ಚಿಕ್ಕಮಗಳೂರು: ಜಿಲ್ಲೆಯ ವಿವಿಧ ಕಡೆಗಳಲ್ಲಿ ಸಿಡಿಲು, ಗುಡುಗು ಸಹಿತ ಗಾಳಿ ಮಿಶ್ರಿತ ಮಳೆ ಸುರಿಯುವ ಮೂಲಕ ಬಿಸಿಲ ಬೇಗೆಯಿಂದ ಕಂಗಾಲಾಗಿದ್ದ ಜನರಿಗೆ ನೆಮ್ಮದಿಯ ನಿಟ್ಟುಸಿರುವ ಬಿಡುವಂತೆ ಮಾಡಿದೆ.
ಕಳೆದ ಕೆಲವು ಎರಡು ದಿನದ ಹಿಂದೆ ರೇವತಿ ಮಳೆ ವರ್ಷದ ಮೊದಲ ರೂಪದಲ್ಲಿ ಸುರಿದಿತ್ತು. ಸತತ ಆರು ವರ್ಷಗಳಿಂದ ಭೀಕರ ಬರಗಾಲದಿಂದ ನಲುಗಿರುವ ಮಲೆನಾಡು,ಅರೆ ಮಲೆನಾಡು ಮತ್ತು ಬಯಲುಸೀಮೆ ಭೂಪ್ರದೇಶಗಳನ್ನು ಒಳಗೊಂಡಿರುವ ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಳೆ ಇಲ್ಲದೆ ರೈತರು, ಬೆಳೆಗಾರರು, ಕೂಲಿ ಕಾರ್ಮಿಕರು ಸೇರಿದಂತೆ ಸಾಮಾನ್ಯ ಜನರು ತೀವ್ರ ಕಂಗಾಲಾಗುವಂತೆ ಮಾಡಿತ್ತು. ಆದ್ರೆ ಇಂದೂ 1 ಗಂಟೆಗೂ ಅಧಿಕ ಕಾಲ ಸುರಿದ ನಿರಂತರ ಮಳೆಯಿಂದ ಜನರು ನಿಟ್ಟುಸಿರು ಬಿಡುವಂತೆ ಮಾಡಿದ್ದು ಧರೆ ಸ್ವಲ್ವ ತಂಪಾಗುವಂತೆ ಮಾಡಿದೆ.ಒಂದು ಗಂಟೆಗೂ ಅಧಿಕ ಸುರಿದ ಮಳೆಯಿಂದ ನಗರದ ಕೆಲ ರಸ್ತೆಗಳಲ್ಲಿ ವಾಹನ ಸಂಚಾರದಲ್ಲಿ ಅಸ್ತವ್ಯಸ್ಥ ವಾತವರಣ ನಿರ್ಮಾಣ ಆಗಿತ್ತು. ಇಂದಿನ ಈ ಮಳೆಯ ಆಗಮನ ರೈತಾಪಿ ಸಹಿತ ಬೆಳೆಗಾರರು ಹಾಗೂ ಸಾಮಾನ್ಯ ಜನರಿಗೆ ಹರ್ಷವನ್ನುಂಟು ಮಾಡಿದೆ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ, ತಾಲೂಕಿನ ಕೆಲವೆಡೆ ಮಳೆಯಾಗಿದೆ…