ಮಡಿಕೇರಿ: ಸುಂಟಿಕೊಪ್ಪದ ಸಂತ ಅಂತೋಣಿ ದೇವಾಲಯದಲ್ಲಿ ಶುಭ ಶುಕ್ರವಾರ (ಗುಡ್ ಫ್ರೈಡೆ) ಅಂಗವಾಗಿ ವಿಶೇಷ ಪ್ರಾರ್ಥನಾ ಕೂಟ ನಡೆಯಿತು. ನೂರಾರು ಸಂಖ್ಯೆಯಲ್ಲಿ ನೆರೆದಿದ್ದ ಭಕ್ತಾಧಿಗಳು ವಿಶೇಷ ಪ್ರಾರ್ಥನೆ ಮಾಡುವ ಮೂಲಕ ಯೇಸು ಶಿಲುಬೆಗೇರುವ ರೂಪಕವನ್ನು ಸಂತ ಅಂತೋಣಿ ಸಂತ ಮೇರಿ ಶಾಲಾ ಮೈದಾನದಲ್ಲಿ ನಡೆಸಲಾಯಿತು.
ದೇವಾಲಯದಲ್ಲಿ ಬೆಳಗ್ಗಿನಿಂದಲೇ ವಿಶೇಷ ಪ್ರಾರ್ಥನಕೂಟ ನಡೆದು ನೂರಾರು ಸಂಖ್ಯೆಯಲ್ಲಿ ಕ್ರೈಸ್ತಾಬಾಂಧವರು ಪಾಲ್ಗೊಂಡರು. ಮಧ್ಯಾಹ್ನ ದೇವಾಲಯ ಆವರಣದ ಶಾಲಾ ಮೈದಾನದಲ್ಲಿ ಮರದ ದಿಮ್ಮಿಗಳಿಂದ ತಯಾರಿಸಲಾದ ಬೃಹತ್ ಶಿಲುಬೆಗಳನ್ನು ಯುವಕ, ಯುವತಿಯರು, ಮಹಿಳೆಯರು, ಪುರುಷರು ಹೊತ್ತು ಸಾಗಿದರು.
ಮಕ್ಕಳು ಯೇಸು ಮಾನವಕುಲ ರಕ್ಷಣೆ ಮಾಡಲು ಶಿಲುಬೆಯನ್ನು ಹೊತ್ತು ಲೋಕವನ್ನು ರಕ್ಷಿಸಿದ್ದು ಅವರ ಸ್ಮರಣೆಯನ್ನು ಮಾಡುವ ಕಿರುರೂಪಕವನ್ನು ಪ್ರದರ್ಶಿಸಿದರೆ, ಯುವಕ ಯುವತಿಯರು ಮಹಿಳೆಯರು ಪುರುಷರು ಅಂದಿನ ಘಟನೆಯನ್ನು ಹೊಲುವ ಕಿರುರೂಪಕವನ್ನು ಪ್ರಾರ್ಥನಕೂಟದಲ್ಲಿ ಅಳವಡಿಸಿಕೊಂಡರು. ಪ್ರಾರ್ಥನಾಕೂಟದಲ್ಲಿ ಸಂತ ದೇವಾಲಯದ ಧರ್ಮಗುರುಗಳಾದ ಫಾ. ಎಡ್ವರ್ಡ್ ವಿಲಿಯಂ ಸಲ್ಡಾನ ಹಾಗೂ ಮೈಸೂರಿನ ಅಲ್ಪೋನ್ಸಾಬ್ರೀಠೊ ಸಾನಿಧ್ಯ ವಹಿಸಿದ್ದರು. ನೂರಾರು ಸಂಖ್ಯೆಯಲ್ಲಿ ನೆರೆದಿದ್ದ ಕ್ರೈಸ್ತ ಬಾಂಧವರು ಬಲಿಪೂಜೆ ಸಾಂಘ್ಯಗಳಲ್ಲಿ ಪಾಲ್ಗೊಂಡರು.