News Kannada
Friday, October 07 2022

ಕರ್ನಾಟಕ

ಮದ್ದೂರಲ್ಲಿ ರಸ್ತೆ ಅವಘಡ: ಮಹಿಳೆ, ಮೇಕೆಗಳು ಸಾವು - 1 min read

Photo Credit :

ಮದ್ದೂರಲ್ಲಿ ರಸ್ತೆ ಅವಘಡ: ಮಹಿಳೆ, ಮೇಕೆಗಳು ಸಾವು

ಮಂಡ್ಯ: ಒಂದೆಡೆ ಕಾರು ಡಿಕ್ಕಿ ಹೊಡೆದು ಮಹಿಳೆ ಸ್ಥಳದಲ್ಲೇ ಮೃತಪಟ್ಟರೆ ಮತ್ತೊಂದೆಡೆ ಟಿಪ್ಪರ್ ಲಾರಿ ಹರಿದು ನಾಲ್ಕು ಮೇಕೆಗಳು ಸಾವನ್ನಪ್ಪಿದ  ಘಟನೆ ಮದ್ದೂರಿನಲ್ಲಿ ನಡೆದಿದೆ.

ಮದ್ದೂರು ಪಟ್ಟಣದ ಟಿಬಿ ವೃತ್ತದಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಕಾರು ಡಿಕ್ಕಿ ಹೊಡೆದ ಪರಿಣಾಮ ತಾಲೂಕಿನ ಹೊಡಾಘಟ್ಟ ಗ್ರಾಮದ ಶಿವಣ್ಣ ಅವರ ಪುತ್ರಿ ಪುಷ್ಪಲತಾ (30) ಮೃತ ಪಟ್ಟಿದ್ದಾರೆ. ಇವರು ಬಳ್ಳಾರಿಯಲ್ಲಿ ಸರ್ಕಾರಿ ಬಸ್ ನಿರ್ವಾಹಕಿಯಾಗಿ ಕೆಲಸ ಮಾಡುತ್ತಿದ್ದು, ರಾತ್ರಿ ವೇಳೆ ಪಟ್ಟಣದ ಎಚ್.ಕೆ.ವಿ ನಗರದಲ್ಲಿರುವ ಸಂಬಂಧಿಕರಾದ ಪೊಲೀಸ್ ಚಿಕ್ಕಣ್ಣ ಅವರ ಮನೆಗೆ ನಡೆದುಕೊಂಡು ಬರುತ್ತಿದ್ದಾಗ ದುರಂತ ಸಂಭವಿಸಿದೆ.  ಘಟನೆ ನಡೆದಿದೆ. ಈ ಸಂಬಂಧ ಮದ್ದೂರು ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೇಕೆಗಳು ಸಾವು
ಮತ್ತೊಂದು ಪ್ರಕರಣದಲ್ಲಿ  ಟಿಪ್ಪರ್ ಲಾರಿ ಹರಿದು 5 ಮೇಕೆಗಳು ಮೃತಪಟ್ಟಿರುವ ಘಟನೆ ಮದ್ದೂರು ತಾಲೂಕಿನ ಆತಗೂರು ಹೋಬಳಿ ಮಾಚಹಳ್ಳಿ ಗೇಟ್ ಬಳಿ ನಡೆದಿದೆ.  ಸುದೀಪ್ ಎಂಬಾತ ಮೇಕೆಗಳನ್ನು ರಸ್ತೆ ಪಕ್ಕದಲ್ಲಿ  ಹೊಡೆದುಕೊಂಡು ಹೋಗುತ್ತಿದ್ದಾಗ ದಿಢೀರ್ ಬಂದ ಟಿಪ್ಪರ್ ಲಾರಿ ಹರಿದಿದ್ದು ನಾಲ್ಕು ಮೇಕೆಗಳು ಸ್ಥಳದಲ್ಲೇ ಸಾವನ್ನಪ್ಪಿದವು.
ಇದರಿಂದ ರೊಚ್ಚಿಗೆದ್ದ ಗ್ರಾಮಸ್ಥರು ಟಿಪ್ಪರ್ ಲಾರಿ ಚಾಲಕ ಇಮ್ತಿಯಾಜ್ ಮೇಲೆ ಹಲ್ಲೆ ನಡೆಸಿ, ಸತ್ತ ಮೇಕೆಗಳಿಗೆ ಸ್ಥಳದಲ್ಲೇ ಪರಿಹಾರ ನೀಡುವಂತೆ ಒತ್ತಾಯಿಸಿ ರಸ್ತೆ ತಡೆ ನಡೆಸಿದರು. ಇದರಿಂದ ಮದ್ದೂರು-ಕುಣಿಗಲ್ ಹೆದ್ದಾರಿಯಲ್ಲಿ ಕೆಲಕಾಲ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತು. ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಕೆಸ್ತೂರು ಪೊಲೀಸರು ಧರಣಿ ನಿರತ ಗ್ರಾಮಸ್ಥರನ್ನು ಸಮಾಧಾನಪಡಿಸಿ ರಸ್ತೆ ತೆರೆವುಗೊಳಿಸಿದರು. ವೈದ್ಯಾಧಿಕಾರಿ ಸ್ಥಳಕ್ಕೆ ಆಗಮಿಸಿ ಕುರಿಗಳ ಶವದ ಮಹಜರು ಮಾಡಿದರು. ಈ ಸಂಬಂಧ ಕೆಸ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

See also  ಟಿಕೆಟ್ ನೀಡಿ ಅನರ್ಹ ಶಾಸಕರನ್ನು ಗೆಲ್ಲಿಸುವುದು ನಮ್ಮ ಕರ್ತವ್ಯ: ಸಚಿವ ಸಿ.ಟಿ.ರವಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು