News Kannada
Thursday, September 29 2022

ಕರ್ನಾಟಕ

ಸರ್ಕಾರದ ಭರವಸೆಗಳ ಸಮಿತಿಯಿಂದ ಎತ್ತಿನಹೊಳೆ ಯೋಜನೆ ಪರಿಶೀಲನೆ - 1 min read

Photo Credit :

ಸರ್ಕಾರದ ಭರವಸೆಗಳ ಸಮಿತಿಯಿಂದ ಎತ್ತಿನಹೊಳೆ ಯೋಜನೆ ಪರಿಶೀಲನೆ

ಹಾಸನ: ವಿಧಾನಸಭೆಯ  ಸರ್ಕಾರದ ಭರವಸೆಗಳ ಸಮಿತಿಯು ಸಕಲೇಶಪುರ ತಾಲ್ಲೂಕಿನಲ್ಲಿ ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಎತ್ತಿನಹೊಳೆ ಯೋಜನೆಯ ಕಾಮಗಾರಿಗಳ ಪ್ರಗತಿ ಪರಿಶೀಲನೆ ನಡೆಸಿದೆ.

ಶಾಸಕರಾದ ರಾಜಣ್ಣ ಅವರ ಅಧ್ಯಕ್ಷತೆಯಲ್ಲಿ ಶಾಸಕರು ಹಾಗೂ ಅಧಿಕಾರಿಗಳ ತಂಡ ಸಕಲೇಶಪುರ ತಾಲೂಕಿನ ಕೆಸಗನಹಳ್ಳಿ ಗ್ರಾಮದ ಕುಂಬರಡಿ ಕಾಫಿ ಎಸ್ಟೇಟ್, ಮಾರನಹಳ್ಳಿ ಕಾಡುಮನೆ ಎಸ್ಟೇಟ್, ಹೆಬ್ಬಸಾಲೆಯಲ್ಲಿ  ಹೇಮಾವತಿ ಸೇತುವೆ ಕಾಮಗಾರಿ ವೀಕ್ಷಣೆ,  ಹೇಮಾವತಿ ನದಿಯಿಂದ  ತಾಲೂಕಿನ ದೊಡ್ಡನಾಗರ ಗ್ರಾಮದ ವ್ಯಾಪ್ತಿಯಲ್ಲಿ ಕೈಗೊಳ್ಳಲಾಗಿರುವ ಪಂಪ್ ಹೌಸ್ ಕಾಮಗಾರಿಗಳ ಹಾಗೂ ಹೆಬ್ಬನಹಳ್ಳಿ ಗ್ರಾಮದ ಕಾಮಗಾರಿಗಳನ್ನು ಇದೇ ಸಂದರ್ಭ ವೀಕ್ಷಿಸಿದರು.

ಕಾಮಗಾರಿಗಳ ಪರಿಶೀಲನೆಗೂ ಮುನ್ನ ಸಕಲೇಶಪುರದ ದುರ್ಗಾ ಹೋಟೆಲ್ ನಲ್ಲಿ ಸಮಿತಿಯು ಅಧಿಕಾರಿಗಳೊಂದಿಗೆ ಇದುವರೆಗಿನ ಪ್ರಗತಿಯ ಬಗ್ಗೆ ಚರ್ಚೆ ನಡೆಸಿ ಮಾಹಿತಿ ಪಡೆಯಲಾಯಿತು. ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಮಿತಿಯ ಅಧ್ಯಕ್ಷರಾದ ರಾಜಣ್ಣ ಅವರು ಎತ್ತಿನಹೊಳೆ ಯೋಜನೆ ಬಹಳ ಮಹತ್ವಾಕಾಂಕ್ಷಿಯಾದದ್ದು ಮಲೆನಾಡಿನ ನೀರನ್ನು ಬಯಲು ಸೀಮೆಗೆ ಹರಿಸಲು ಭೂಮಿಯನ್ನು ತ್ಯಾಗಮಾಡುತ್ತಿರುವ ರೈತರು, ಈ ಭಾಗದ ಸಾರ್ವಜನಿಕರು ಹಾಗೂ ನೀರಿಲ್ಲದೆ ಬಳಲುತ್ತಿರುವ ಬಯಲು ಸೀಮೆಯ ಜನರ ಹಿತಾಸಕ್ತಿಗಳು ಸಮಾನವಾಗಿ ಸಂರಕ್ಷಣೆಯಾಗಬೇಕು ಎಲ್ಲರಿಗೂ ಯೋಜನೆಯಿಂದ ಅನುಕೂಲವಾಗಬೇಕು ಎಂಬುದು ಸರ್ಕಾರದ ಆಶಯ ಎಂದು ಹೇಳಿದರು.

ವಿಧಾನಸಭೆಯಲ್ಲಿ ಶಾಸಕರಾದ ಸಂಪಂಗಿ, ಹಾಗೂ ಮುನಿಯಪ್ಪ ಅವರು ಕೇಳಿದ ಪ್ರಶ್ನೆಗಳಿಗೆ ಪೂರಕವಾಗಿ ಸಚಿವರು ನೀಡಿದ ಉತ್ತರ ಹಾಗೂ ಆಶ್ವಾಸನೆಗಳಿಗನುಗುಣವಾಗಿ ಯೋಜನೆ ಎಷ್ಟರ ಮಟ್ಟಿಗೆ ಅನುಷ್ಠಾನವಾಗುತ್ತಿದೆ ಎಂಬುದನ್ನು ಪರಿಶೀಲಿಸಲು ಸಮಿತಿ ಆಗಮಿಸಿದೆ. ಕೇವಲ ಶಾಸಕರ ಪ್ರಶ್ನೆ ಹಾಗೂ ಅದಕ್ಕೆ ನೀಡಲಾದ  ಉತ್ತರ ವ್ಯಾಪ್ತಿಗಷ್ಟೇ ಸೀಮಿತವಾಗಿ ಅಧಿಕಾರಿಗಳಿಂದ ಮಾಹಿತಿ ಪಡೆಯಲಾಗಿದೆ ಎಂದು ಅವರು ತಿಳಿಸಿದರು.  

ಎತ್ತಿನಹೊಳೆ ಯೋಜನೆಯ ಒಟ್ಟು ಅಂದಾಜು ವೆಚ್ಚ 12900 ಕೋಟಿ ರೂ.ಗಳಲ್ಲಿ ಈವರೆಗೆ 1800 ಕೋಟಿ ರೂ.ವೆಚ್ಚ ಮಾಡಲಾಗಿದೆ. ಡಿಸೆಂಬರ್ ಅಂತ್ಯದೊಳಗೆ ಕನಿಷ್ಠ ಪಂಪಿಂಗ್ ಕಾರ್ಯವಾದರೂ ಪ್ರಾರಂಭವಾಗಬಹುದೆಂದು ತಮ್ಮ ನಿರೀಕ್ಷೆಯಾಗಿದೆ ಎಂದು ಸರ್ಕಾರದ ಭರವಸೆಗಳ ಸಮಿತಿಯ ಅಧ್ಯಕ್ಷರು ವಿಶ್ವಾಸ ವ್ಯಕ್ತಪಡಿಸಿದರು. ರಾಜ್ಯ ಹಾಗೂ ಕೇಂದ್ರದ ತಜ್ಞರ ತಂಡದ ಅಧ್ಯಯನದಿಂದ ಮಲೆನಾಡಿನಲ್ಲಿ ಮಳೆಗಾಲದಲ್ಲಿ ಹರಿಯುವ ನದಿ, ಹಳ್ಳಕೊಳ್ಳ ಝರಿತೊರೆಗಳಿಂದ ನೀರನ್ನು ಒಗ್ಗೂಡಿಸಿದ ಸುಮಾರು 24 ಟಿ.ಎಂ.ಸಿ.ಗಳಷ್ಟು ನೀರು ಲಭ್ಯವಾಗಬಹುದು. ಅದನ್ನು ಬಯಲು ಸೀಮೆ ಜನರಿಗೆ ಒದಗಿಸಿದಲ್ಲಿ ಅಲ್ಲಿನ ಪರಿಸ್ಥಿತಿಗಳು ಬದಲಾವಣೆಯಾಗಬಹುದು ಎಂದರು.

ಮಲೆನಾಡಿದ ಕಾಫಿ ಬೆಳಿಗಾರರು ಹಾಗೂ ಏಲಕ್ಕಿ ರೈತರ ಸಮಸ್ಯೆ ಪರಿಹರಿಸಲು ಕ್ರಮ ಕೈಗೊಳ್ಳಲಾಗಿದೆ. ಈ ಭಾಗದ ರಸ್ತೆ ಅಭಿವೃದ್ಧಿಗೆ 118 ಕೋಟಿಯ ಪ್ಯಾಕೇಜ್ ಒದಗಿಸಲಾಗಿದೆ. 2ನೇ ಹಂತದ ಪ್ಯಾಕೇಜ್ ಶೀಘ್ರದಲ್ಲೇ ಒದಗಿಸಲಾಗುವುದು ಎಂದು ಹೇಳಿದರು. ಎತ್ತಿನ ಹಳ್ಳ ಯೋಜನೆಗೆ ಅಗತ್ಯವಿರುವ ಖಾಸಗಿ ಜಮೀನನ್ನು ನೇರ ಖರೀದಿ ಮೂಲಕ ಪಡೆಯಲಾಗುವುದು. ರೈತರ ಜಮೀನಿಗೆ ಉತ್ತಮ ದರವನ್ನು ನಿಗದಿಪಡಿಸಲಾಗುವುದು. ಜಿಲ್ಲಾಧಿಕಾರಿ ಕೂಡಲೇ ಅಧಿಸೂಚನೆ ಹೊರಡಿಸಲಿದ್ದಾರೆ ಎಂದು ಮಾಹಿತಿ ಒದಗಿಸಿದರು.

See also  ಪೌರಕಾರ್ಮಿಕರ ನಿವೇಶನದಲ್ಲಿ ಮನೆ ನಿರ್ಮಿಸಲು ಅವಕಾಶ ನೀಡಲು ಎಡಿಸಿಗೆ ಮನವಿ

448ಎಕರೆ ಹಾಗೂ 32.50ಗುಂಟೆ ಖಾಸಗಿ ಜಮೀನು(181.63 ಹೆಕ್ಟೇರ್), 34 ಎಕರೆ, 16 ಗುಂಟೆ(13.93 ಹೆಕ್ಟೇರ್) ಅರಣ್ಯ ಭೂಮಿ ಹಾಗೂ 91 ಎಕರೆ 3 ಗುಂಟೆ(36.89 ಹೆಕ್ಟೇರ್) ಸೇರಿದಂತೆ ಮೊದಲ ಹಮಗತದ ಯೊಜನೆ ಕಾಮಗಾರಿಗೆ ಒಟ್ಟು 574 ಎಕರೆ 14.5 ಗುಂಟೆ (232.54 ಹೆಕ್ಟೇರ್) ಜಮೀನನ್ನು  ಎತ್ತಿನ ಹಳ್ಳ ಯೋಜನೆಗೆ ಬಳಸಿಕೊಳ್ಳಲಾಗುತ್ತಿದೆ.  ಆದಷ್ಟು ಬೇಗ ಭೂಮಿಯನ್ನು ಸ್ವಾಧೀನಕ್ಕೆ ಪಡೆದು ವಿಶ್ವೇಶ್ವರಯ್ಯ ಜಲ ನಿಗಮಕ್ಕೆ ಹಸ್ತಾಂತರಿಸುವಂತೆ ಸೂಚಿಸಲಾಗಿದೆ ಎಂದು ರಾಜಣ್ಣ ಸಭೆಗೆ ಮಾಹಿತಿ ನೀಡಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು