News Kannada
Wednesday, October 05 2022

ಕರ್ನಾಟಕ

ತರೀಕೆರೆ-ಬಿಳಿಕೆರೆ ರಸ್ತೆ ಅಗಲೀಕರಣ: ಸಾರ್ವಜನಿಕರ ವ್ಯಾಪಕ ಆಕ್ಷೇಪ - 1 min read

Photo Credit :

  ತರೀಕೆರೆ-ಬಿಳಿಕೆರೆ ರಸ್ತೆ ಅಗಲೀಕರಣ: ಸಾರ್ವಜನಿಕರ ವ್ಯಾಪಕ ಆಕ್ಷೇಪ

ಚಿಕ್ಕಮಗಳೂರು: ತರೀಕೆರೆ-ಬಿಳಿಕೆರೆ ರಸ್ತೆಯಲ್ಲಿ ರಸ್ತೆ ಅಗಲೀಕರಣಕ್ಕಾಗಿ ಕಡಿಯಲು ಗುರುತಿಸಿದ್ದ 41 ಮರಗಳಲ್ಲಿ ಈಗಾಗಲೇ ಕಡಿದಿರುವ 4 ಮರ ಸೇರಿ ಇನ್ನು 3 ಮರಗಳನ್ನು ಮಾತ್ರ ಕಡಿಯಲು ಅರಣ್ಯ ಹಾಗೂ ಲೋಕೋಪಯೋಗಿ ಇಲಾಖೆಗಳು ಒಪ್ಪಿಕೊಂಡಿವೆ. ಹಾಗಾಗಿ 34 ಮರಗಳು ಕಡಿತಲೆಯಿಂದ ಉಳಿದುಕೊಂಡಿವೆ. ಈ ರಸ್ತೆಯ ಇಕ್ಕೆಲಗಳಲ್ಲೂ ರಸ್ತೆಯನ್ನು ಒಂದು ಮೀಟರ್ ಅಗಲಗೊಳಿಸಲು ಲೋಕೋಪಯೋಗಿ ಇಲಾಖೆ ಮುಂದಾಗಿದ್ದು, ಒಟ್ಟು 41 ಮರಗಳನ್ನು ಕಡಿಯಬೇಕೆಂದು ಅರಣ್ಯ ಇಲಾಖೆಗೆ ಮನವಿ ಮಾಡಿತ್ತು.

ಈ ಮನವಿಗೆ ಸ್ಪಂದಿಸಿ 41 ಮರಗಳನ್ನು ಕಡಿಯಲು ಇಲಾಖೆ ಒಟ್ಟು 2.24 ಲಕ್ಷ ರೂ.ಗಳಿಗೆ ಟೆಂಡರ್ ಮೂಲಕ ಗುತ್ತಿಗೆ ನೀಡಲಾಗಿತ್ತು. ಆದರೆ ಈ ಮರಗಳನ್ನು ಅನಾವಶ್ಯಕವಾಗಿ ಕಡಿಯಲಾಗುತ್ತಿದೆ ಎಂದು ಪರಿಸರಾಸಕ್ತರು ಹಾಗೂ ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿ ತಕ್ಷಣ ಈ ಮರಗಳ ಹನನವನ್ನು ಕೈಬಿಡಬೇಕೆಂದು ಒತ್ತಡ ಹೇರಿದ್ದರ ಹಿನ್ನೆಲೆಯಲ್ಲಿ ಬುಧವಾರ ಬೆಳಿಗ್ಗೆ ಪರಿಸರಾಸಕ್ತರು ಸೇರಿದಂತೆ ಅರಣ್ಯ ಇಲಾಖೆ ಚಿಕ್ಕಮಗಳೂರು ವಲಯದ ವಲಯಾರಣ್ಯಾಧಿಕಾರಿ ಅಬ್ದುಲ್ಅಜೀಜ್, ಲೋಕೋಪಯೋಗಿ ಇಲಾಖೆ ಕಿರಿಯ ಇಂಜಿನಿಯರ್ ಗಣೇಶ್ ಮತ್ತೊಮ್ಮೆ ಈ ರಸ್ತೆಯಲ್ಲಿ ಮರಗಳ ತಪಾಸಣೆ ಮಾಡಿ ಅಷ್ಟೊಂದು ಸಂಖ್ಯೆ ಮರಗಳನ್ನು ಕಡಿಯುವ ಅವಶ್ಯಕತೆ ಇಲ್ಲವೆಂಬ ನಿರ್ಧಾರಕ್ಕೆ ಬಂದರು.

ಮೌಂಟೆನ್ವ್ಯೂ ಶಾಲೆಯಿಂದ ಭಕ್ತರಹಳ್ಳಿವರೆಗೆ ಒಟ್ಟು 18 ಕಿ.ಮೀ.ನಲ್ಲಿ ಈ ರಸ್ತೆಯಲ್ಲಿ ಮರಗಳನ್ನು ಕಡಿದು ನಂತರ ರಸ್ತೆಯನ್ನು ಅಗಲಗೊಳಿಸಲು ಸರ್ಕಾರ 12 ಕೋಟಿ ರೂ.ಗಳನ್ನು ಮಂಜೂರು ಮಾಡಿದೆ. ಈ ರಸ್ತೆಯಲ್ಲಿ ನೇರಲು, ಬಸರಿ, ಹೊನ್ನೆ, ಅತ್ತಿ, ಬಿಲ್ವಾರ, ತಾರೆ, ಬೀಟೆ, ಮಾವು, ಕರಿಬಸರಿ, ಹೊಳೆಮತ್ತಿ, ಗೊದ್ದಾಮ್ಟೆ ಮರಗಳು ಇದ್ದು, ಈ ರಸ್ತೆಯಲ್ಲಿ ಓಡಾಡುವ ಜನಕ್ಕೆ ನೆರಳು ನೀಡುತ್ತಿದ್ದವಲ್ಲದೆ ಪ್ರಾಣಿ, ಪಕ್ಷಿಗಳಿಗೂ ಆಶ್ರಯ ನೀಡುವ ರಂಬೆಕೊಂಬೆಗಳಾಗಿದ್ದವು. ಅರಣ್ಯ ಇಲಾಖೆ ಮೂಲಗಳ ಪ್ರಕಾರ ಮೊದಲು 80 ಮರಗಳನ್ನು ಕಡಿಯಬೇಕೆಂಬ ಬೇಡಿಕೆ ಇದ್ದು, ನಂತರ ಅದನ್ನು 41ಕ್ಕೆ ಇಳಿಸಲಾಗಿತ್ತು.

See also  ಸಚಿವರನ್ನು ಬಂಧಿಸಿ ಸಂತ್ರಸ್ತೆಗೆ ವಿಶೇಷ ಭದ್ರತೆ ನೀಡಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು