ಮಡಿಕೇರಿ: ಕಳೆದ ನಾಲ್ಕು ತಿಂಗಳಿಂದ ಶಾಶ್ವತ ಸೂರಿಗಾಗಿ ಸಿದ್ದಾಪುರ ಬಳಿಯ ದಿಡ್ಡಳ್ಳಿಯಲ್ಲಿ ಗುಡಿಸಲು ಹಾಕಿಕೊಂಡು ಹೋರಾಟ ನಡೆಸುತ್ತಿರುವ ನಿರಾಶ್ರಿತ ಆದಿವಾಸಿಗಳ ಮೇಲೆ ದುಷ್ಕಮರ್ಿಗಳು ಗುಂಡಿನ ದಾಳಿ ನಡೆಸಿರುವ ಘಟನೆ ನಡೆದಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಈ ಘಟನೆಯಿಂದ ಮತ್ತೊಮ್ಮೆ ದಿಡ್ಡಳ್ಳಿ ಸುದ್ದಿಗೆ ಗ್ರಾಸವಾಗಿದೆ.
ಈಗಾಗಲೇ ದಿಡ್ಡಳ್ಳಿ ನಿರಾಶ್ರಿತರಿಗೆ ಸೂರು ಕಲ್ಪಿಸುವ ಸಂಬಂಧ ಬೆಂಗಳೂರಿನಲ್ಲಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ಇತರೆ ಸಚಿವರೊಂದಿಗೆ ಸಭೆ ನಡೆಸಿ ಕಂದಾಯ ಸಚಿವರನ್ನು ಜಿಲ್ಲೆಗೆ ಕಳುಹಿಸಿ ಅವರ ಸಮ್ಮುಖದಲ್ಲಿ ಸಮಸ್ಯೆಗೆ ಪರಿಹಾರ ಕಲ್ಪಿಸಲು ನಿದರ್ೇಶನ ನೀಡಿದ್ದು, ಇದರ ಬೆನ್ನಲ್ಲೇ ಗುಂಡಿನ ದಾಳಿ ನಡೆದಿರುವುದು ಹಲವು ಸಂಶಯಗಳಿಗೆ ಕಾರಣವಾಗಿದೆ.
ಕಳೆದ ಕೆಲವು ದಿನಗಳಿಂದ ಈ ವ್ಯಾಪ್ತಿಯಲ್ಲಿ ಮಳೆಯಾಗುತ್ತಿದ್ದು, ಗುಡಿಸಲೊಳಗೆ ನೀರು ನುಗ್ಗುತ್ತಿದ್ದು, ಕೆಸರುಮಯವಾಗಿದೆ. ಇದರಲ್ಲೇ ಜೀವನ ಸಾಗಿಸುತ್ತಿದ್ದು, ಮಳೆಯಿಂದ ರಕ್ಷಿಸಲು ಮರದ ಕೆಳಗೆ ನಿಲ್ಲುವಂತಾಗಿದೆ. ಆದರೂ ಶಾಶ್ವತ ಸೂರು ಕಲ್ಪಿಸುವ ತನಕ ಇಲ್ಲಿಂದ ಕದಲುವುದಿಲ್ಲ ಎಂದು ಪಟ್ಟು ಹಿಡಿದು ಕಳೆದ ನಾಲ್ಕು ತಿಂಗಳಿಂದ 600ಕ್ಕೂ ಅಧಿಕ ಗುಡಿಸಲುಗಳನ್ನು ಕಟ್ಟಿಕೊಂಡು ಬದುಕು ಸಾಗಿಸುತ್ತಿದ್ದಾರೆ.
ಈ ನಡುವೆ ಇಲ್ಲಿನ ಕಾಂಕ್ರಿಟ್ ರಸ್ತೆಯ ಬದಿಯಲ್ಲಿರುವ ಗುಡಿಸಲಿಗೆ ರಾತ್ರಿ ಅಂದಾಜು 10 ಗಂಟೆ ವೇಳೆ ಯಾರೋ ಅಪರಿಚಿತರು ಬೈಕಿನಲ್ಲಿ ಬಂದು ಕೋವಿಯಿಂದ ಗುಂಡು ಹಾರಿಸಿದರು ಎನ್ನಲಾಗಿದೆ. ಈ ಸಂದರ್ಭ ನಿದ್ರೆಯಲ್ಲಿದ್ದ ಕೆಲವರು ಎದ್ದು ಬಂದು ನೋಡುವಷ್ಟರಲ್ಲಿ ಬೈಕಿನಲ್ಲಿ ಬಂದ ವ್ಯಕ್ತಿ ನೇರವಾಗಿ ನಿರಾಶ್ರಿತರ ಮೇಲೆ ಗುಂಡು ಹಾರಿಸಿ ಪರಾರಿಯಾದ ಎಂದು ದಿಡ್ಡಳ್ಳಿ ನಿರಾಶ್ರಿತರಾದ ಮಣಿ, ಚಿಣ್ಣ, ಅಪ್ಪು ಸೇರಿದಂತೆ ಹಲವು ಹೇಳುತ್ತಿದ್ದಾರೆ.
ಆದರೆ ಅವರು ಹಾರಿಸಿದ ಗುಡಿಸಲಿನಲ್ಲಿ ಯಾರೂ ವಾಸ ಇಲ್ಲದಿದ್ದ ಕಾರಣ ಯಾವುದೇ ಪ್ರಾಣಹಾನಿಯಾಗಿಲ್ಲ. ಗುಂಡು ಹಾರಿಸಿದ ವ್ಯಕ್ತಿಯತ್ತ ಬೊಬ್ಬೆಹೊಡೆದುಕೊಂಡು ಓಡಿದ ಸಂದರ್ಭ ಆದರೆ ಬೆದರಿ ತಪ್ಪಿಸಿಕೊಳ್ಳುವ ಬರದಲ್ಲಿ ಆತನ ಬಳಿಯಿದ್ದ ಮದ್ದುಗುಂಡುಗಳು ನೆಲಕ್ಕೆ ಬಿದ್ದಿದ್ದು ಅದನ್ನು ಹಾಡಿಯವಾಸಿಗಳು ಪೊಲೀಸರಿಗೆ ಒಪ್ಪಿಸಿದ್ದಾರೆ.
ಬೈಕಿನಲ್ಲಿ ಬಂದ ವ್ಯಕ್ತಿ 3 ಗುಂಡುಗಳನ್ನು ನಿರಾಶ್ರಿತರ ಗುಡಿಸಿಲಿನ ಮೇಲೆ ಹಾರಿಸಿದ್ದರಿಂದ ಭಯಗೊಂಡ ಹಾಡಿವಾಸಿಗಳು ರಾತ್ರಿಯೆಲ್ಲ ನಿದ್ದೆ ಮಾಡಿ ಎಚ್ಚರವಾಗಿ ಕುಳಿತಿದ್ದರು ಎನ್ನಲಾಗಿದೆ.
ಹಾಡಿವಾಸಿಗಳು ಹೇಳುವಂತೆ ಗುಂಡು ಹಾರಿಸಿದ ದುಷ್ಕಮರ್ಿ ಜಕರ್ಿನ್ ಧರಿಸಿದ್ದು ಬೈಕ್ನ್ನೇರಿ ಹೊರಟು ಹೋಗಿದ್ದಾನೆ ಎಂದಿದ್ದಾರೆ. ಈ ಸಂಬಂಧ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಠಾಣಾಧಿಕಾರಿ ಜೆ.ಕೆ. ಸುಬ್ರಮಣ್ಯ ಹಾಗೂ ಸಿಬ್ಬಂದಿ ಸ್ಥಳಕ್ಕೆ ತೆರಳಿ ಮಾಹಿತಿ ಕಲೆ ಹಾಕಿ ತನಿಖೆ ನಡೆಸುತ್ತಿದ್ದಾರೆ.
ಹಾಡಿಯಲ್ಲಿ ಸಿಸಿ ಕ್ಯಾಮರಾ ಅಳವಡಿಸಿರುವುದರಿಂದ ಅಲ್ಲಿ ಯಾವುದಾದರೂ ದೃಶ್ಯಗಳು ದಾಖಲಾಗಿವೆಯಾ ಎಂಬುದನ್ನು ಕಲೆ ಹಾಕುತ್ತಿದ್ದಾರೆ. ಆದಿವಾಸಿ ಮುಖಂಡ ಸ್ವಾಮಿಯಪ್ಪ ಮಾತನಾಡಿ ನಿರಾಶ್ರಿತರ ಗುಡಿಸಲಿಗೆ ಗುಂಡು ಹಾರಿಸಿದ ವ್ಯಕ್ತಿಯನ್ನು ಕೂಡಲೇ ಬಂಧಿಸಬೇಕೆಂದು ಒತ್ತಾಯಿಸಿದ್ದಾರೆ