News Kannada
Thursday, October 06 2022

ಕರ್ನಾಟಕ

ದಿಡ್ಡಳ್ಳಿ ಜಾಗ ಮತ್ತೊಮ್ಮೆ ಪರಿಶೀಲಿಸಿ ಕ್ರಮ: ಕಾಗೋಡು - 1 min read

Photo Credit :

ದಿಡ್ಡಳ್ಳಿ ಜಾಗ ಮತ್ತೊಮ್ಮೆ ಪರಿಶೀಲಿಸಿ ಕ್ರಮ: ಕಾಗೋಡು

ಮಡಿಕೇರಿ: ದಿಡ್ಡಳ್ಳಿಯ ಮೂಲ ನಿವಾಸಿ ಗಿರಿಜನರಿಗೆ ನಿವೇಶನ ಹಾಗೂ ಭೂಮಿ ಕಲ್ಪಿಸಲು ಸರ್ಕಾರ ಬದ್ಧವಾಗಿದ್ದು, ಈ ಸಂಬಂಧ ದಿಡ್ಡಳ್ಳಿಯ ಜಾಗ ಅರಣ್ಯ ಇಲಾಖೆಗೆ ಸೇರಿದೆಯೇ ಅಥವಾ ಕಂದಾಯ ಇಲಾಖೆಗೆ ಸೇರಿದೆಯೇ ಎಂಬ ಬಗ್ಗೆ ಮತ್ತೊಮ್ಮೆ ಪರಿಶೀಲಿಸಿ ಮೂಲ ನಿವಾಸಿ ಗಿರಿಜನರಿಗೆ ಶಾಶ್ವತ ನೆಲೆ ಕಲ್ಪಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಕಂದಾಯ ಸಚಿವರಾದ ಕಾಗೋಡು ತಿಮ್ಮಪ್ಪ ಅವರು ತಿಳಿಸಿದ್ದಾರೆ. 

Diddalli Issue: Solution looks distant but Kagodu's visit gives hopes-1 ಜಿಲ್ಲೆಯ ದಿಡ್ಡಳ್ಳಿಗೆ ಶನಿವಾರ ಭೇಟಿ ನೀಡಿ ನಿರಾಶ್ರಿತರ ಅಹವಾಲು ಆಲಿಸಿದ ನಂತರ ಸಭಾ ಕಾರ್ಯಕ್ರಮದಲ್ಲಿ ಸಚಿವರು ಮಾತನಾಡಿದರು.  ದಿಡ್ಡಳ್ಳಿಯ ಭೂಮಿ ಕಂದಾಯ ಇಲಾಖೆಗೆ ಸೇರಿದ್ದರೆ ಮೂರೇ ದಿನದಲ್ಲಿ ಹಕ್ಕು ಪತ್ರ ವಿತರಿಸಲಾಗುವುದು. ಅರಣ್ಯ ಇಲಾಖೆಗೆ ಜಾಗ ಸೇರಿದ್ದರೆ ಪರ್ಯಾಯ ಭೂಮಿ ಗುರ್ತಿಸಬೇಕಾಗುತ್ತದೆ. ಆದ್ದರಿಂದ ದಿಡ್ಡಳ್ಳಿ ಭೂಮಿ ಸಂಬಂಧ ಮತ್ತೊಮ್ಮೆ ಪರಿಶೀಲನೆ ಮಾಡಲಾಗುವುದು ಎಂದು ಕಂದಾಯ ಸಚಿವರು ಸ್ಪಷ್ಟಪಡಿಸಿದರು.    

ದಿಡ್ಡಳ್ಳಿಯ ಮೂಲ ನಿವಾಸಿ ಗಿರಿಜನರಿಗೆ ಜಿಲ್ಲೆಯ ಎಲ್ಲೋ ಒಂದೆರಡು ಕಡೆ ನಿವೇಶನ ಒದಗಿಸಿ ಸರ್ಕಾರ ಸುಮ್ಮನಾಗುವುದಿಲ್ಲ. ನಿವೇಶನದ ಜೊತೆಗೆ ಕನಿಷ್ಠ ಒಂದು ಅಥವಾ ಎರಡು ಎಕರೆ ಭೂಮಿಯನ್ನಾದರೂ ಕಲ್ಪಿಸಬೇಕಲ್ಲವೇ? ಆ ನಿಟ್ಟಿನಲ್ಲಿ ಸರ್ಕಾರ ಚಿಂತನೆ ಮಾಡುತ್ತಿದೆ. ಆದ್ದರಿಂದ ಮೂಲ ನಿವಾಸಿ ಗಿರಿಜನರು ಯಾವ ಯಾವ ಹಾಡಿಯಲ್ಲಿ ವಾಸ ಮಾಡುತ್ತಿದ್ದೀರ, ಅಲ್ಲಿಯೇ ಜಾಗವನ್ನು ಗುರ್ತಿಸಿ, ನಿವೇಶನ ಹಾಗೂ ಭೂಮಿ ಹಂಚಿಕೆ ಮಾಡಲು ಪ್ರಯತ್ನಿಸಲಾಗುವುದು ಎಂದು ಕಂದಾಯ ಸಚಿವರು ನುಡಿದರು.  

ಜಿಲ್ಲೆಯಲ್ಲಿ ಟಾಟಾ, ಬಿರ್ಲಾದವರಿಗೆ ಸಾವಿರಾರು ಎಕರೆ ಕಾಫಿ ತೋಟವಿದೆ. ಆದರೆ ಆದಿವಾಸಿಗಳಿಗೆ ಕನಿಷ್ಠ ಎರಡು ಎಕರೆ ಭೂಮಿ ಸಿಗಲಿಲ್ಲವೇ. ಈ ಬಗ್ಗೆ ಆದಿವಾಸಿಗಳು ಯೋಚಿಸಬೇಕು. ಜೊತೆಗೆ ಜಾಗೃತರಾಗಬೇಕು. ಆದ್ದರಿಂದ ಗಿರಿಜನರು ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸಬೇಕು. ಸರ್ಕಾರ ಮಕ್ಕಳ ಶಿಕ್ಷಣಕ್ಕಾಗಿ ಆಶ್ರಮ ಶಾಲೆ, ವಸತಿ ಶಾಲೆ, ವಿದ್ಯಾಥರ್ಿ ನಿಲಯ ಹೀಗೆ ನಾನಾ ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ. ಅವುಗಳನ್ನು ಬಳಸಿಕೊಳ್ಳಲು ಮುಂದಾಗಬೇಕು ಎಂದು ಕಾಗೋಡು ತಿಮ್ಮಪ್ಪ ಅವರು ಸಲಹೆ ಮಾಡಿದರು.

ಎಲ್ಲಿ ಜಾಗೃತಿ, ಜೊತೆಗೆ ಸಂಘಟಿತರಾಗುತ್ತಾರೋ ಅಲ್ಲಿ ಬದಲಾವಣೆ ಕಾಣಲು ಸಾಧ್ಯ. ಆದ್ದರಿಂದ ಇಲ್ಲಿನ ವಸ್ತುಸ್ಥಿತಿ ತಿಳಿದುಕೊಳ್ಳಲು ಬಂದಿದ್ದೇನೆ. ಮೂಲ ನಿವಾಸಿ ಗಿರಿಜನರಿಗೆ ನ್ಯಾಯ ಒದಗಿಸುವುದು ಸರ್ಕಾರದ ಕರ್ತವ್ಯವೂ ಆಗಿದೆ ಎಂದು ಕಂದಾಯ ಸಚಿವರು ನುಡಿದರು. ಮೂಲ ನಿವಾಸಿಗಳು ಆಯಾಯ ದಿನದಂದು ದುಡಿದು ತಿನ್ನುವುದು, ಆ ದಿನ ಮುಗಿದರೆ ಮುಗಿಯಿತು, ಮತ್ತೆ ಆಕಾಶ ನೋಡುವುದು, ಇದು ತಪ್ಪಬೇಕು. ಆದಿವಾಸಿಗಳಲ್ಲಿ ಯಾರಾದರೂ ಎಸ್ಎಸ್ಎಲ್ಸಿ ಪಾಸು ಮಾಡಿದವರು ಇದ್ದಾರೆಯೇ ಎಂದು ಕಂದಾಯ ಸಚಿವರು ಇದೇ ಸಂದರ್ಭದಲ್ಲಿ ಪ್ರಶ್ನಿಸಿದರು.   

ಸರ್ಕಾರ ಭೂ ಸುಧಾರಣಾ ಕಾನೂನನ್ನು ಜಾರಿಗೊಳಿಸಿದೆ. ಬೇರೆಯವರ ಭೂಮಿಯಲ್ಲಿ ವಾಸ ಮಾಡುತ್ತಿದ್ದರೆ ಅಕ್ರಮ-ಸಕ್ರಮ ಯೋಜನೆಯಡಿ ಹೊಸದಾಗಿ ಅಜರ್ಿ ಸಲ್ಲಿಸುವಂತೆ ಗಿರಿಜನರಿಗೆ ಸಲಹೆ ಮಾಡಿದರು. ಪ್ರತಿಯೊಂದು ಕುಟುಂಬಕ್ಕೂ ಭೂಮಿ ಸಿಗುವ ಅವಕಾಶವಿದ್ದು, ಅದನ್ನು ಸಮರ್ಪಕವಾಗಿ ಬಳಿಸಿಕೊಳ್ಳುವಂತೆ ಕಾಗೋಡು ಅವರು ಸಲಹೆ ಮಾಡಿದರು. ಇದೇ ಬುಧವಾರ ಸಚಿವ ಸಂಪುಟದ ಸಭೆ ನಡೆಯಲಿದ್ದು, ಈ ಸಂಬಂಧ ಮುಖ್ಯಮಂತ್ರಿಯವರೊಂದಿಗೆ ಚರ್ಚಿಸಿ ಶಾಶ್ವತ ಪರಿಹಾರ ಒದಗಿಸಲು ಪ್ರಮುಖರು ಬೆಂಗಳೂರಿಗೆ ಆಗಮಿಸುವಂತೆ ಸಚಿವರು ಸಲಹೆ ಮಾಡಿದರು. ಹದಿನೈದು ದಿನದ ನಂತರ ಮತ್ತೊಮ್ಮೆ ದಿಡ್ಡಳ್ಳಿಗೆ ಭೇಟಿ ನೀಡಲಾಗುವುದು ಎಂದರು.

See also  22ರಿಂದ 9 ದಿನಗಳ ಗದ್ದಿಕ-2018ಕ್ಕೆ ನಾಡುಸಜ್ಜು 
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು