News Kannada
Wednesday, September 28 2022

ಕರ್ನಾಟಕ

ಸತತ ಬರಗಾಲದಿಂದ ರೈತರಿಗಾಗಿರುವ ನಷ್ಟ ಪರಿಹಾರ ತುಂಬಿ ಕೊಡಲು ಒತ್ತಾಯಿಸಿ ಪ್ರತಿಭಟನೆ - 1 min read

Photo Credit :

ಸತತ ಬರಗಾಲದಿಂದ ರೈತರಿಗಾಗಿರುವ ನಷ್ಟ ಪರಿಹಾರ ತುಂಬಿ ಕೊಡಲು ಒತ್ತಾಯಿಸಿ ಪ್ರತಿಭಟನೆ

ಚಿಕ್ಕಮಗಳೂರು:  ಜಿಲ್ಲೆಯಲ್ಲಿ ಕಳೆದ 17 ವರ್ಷಗಳಿಂದ ಸಕಾಲದಲ್ಲಿ ಮಳೆ ಬಾರದೆ ಬೆಳೆ ನಷ್ಟ ಉಂಟಾಗಿ ಕಳೆದ 3 ವರ್ಷಗಳಿಂದ ಸತತ ಬರಗಾಲಕ್ಕೆ ತುತ್ತಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸರಕಾರ ಅಗತ್ಯ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯಕರ್ತರು ಆಜಾದ್ ಪಾರ್ಕ್ ನಲ್ಲಿ  ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.

ಸತತ ಬರಗಾಲಕ್ಕೆ ತುತ್ತಾಗಿ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿರುವ ರೈತರ ರಾಷ್ಟ್ರೀಕೃತ ಹಾಗೂ ಸಹಕಾರಿ ಸಂಸ್ಥೆಗಳ ಸಂಪೂರ್ಣ ಸಾಲ ಮನ್ನಾ ಮಾಡಬೇಕು. ರೈತರಿಗೆ ಸಾಲ ನೀಡಬೇಕು. ಜಿಲ್ಲೆಯ ಪಶ್ಚಿಮ ಘಟ್ಟ ಭಾಗಗಳಲ್ಲಿ ಕೆರೆ-ಕಟ್ಟೆಗಳು ಒತ್ತುವರಿಯಾಗಿರುವುದಲ್ಲದೇ ಮುಚ್ಚಿ ಹೋಗಿರುವ ಎಲ್ಲಾ ಕೆರೆ-ಕಟ್ಟೆಗಳನ್ನು ದುರಸ್ಥಿಪಡಿಸುವ ಮೂಲಕ ಮಳೆಗಾಲದಲ್ಲಿ ಮಳೆ ನೀರು ಬಸಿದು ಹೋಗದಂತೆ ತಡೆ ಹಿಡಿಯಬೇಕು.

ಬಯಲು ಭಾಗದ ಕೆರೆ-ಕಟ್ಟೆ, ಹಳ್ಳ-ಕೊಳ್ಳಗಳಿಗೆ ನೀರು ತುಂಬಿಸುವ ಮೂಲಕ ಜಲಮೂಲ ಮತ್ತು ಅಂತರ್ಜಲ ವೃದ್ದಿಗೆ ಕ್ರಮ ಕೈಗೊಳ್ಳಬೇಕು. ಜಿಲ್ಲೆಯಲ್ಲಿ ನಡೆಯುತ್ತಿರುವ ನೀರಾವರಿ ಯೋಜನೆಗಳನ್ನು ತ್ವರಿತಗತಿಯಲ್ಲಿ ಮುಗಿಸಬೇಕು ಎಂದು ಒತ್ತಾಯಿಸಿದರು. ಕೃಷಿಗೆ ಬೇಕಾದ ಪರಿಕರಗಳನ್ನು ಗೊಬ್ಬರ, ನೀರು, ಬೀಜ, ವಿದ್ಯುತ್ ಇತ್ಯಾದಿಗಳನ್ನು ರೈತ ಉತ್ಪಾಧನೆ ಮುಂದುವರಿಸಲು ಸಾದ್ಯವಾಗುವ ಬೆಲೆಯಲ್ಲಿ ದೊರಕಿಸಲು ಕ್ರಮ ಜರುಗಿಸಬೇಕು. ರೈತರ ಉತ್ಪನ್ನಗಳಿಗೆ ನ್ಯಾಯಯುತ ಬೆಲೆ ನಿಗದಿಪಡಿಸಿ ಸರ್ಕಾರವೇ ಖರೀದಿಸಬೇಕು. ರಸಗೊಬ್ಬರ ಮತ್ತು ಕೀಟನಾಶಕಗಳ ವಂಚಕ ಕಂಪೆನಿ/ಮಾರಾಟಗಾರರಿಂದ ರೈತರ ಕ್ರೂರ ಶೋಷಣೆ ನಿಲ್ಲಬೇಕು. ಕಳಪೆ ಗುಣಮಟ್ಟ ಖೊಟ್ಟಿಮಾಲು, ದುಪ್ಪಟ್ಟು ಬೆಲೆ ಕಾಳ ಸಂತೆ ವಿರುದ್ದ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು. ಬರಗಾಲಕ್ಕೆ ತುತ್ತಾಗಿರುವ ರೈತರಿಗೆ ಕನಿಷ್ಟ 25 ಸಾವಿರ ಬೆಲೆ ನಷ್ಟ ಕೊಡಬೇಕು. ಜಿಲ್ಲೆಯ ಎಲ್ಲಾ ಬರಗಾಲ ಪೀಡಿತ ಪ್ರದೇಶಗಳಲ್ಲಿ ಗೋಶಾಲೆ ತೆರೆಯಬೇಕು. ಎಲ್ಲಾ ಬೆಳೆಗಳಿಗೆ ಬೆಲೆ ಸ್ಥಿರೀಕರಣ ನಿಧಿಯ ಸ್ಥಾಪನೆ ಹಾಗೂ ಎಲ್ಲಾ ಬೆಳೆಡಗಳಿಗೆ ಸಾರ್ವತ್ರಿಕ ವಿಮೆ ಸೌಲಭ್ಯ ನೀಡಲು ಕ್ರಮ ಕೈಗೊಳ್ಳಬೇಕು. ಡಾ. ಕಸ್ತೂರಿ ರಂಗನ್ ವದರಿ ಮಲೆನಾಡು ಪ್ರದೇಶದ ಜನವಸತಿ ಮತ್ತು ಕೃಷಿಗೆ ಮಾರಕವಾಗಿರುವ್ಯದರಿಂದ ಜಾರಿ ಮಾಡದಂತೆ ಕ್ರ ಜರುಗಿಸಬೇಕು ಎಂದು ಮನವಿ ಮಾಡಿದ್ದಾರೆ.

See also  ಸಂತ್ರಸ್ತರ ಗ್ರಾಮದಲ್ಲಿ “ಅಕ್ಕ” ಬಳಗದಿಂದ ಶಾಲೆ ನಿರ್ಮಾಣ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು