News Kannada
Sunday, September 25 2022

ಕರ್ನಾಟಕ

ಮಂಡ್ಯದಲ್ಲಿ ಅನಾಹುತ ಸೃಷ್ಟಿಸಿದ ವರುಣ - 1 min read

Photo Credit :

ಮಂಡ್ಯದಲ್ಲಿ ಅನಾಹುತ ಸೃಷ್ಟಿಸಿದ ವರುಣ

ಮಂಡ್ಯ: ವಿವಿಧ ಪೂಜೆ ಹವನಗಳನ್ನು ಮಾಡುತ್ತಾ ಮಳೆಗಾಗಿ ಪರಿತಪಿಸುತ್ತಿದ್ದ ಮಂಡ್ಯದಲ್ಲಿ ವರುಣ ಕರುಣೆ ತೋರಿ ಮಳೆ ಸುರಿಸಿದ್ದು, ಒಂದೆಡೆ ಭೂಮಿ ತಂಪಾಗಿ ರೈತರು ಸಂತೋಷ ಪಟ್ಟರೂ ಮತ್ತೊಂದೆಡೆ ಮಳೆಯ ರಭಸಕ್ಕೆ ಭಾರೀ ಅನಾಹುತ ಸಂಭವಿಸಿದೆ.

ಮಂಡ್ಯ ನಗರ ಹಾಗೂ ಗ್ರಾಮೀಣ ಭಾಗದ ಬಹುತೇಕ ಕಡೆಗಳಲ್ಲಿ ಮರಗಳು ನೆಲಕ್ಕುರುಳಿದಲ್ಲದೆ, ವಿದ್ಯುತ್ ಕಂಬದ ಮೇಲೆಯೂ ಬಿದ್ದ ಪರಿಣಾಮ ಕೆಲವೆಡೆ ಕತ್ತಲೆಯಲ್ಲಿ ದಿನ ಕಳೆಯುವಂತಾಯಿತು. ಮರಗಳನ್ನು ತೆರವುಗೊಳಿಸಿ ಕಂಬನೆಟ್ಟು ವಿದ್ಯುತ್ ಸಂಪರ್ಕ ಕಲ್ಪಿಸುವ ವೇಳೆಗೆ ಚೆಸ್ಕಾಂ ಹರಸಾಹಸ ಪಡುವಂತಾಯಿತು.
ಮಳೆಗಾಳಿಗೆ ಒಂದು ಅಂದಾಜಿನ ಪ್ರಕಾರ  ಸುಮಾರು 40 ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ನೆಲಕ್ಕುರುಳಿವೆ ಎನ್ನಲಾಗಿದೆ. ನಗರ ವ್ಯಾಪ್ತಿಯಲ್ಲೇ 15ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಬಿದ್ದಿದ್ದರೆ, ಗ್ರಾಮಾಂತರ ಪ್ರದೇಶದ ಕೆರಗೋಡು ಬಳಿ 12ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಬಿರುಗಾಳಿಯ ಹೊಡೆತಕ್ಕೆ ಸಿಲುಕಿ ಕೆಳಗೆ ಬಿದ್ದಿವೆ. ಇನ್ನು ಬಸರಾಳು ಸುತ್ತಮುತ್ತ ಹತ್ತಕ್ಕೂ ಹೆಚ್ಚು ವಿದ್ಯುತ್ ಕಂಬಗಳು ನೆಲಕ್ಕುರುಳಿದ್ದವು.
ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ವಿಭಾಗದ ಜಿಲ್ಲಾಧ್ಯಕ್ಷ ಸಿದ್ದಲಿಂಗು ಅವರು ಬೈಕ್ನಲ್ಲಿ ತೆರಳುತ್ತಿದ್ದ ವೇಳೆ ಅಶೋಕನಗರದಲ್ಲಿರುವ ಕಾವೇರಿ ನರ್ಸಿಂಗ್ ಬಳಿ ಮರದ ರೆಂಬೆ ಬಿದ್ದು ತೀವ್ರವಾಗಿ ಗಾಯಗೊಂಡಿದ್ದಾರೆ. ತಕ್ಷಣ ಅವರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.

ನಗರದ ಕೆ.ಆರ್. ರಸ್ತೆಯಲ್ಲಿರುವ ಮಾಜಿ ಸಂಸದೆ ರಮ್ಯಾ ಅವರ ನಿವಾಸದ ಎದುರು ಸರ್.ಎಂ.ವಿ. ಕ್ರೀಡಾಂಗಣದ ಆವರಣದಲ್ಲಿದ್ದ ಭಾರೀ ಗಾತ್ರದ ಮರವೊಂದರ ಕೊಂಬೆ ಬಿದ್ದು ಬೈಕ್ ಜಖಂಗೊಂಡಿದೆ. ನಂದಾ ಚಿತ್ರಮಂದಿರದ ಹಿಂಭಾಗದಲ್ಲಿರುವ ಕೊಳಚೆ ಪ್ರದೇಶದಲ್ಲಿದ್ದ ಗೌರಮ್ಮ ಹಾಗೂ ಇತರರಿಗೆ ಸೇರಿದ 10ಕ್ಕೂ ಹೆಚ್ಚು ಮನೆಗಳ ಮೇಲ್ಚಾವಣಿಗಳು ಹಾರಿಹೋಗಿವೆ. ಮನೆಯಲ್ಲಿದ್ದ ವಸ್ತುಗಳು ಚೆಲ್ಲಾಪಿಲ್ಲಿಯಾಗಿವೆ. ಬಿರುಗಾಳಿಯಿಂದಾಗಿ ತಾಲೂಕಿನ ಪಣಕನಹಳ್ಳಿ ಗ್ರಾಮದ ಕಳಸಪ್ಪನ ಕರಿಯಪ್ಪರ ಪತ್ನಿ ನಿಂಗಮ್ಮ ಎಂಬುವರಿಗೆ ಸೇರಿದ ರೇಷ್ಮೆ ಚಾಕಿ ಮನೆ ಸಂಪೂರ್ಣ ಜಖಂಗೊಂಡಿದೆ. ಮೇಲ್ಛಾವಣಿ ಹಾರಿಹೋಗಿ ಸಹಸ್ರಾರು ರೂ. ನಷ್ಯ ಉಂಟಾಗಿದೆ.

ಒಟ್ಟಾರೆ ಮಂಡ್ಯ ಜಿಲ್ಲೆಯಲ್ಲಿ ಮಳೆ ಸುರಿದಿರುವುದು ಸಂತಸ ತಂದಿದ್ದರೂ ಅದು ಸೃಷ್ಟಿಸಿರುವ ಅವಾಂತರದಿಂದ ಜನ ಚೇತರಿಸಿಕೊಳ್ಳುವುದು ಕಷ್ಟವಾದಂತಾಗಿದೆ. ಮಳೆ ಸುರಿದಿದ್ದರಿಂದ ಗ್ರಾಮೀಣ ಪ್ರದೇಶದ ರೈತರು ಖುಷಿಯಾಗಿದ್ದಾರೆ. ಬಿಸಿಲಿನ ಧಗೆಯಿಂದ ಬೇಸತ್ತಿರುವ ರೈತರು ಇದೇ ರೀತಿ ಮಳೆ ಸುರಿದರೆ ಮುಂದಿನ ದಿನಗಳಲ್ಲಿ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಬಹುದೆಂದು ಹೇಳುತ್ತಾರೆ.

See also  ನಿರ್ಲಕ್ಷ್ಯಕ್ಕೊಳಗಾದ ಪಿರಿಯಾಪಟ್ಟಣದ ಮಡಿಕಟ್ಟೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು