News Kannada
Saturday, September 24 2022

ಕರ್ನಾಟಕ

ಪತಿಯ ಕಾರ್ಯಕ್ಕೆ ಮತದಾರರ ಕಾಣಿಕೆ: ಗೀತಾಮಹದೇವಪ್ರಸಾದ್ - 1 min read

Photo Credit :

ಪತಿಯ ಕಾರ್ಯಕ್ಕೆ ಮತದಾರರ ಕಾಣಿಕೆ: ಗೀತಾಮಹದೇವಪ್ರಸಾದ್

ಗುಂಡ್ಲುಪೇಟೆ: ಪತಿ ಮಹದೇವಪ್ರಸಾದ್ ಅಭಿವೃದ್ದಿ ಕಾರ್ಯಕ್ಕೆ ಮತದಾರರು ನೀಡಿರುವ ಕಾಣಿಕೆಯೇ ನನ್ನ ಗೆಲುವಾಗಿದೆ ಎಂದು ವಿಜೇತ ಕಾಂಗ್ರೆಸ್ ಅಭ್ಯರ್ಥಿ ಗೀತಾಮಹದೇವಪ್ರಸಾದ್ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಯಾವುದೇ ಭಾರತೀಯ ಮಹಿಳೆಯರನ್ನು ಹೀಯಾಳಿಸಿದರೆ ನಾರಿಯರು ಸಹಿಸುವುದಿಲ್ಲ ಎಂಬುದಕ್ಕೆ ಮತದಾರರು ನೀಡಿದ ತಕ್ಕ ಉತ್ತರ ಸಾಕ್ಷಿಯಾಗಿದೆ. ಚುನಾವಣೆ ಎಂದ ಮೇಲೆ ಸೋಲು ಗೆಲುವು ಸಾಮಾನ್ಯ. ಆದರೆ ಪತಿಯನ್ನು ಕಳೆದುಕೊಂಡಿದ್ದ ನನಗೆ ಚುನಾವಣೆಗೆ ನಿಲ್ಲಲು ಶಕ್ತಿ ಇರಲಿಲ್ಲ. ಕಾರ್ಯಕರ್ತರು ಶಕ್ತಿ ತುಂಬಿ ನನಗೆ ನೈತಿಕ ಬೆಂಬಲ ನೀಡಿದರು. ಬಿಜೆಪಿ ಮುಖಂಡರು ಪ್ರಚಾರದ ಸಮಯದಲ್ಲಿ ನನಗೆ ನೋವುಂಟು ಮಾಡುವಂತೆ ಮಾತನಾಡಿದರು ನಾನು ಅವರ ಬಗ್ಗೆ ಕಿಂಚಿತ್ತು ಕೀಳಾಗಿ ಮಾತನಾಡಲಿಲ್ಲ. ಈ ಗೆಲುವು ನನ್ನದಲ್ಲ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರ ಗೆಲುವು ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ನನ್ನ ಮೇಲೆ ವಿಶ್ವಾಸವಿಟ್ಟು ಟಿಕೆಟ್ ನೀಡಿ ಹುರಿದುಂಬಿಸಿದರು. ಹೈಕಮಾಂಡ್ ಸಾಥ್ ನೀಡಿತು. ಕ್ಷೇತ್ರದ ಎಲ್ಲಾ ಮತದಾರರು ಜಿ.ಪಂ.ಸದಸ್ಯರು, ತಾ.ಪಂ.ಸದಸ್ಯರು, ಪುರಸಭೆ, ಗ್ರಾ.ಪಂ.ಸದಸ್ಯರ ಪರಿಶ್ರಮದಿಂದ ಈ ಗೆಲುವಾಗಿದೆ. ಕುಡಿಯುವ ನೀರು ಒದಗಿಸುವುದು ಮತ್ತು ಕೆರೆಗಳಿಗೆ ನೀರು ತುಂಬಿಸುವುದು ನನ್ನ ಮೊದಲ ಆದ್ಯತೆ. ಮಹದೇವಪ್ರಸಾದ್ ಅಭಿವೃದ್ದಿ ಕೆಲಸ ಮುಂದುವರಿಸಿಕೊಂಡು ಹೋಗುತ್ತೇನೆ ಎಂಬುದಾಗಿ ಭರವಸೆ ನೀಡಿದರು.

ಪುತ್ರ ಗಣೇಶ್ ಪ್ರಸಾದ್ ಮಾತನಾಡಿ  ನನ್ನ ತಂದೆ ಕ್ಷೇತ್ರದಲ್ಲಿ ಮಾಡಿದ ಅಭಿವೃದ್ದಿ ಕೆಲಸಗಳು ಗೆಲುವಿಗೆ ಶ್ರೀರಕ್ಷೆಯಾಗಿದೆ. ಮತದಾರರೆಲ್ಲರೂ ಕೈಹಿಡಿದಿದ್ದು, ಗೆಲುವಿನ ನಿರೀಕ್ಷೆ ಮೊದಲೇ ಇತ್ತು. ಗೆಲುವಿಗೆ ಕಾರ್ಯಕರ್ತರು ಮುಖಂಡರು ಕೈಜೋಡಿದ್ದೇ ಕಾರಣವಾಗಿದೆ ಎಂದರು. ಗೀತಾಮಹದೇವಪ್ರಸಾದ್ ಮೈದುನ ನಂಜುಂಡಪ್ರಸಾದ್ ಮಾತನಾಡಿ ಈ ಗೆಲುವು ಕಾರ್ಯಕರ್ತರ ಗೆಲುವು. ಬಿಜೆಪಿಯ ಗಾಳಿ ಅಲೆ ನಮ್ಮ ಬಳಿ ಸುಳಿಯಲಿಲ್ಲ, ಅಪಪ್ರಚಾರ ಅಬ್ಬರ ನಡೆಯಲಿಲ್ಲ. ಬಿಜೆಪಿಯ ಸಂಸದರೊಬ್ಬರು ಕಾಂಗ್ರೆಸ್ ಅಭ್ಯರ್ಥಿ ನೊಂದ ಮಹಿಳೆ ಎನ್ನುವುದನ್ನೂ ತಿಳಿಯದೆ ಕೀಳು ಮಾತನಾಡಿದರು. ಹಾಗಾಗಿ ಜನರು ಬಿಜೆಪಿಗೆ ತಕ್ಕ ಪಾಠ ಕಲಿಸಿದ್ದಾರೆ. ಅಣ್ಣ ಮಹದೇವಪ್ರಸಾದ್ ಅಭಿವೃದ್ದಿಗೆ ಜನರು ತೀರ್ಪು ನೀಡಿದ್ದಾರೆ ಎಂದು ಹೇಳಿದರು.

See also  ಯಡಿಯೂರಪ್ಪ ಅಕ್ರಮ ಆಸ್ತಿ ಉಳಿಸಲು ಏನೇನು ಮಾಡಿದರೆಂದು ಯೋಚಿಸಲಿ: ಸಿಎಂ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು