News Kannada
Thursday, September 29 2022

ಕರ್ನಾಟಕ

ಮಕ್ಕಳ ಬೇಸಿಗೆ ಶಿಬಿರದಲ್ಲಿ ಹಾವಿನ ಬಗ್ಗೆ ಮಾಹಿತಿ - 1 min read

Photo Credit :

ಮಕ್ಕಳ ಬೇಸಿಗೆ ಶಿಬಿರದಲ್ಲಿ ಹಾವಿನ ಬಗ್ಗೆ ಮಾಹಿತಿ

ಚಿಕ್ಕಮಗಳೂರು: ಹಾವುಗಳು ಎಂದಾಕ್ಷಣ ಆಡೋ ಮಕ್ಕಳಿಂದ ಅಳ್ಳಾಡೋ ಮುದುಕರು ಕೂಡ ಕಾಲಿಗೆ ಬುದ್ಧಿ ಹೇಳ್ತಾರೆ. ಹಾವನ್ನ ಕಂಡ ದಾರಿಯಲ್ಲಿ ವಾರವಾದ್ರು ಓಡಾಡೋದಿಲ್ಲ. ಆದರೆ ಎಲ್ಲಾ ಹಾವುಗಳು ಕೆಟ್ಟ ಹಾವಲ್ಲ. ಅವು ಕಚ್ಚುದ್ರೆ ಸಾಯೋದಿಲ್ಲ ಅನ್ನೋ ವಿಷಯ ಎಷ್ಟೋ ಜನಕ್ಕೆ ಗೊತ್ತಿಲ್ಲ. ಅದನ್ನ ತಿಳಿಯೋ ಪ್ರಯತ್ನಕ್ಕೂ ಯಾರು ಕೈ ಹಾಕೋದಿಲ್ಲ. ಆದ್ರೆ, ಚಿಕ್ಕಮಗಳೂರಿನ ವಿಶ್ವಮಾನವ ಎಜುಕೇಶನ್ ಟ್ರಸ್ಟ್ ಏರ್ಪಡಿಸಿರೋ ಬೇಸಿಗೆ ಶಿಬಿರ ತುಸು ಭಿನ್ನವಾಗಿದ್ದು, ಬರೀ ಆಡೋದು, ಕುಡಿಯೋದನ್ನಷ್ಟೆ ಹೇಳಿ ಕೊಡ್ತಿಲ್ಲ. ಎಳೆಯ ಮನಸ್ಸಿಗೆ ಕೆಲ ಉಪಯುಕ್ತ ಮಾಹಿತಿಯನ್ನು ನೀಡ್ತಿದ್ದಾರೆ.

ಬೇಸಿಗೆ ಬಂತೆಂದ್ರೆ ಸಾಕು. ಬೇಸಿಗೆ ಶಿಬಿರಗಳು ನಾಯಿ ಕೊಡೆಗಳಂತೆ ಹುಟ್ಟಿಕೊಳ್ತಾವೆ. ಮೀನಿಗೆ ಈಜೋದು ಹೇಳಿ ಕೊಡೋಕಾಗುತ್ತಾ, ಮಕ್ಕಳಿಗೆ ಆಡೋದು ಹೇಳಿಕೊಡೋಕಾಗುತ್ತಾ. ಆದ್ರೂ ವಾರ, ಹದಿನೈದು, ತಿಂಗಳಲ್ಲಿ ನಿಮ್ಮ ಮಕ್ಕಳಿಗೆ ಏನೆಲ್ಲಾ ಹೇಳಿ ಕೊಡ್ತೀವೆ ಅಂತಾ ಹಣ ಪೀಕ್ತಾರೆ. ಆದ್ರೆ, ಎಳೆ ಮನಸ್ಸುಗಳು ಶಿಬಿರಗಳಿಲ್ಲದಿದ್ರು ತಮಗೆ ಬೇಕಾದಂತೆಲ್ಲಾ ಆಡಿ ಖುಷಿ ಪಡ್ತಾವೆ. ಆದ್ರೆ, ಕಾಫಿನಾಡಿನ ವಿಶ್ವಮಾನವ ಎಜುಕೇಶನ್ ಟ್ರಸ್ಟ್ ಏರ್ಪಡಿಸಿರೋ ಬೇಸಿಗೆ ಶಿಬಿರದಲ್ಲಿ ಮಕ್ಕಳಿಗೆ ಆಟದ ಜೊತೆ ಕೆಲ ಉಪಯುಕ್ತ ಮಾಹಿತಿಯನ್ನು ನೀಡ್ತಿದ್ದಾರೆ. ಎಳೆಯ ಮಕ್ಕಳಿಗೆ ಹಾವಿನ ಬಗ್ಗೆ ಯಾವುದೇ ಮಾಹಿತಿ ಇರೋದಿಲ್ಲ. ಅದಕ್ಕೆ ಈ ಶಿಬಿರದಲ್ಲಿ ಪ್ರಖ್ಯಾತ ಉರಗ ತಜ್ಞ ಸ್ನೇಕ್ ನರೇಶ್ ರಿಂದ ಮಕ್ಕಳಿಗೆ ಹಾವಿನ ಬಗ್ಗೆ ಮಾಹಿತಿ ನೀಡಿದರು.

ಅದರ ಜೀವನ ಶೈಲಿ, ವಾಸ, ವಿವಿಧ ಜಾತಿಯ ಹಾವುಗಳ ವಿವರ, ಅವುಗಳ ಚಲನ-ವಲನವನ್ನ ಪಿಪಿಟಿ ಮೂಲಕ ನೇರವಾಗಿ ಮಕ್ಕಳಿಗೆ ಮಾಹಿತಿ ನೀಡಿದ್ರು. ಮಕ್ಕಳು ಕೂಡ ಇದನ್ನ ಎಂಜಾಯ್ ಮಾಡಿದ್ರು.ಇದರ ಜೊತೆ ಮಕ್ಕಳಿಗೆ ಸ್ನೇಕ್ ನರೇಶ್ ಜೀವಂತ ಎರಡು ಹಾವುಗಳನ್ನ ತಮ್ಮ ಚೀಲದಲ್ಲಿ ತಂದು ತೋರಿಸಿದ್ರು. ವಿಷಕಾರಿ ನಾಗರಹಾವು ಮತ್ತು ಬೃಹತ್ ಗಾತ್ರದ ಕೆರೆ ಹಾವುಗಳನ್ನ ಮಕ್ಕಳಿಗೆ ತೋರಿಸೋ ಮೂಲಕ ಅವುಗಳ ಚಲನವಲನ ಬಗ್ಗೆ ತಿಳಿಸಿದ್ರು. ಜೊತೆಗೆ ಶಾಲಾ ಮಕ್ಕಳಿಗೆ ಹಾವುಗಳನ್ನ ಹಿಡಿಯೋಕೆ ಮುಟ್ಟೋಕೆ ಅವಕಾಶ ಮಾಡಿಕೊಟ್ರು. ಮಕ್ಕಳ ವಿಷಕಾರಿ ಹಾವು ಅನ್ನೋ ಭಯವಿಲ್ಲದೆ ಸುಲಭವಾಗಿ ಹಾವುಗಳನ್ನ ಮುಟ್ಟಿ ಸಂಭ್ರಮಿಸಿದ್ರು. ಜೊತೆಗೆ ಮೊಬೈಲ್ ಗೆ ಪೋಸು ಕೂಡ ನೀಡಿದ್ರು. ಹಾವು ಎಂಬ ಭಯವಿಲ್ಲದೇ ಹಾವಿನ ಜೊತೆಯಲ್ಲಿ ಪ್ರತಿಯೊಂದು ಮಕ್ಕಳು ಆಟವಾಡಿದ್ದಲ್ಲದೇ ಹಾವುಗಳ ಬಗ್ಗೆ ಇದ್ದಂತಹ ಭಯವನ್ನು ದೂರ ಮಾಡಿಕೊಂಡ್ರು. ಇದ್ರಿಂದ ಮಕ್ಕಳು ಸಂತೋಷ ಪಟ್ಟಿದ್ದಲ್ಲದೇ ಈ ವಿಭಿನ್ನವಾದ ಶಿಬಿರಕ್ಕೆ ಪೊಷಕರು ಕೂಡ ಶ್ಲಾಘನೆ ವ್ಯಕ್ತ ಪಡಿಸಿದರು.

ಒಟ್ಟಾರೆಯಾಗಿ ಚಿಕ್ಕಮಗಳೂರಿನಲ್ಲಿ ವಿಶ್ವಮಾನವ ಎಜುಕೇಷನ್ ಸೊಸೈಟಿಯಿಂದ ಚೈತ್ರದ ಚಿಗುರು ಎಂಬ ಬೇಸಿಗೆ ಶಿಬಿರ ಮಕ್ಕಳಿಗೆ ನಿಜಕ್ಕೂ ಅನುಕೂಲವಾಯ್ತು. ನಿಜವಾದ ಹಾವುಗಳನ್ನ ಕಂಡು ಶಾಲಾ ಮಕ್ಕಳು ಸಂಭ್ರಮಪಟ್ಟು ಹಾವಿನ ಬಗ್ಗೆ ಜ್ಞಾನ ಹೆಚ್ಚಿಸಿಕೊಂಡರು.

See also  ಸಕಲ ಸರ್ಕಾರಿ ಗೌರಗಳೊಂದಿಗೆ ಮಂಡ್ಯದ ವೀರ ಯೋಧನಿಗೆ ಅಂತಿಮ ವಿದಾಯ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು