ಮೇಲೆ ಹೇಳಿದ ಹಾಗೆ ನೀರಿಗೆ ಪರ್ಯಾಯ ನೀರು ಮಾತ್ರ. ಅದರಲ್ಲೂ ಮಣ್ಣಿನ ಒಳಗಡೆ ಹಾಕುವ ಶುಂಠಿಯಂತಹ ಬೆಳೆಗೆ ನೀರಿನ ಅಗತ್ಯತೆ ಅತೀ ಹೆಚ್ಚು. ನೀರು ಕೊಡದೆ ಇದ್ದ ಪಕ್ಷದಲ್ಲಿ ಮಣ್ಣಿನೊಳಗಿನ ಉಷ್ಣಾಂಶ ಹೆಚ್ಚಾಗಿ ಮೊಳಕೆ ಹಾಳಗುವ ಸಂಭವ ಇರುತ್ತದೆ. ಬೆಳೆಯುವ ಪೈರು ಮೊಳಕೆಯಲ್ಲಿ ಎಂಬ ಹಾಗೆ ಮುಂದೆ ಗಿಡದ ಬೆಳವಣಿಗೆ ಕುಂಠಿತವಾಗುತ್ತದೆ. ಆದ್ದರಿಂದ ತಲೆಯಲ್ಲಿ ಹೊತ್ತಾದರೂ ನೀರು ಕೊಟ್ಟು ಉಳಿಸಿಕೊಳ್ಳಬೇಕು. ಒಮ್ಮೆ ಮೊಳಕೆ ಬಂದ ಮೇಲೆ ಬುಡಕ್ಕೆ ಹೊದಿಕೆ ಹಾಕಿ ಹಾಗೂ ಅಂಟ್ಯಿ ಟ್ರಾಫಿರೇಂಟ್ಗಳನ್ನು ಸಿಂಪಡಿಸಿವ ಮೂಲಕ ನೀರು ಕೊಡುವ ಅಂತರವನ್ನು ಕಡಿಮೆ ಮಾಡಿ ಕಾಪಾಡಬಹುದು. ಏನೇ ಆಗಲಿ ಮಣ್ಣಿನೊಳಗಿಂದ ಹೊರಗೆ ಬರಲು ನೀರಿನ ಅಗತ್ಯತೆ ಬೇಕಾಗಿದೆ.

ಹಾರ್ಟ್ ಕ್ಲಿನಿಕ್ ಮುಖಾಂತರ ಹಲವು ಮಾಹಿತಿಗಳನ್ನು ಸಮಯಾನುಸಾರ ಕೊಡುತ್ತಾ ಬಂದಿರುತ್ತೇವೆ. ಒಂದು ಹನಿ ನೀರು, ಒಂದು ಕಾಳು ಅನ್ನ ಅತೀ ಮುಖ್ಯ. ನೀರನ್ನು ಪೋಲಾಗಲು ಬಿಡಬೇಡಿ.
ನೀರಿನ ಲಭ್ಯತೆ ನೋಡಿ, ಹವಮಾನ ಏರಿಳಿತ ಗಮನಿಸಿ, ಹಿಂದಿನ ಅನುಭವ, ಮುಂದಿನ ಅನುಕೂಲ, ಹಿರಿಯರ ಹಿತವಚನ, ತೋಟಗಾರಿಕೆ ಹಾಗೂ ಇತರ ಕೃಷಿ ಸಂಬಂಧಿತ ಇಲಾಖಾ ತಜ್ಜರ ತಾಂತ್ರಿಕ ಮಾಹಿತಿಯೊಂದಿಗೆ ಬರಗಾಲವನ್ನು ಸಮರ್ಪಕವಾಗಿ ಎದುರಿಸೋಣ. ಹೆಚ್ಚಿನ ವಿವರಗಳಿಗೆ ಹಾರ್ಟ್ ಕ್ಲೀನಿಕ್ ಮಡಿಕೇರಿ ಫೋ. 9448401087 ಅವರನ್ನು ಸಂಪರ್ಕಿಸಲು ಕೋರಿದೆ. ಫೋಟೋ :: ವಾಟರ್ ಪ್ರಾಬ್ಲಂ 1, 2
 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು