News Kannada
Friday, September 30 2022

ಕರ್ನಾಟಕ

ರೆಸಾರ್ಟ್ ನಿಂದ ಅಡಿಯ ಜನಾಂಗಕ್ಕೆ ತೊಂದರೆ: ಕಾವೇರಿಸೇನೆ ಆರೋಪ - 1 min read

Photo Credit :

ರೆಸಾರ್ಟ್ ನಿಂದ ಅಡಿಯ ಜನಾಂಗಕ್ಕೆ ತೊಂದರೆ: ಕಾವೇರಿಸೇನೆ ಆರೋಪ

ಮಡಿಕೇರಿ: ಕಕ್ಕಬ್ಬೆ ಕುಂಜಿಲ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಯವಕಪಾಡಿ ಗ್ರಾಮದಲ್ಲಿರುವ ರೆಸಾರ್ಟ್ ವೊಂದು ಈ ಭಾಗದಲ್ಲಿ ವಾಸಿಸುತ್ತಿರುವ ಅಡಿಯ ಜನಾಂಗ ಬಾಂಧವರು ಸಂಚರಿಸುತ್ತಿದ್ದ ರಸ್ತೆಗೆ ತಡೆಯೊಡ್ಡಿದೆ ಎಂದು ಆರೋಪಿಸಿರುವ ಕಾವೇರಿಸೇನೆ ಸಂಘಟನೆ ಒಂದು ತಿಂಗಳ ಒಳಗಾಗಿ ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ಜಿಲ್ಲಾಧಿಕಾರಿಗಳ ಕಛೇರಿ ಎದುರು ಪ್ರತಿಭಟನೆ ನಡೆಸುವುದಾಗಿ ಕಾವೇರಿಸೇನೆ ಸಂಘಟನೆ ಹಾಗೂ ಅಡಿಯ ಜನಾಂಗ ಬಾಂಧವರು ಎಚ್ಚರಿಕೆ ನೀಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾವೇರಿಸೇನೆ ಸಂಚಾಲಕ ಕೆ.ಎ. ರವಿಚಂಗಪ್ಪ, ಕಳೆದ ಐವತ್ತು, ಅರವತ್ತು ವರ್ಷಗಳಿಂದ ಯವಕಪಾಡಿ ವ್ಯಾಪ್ತಿಯಲ್ಲಿ ನೆಲೆ ನಿಂತಿರುವ ಅಡಿಯ ಕುಟುಂಬಗಳಿಗೆ ಸಂಚಾರಕ್ಕಿದ್ದ ರಸ್ತೆಗೆ ಅಡ್ಡಿಪಡಿಸಲಾಗಿದ್ದು, ಈ ಪ್ರಕರಣದಲ್ಲಿ ರಾಜಕಾರಣಿಗಳು ಹಾಗೂ ಅಧಿಕಾರಿಗಳು ಶಾಮೀಲಾಗಿದ್ದಾರೆ ಎಂದು ಆರೋಪಿಸಿದರು.

ಕಳೆದ ಅನೇಕ ವರ್ಷಗಳಿಂದ ಅಡಿಯ ಜನಾಂಗ ಬಂಧುಗಳು ಸಂಚರಿಸುತ್ತಿದ್ದ ರಸ್ತೆಗೆ ಅಡ್ಡಲಾಗಿ ಗೇಟ್ ನಿರ್ಮಿಸಿರುವ ರೆಸಾರ್ಟ್ ಆಡಳಿತ ಮಂಡಳಿ ಅನ್ಯಾಯವೆಸಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಇತ್ತೀಚೆಗೆ ಸಿಮೆಂಟ್ ರಸ್ತೆ ನಿರ್ಮಿಸಿದ ರೆಸಾರ್ಟ್, ಈ ರಸ್ತೆಯಲ್ಲಿ ಅಡಿಯರು ಸೇರಿದಂತೆ ಎಲ್ಲರು ಸಂಚರಿಸಬಹುದೆಂದು ಭರವಸೆ ನೀಡಿತ್ತು. ಆದರೆ, ಇದೀಗ ಗೇಟನ್ನು ಅಳವಡಿಸಿರುವ ರೆಸಾರ್ಟ್, ಅಡಿಯರು ಈ ರಸ್ತೆಯನ್ನು ಬಳಸದಂತೆ ನಿರ್ಬಂಧ ಹೇರಿದೆ. ಶ್ರೀಮಂತ ಪ್ರವಾಸಿಗರು ರೆಸಾರ್ಟ್ ಗೆ ಆಗಮಿಸುವುದರಿಂದ ಅಡಿಯರು ಈ ಮಾರ್ಗವನ್ನು ಬಳಸಿದರೆ ಅಸಹ್ಯಕರ ವಾತಾವರಣ ಸೃಷ್ಟಿಯಾಗುತ್ತದೆ ಎಂದು ರೆಸಾರ್ಟ್ ಆಡಳಿತ ಮಂಡಳಿ ಹೀಯಾಳಿಸುತ್ತಿದೆಯೆಂದು ರವಿಚಂಗಪ್ಪ ಆರೋಪಿಸಿದರು.

ಮುಂದಿನ ಮೂವತ್ತು ದಿನಗಳ ಒಳಗೆ ಜಿಲ್ಲಾಡಳಿತ ಸ್ಥಳ ಪರಿಶೀಲನೆ ನಡೆಸಿ ರಸ್ತೆಯನ್ನು ಸಂಚಾರಕ್ಕೆ ಮುಕ್ತಗೊಳಿಸದಿದ್ದಲ್ಲಿ ಹೋರಾಟವನ್ನು ತೀವ್ರಗೊಳಿಸುವುದಾಗಿ ಎಚ್ಚರಿಕೆ ನೀಡಿದರು. ಜಿಲ್ಲಾ ಉಸ್ತುವಾರಿ ಸಚಿವರಿಗೆ ಅಡಿಯರು ಈಗಾಗಲೆ ಮನವಿಯನ್ನು ಸಲ್ಲಿಸಿದ್ದರೂ ಯಾವುದೇ ಸ್ಪಂದನ ದೊರಕಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದರು.

ಸತ್ಯಾನ್ವೇಷಣಾ ಸಮಿತಿಯ ಪ್ರಮುಖರಾದ ಕೇಟೋಳಿರ ಸನ್ನಿ ಸೋಮಣ್ಣ ಮಾತನಾಡಿ, ಕಾನೂನು ಬಾಹಿರವಾಗಿ ರೆಸಾರ್ಟ್ ತಲೆ ಎತ್ತಿರುವ ಬಗ್ಗೆ 2007ರಿಂದಲೇ ಗ್ರಾಮ ಪಂಚಾಯ್ತಿ ಮೂಲಕ ಜಿಲ್ಲಾಡಳಿತ ಹಾಗೂ ಸರ್ಕಾರದ ಗಮನ ಸೆಳೆಯುತ್ತಾ ಬಂದಿದ್ದರು ಇಲ್ಲಿಯವರೆಗೆ ರೆಸಾರ್ಟ್ ವಿರುದ್ಧ ಕ್ರಮ ಕೈಗೊಂಡಿಲ್ಲವೆಂದು ಆರೋಪಿಸಿದರು. ಪರಿಸರ ಕಾಯ್ದೆಯನ್ನು ಉಲ್ಲಂಘಿಸಿರುವ ಬಗ್ಗೆ ಸಾಕಷ್ಟು ಸಾಕ್ಷಿಗಳಿವೆ. ಹೊಳೆ, ನದಿ, ಜಲ ಮೂಲಗಳಿರುವ ಪ್ರದೇಶದಲ್ಲಿ ಕಟ್ಟಡ ನಿರ್ಮಾಣಗೊಂಡಿದೆ. ಕಾಡಾನೆಗಳ ಸಂಚಾರಕ್ಕೆ ಅಡಚಣೆ ಉಂಟಾಗಿದ್ದು, ಕಾಡಾನೆಗಳು ಗ್ರಾಮಕ್ಕೆ ದಾಳಿ ಇಡುತ್ತಿವೆ.

ನಿರ್ಗತಿಕರಾಗಿರುವ ಅಡಿಯರಿಗೆ ಕುಡಿಯುವ ನೀರು ಕೂಡ ಸಿಗದಂತೆ ಪ್ರಾಕೃತಿಕವಾಗಿ ಹರಿಯುವ ನೀರಿಗೆ ರೆಸಾರ್ಟ್ ತಡೆಯೊಡ್ಡಿದೆ. ಶತಮಾನಗಳಷ್ಟು ಹಳೆಯದಾದ ರಸ್ತೆಯನ್ನು ನಿರ್ಬಂಧಿಸಲಾಗಿದ್ದು, ಸರ್ವೇ ಮಾಡಿದ ನಕ್ಷೆಯಲ್ಲಿ ನಿಯಮವನ್ನು ಉಲ್ಲಂಘಿಸಿ ಮೂರು ಭಾಗದಲ್ಲಿ ರಸ್ತೆ ಇರುವಂತೆ ತೋರಿಸಲಾಗಿದೆ ಎಂದು ಆರೋಪಿಸಿದರು. ಅಡಿಯರನ್ನು ಕೀಳುಮಟ್ಟದಲ್ಲಿ ನಿಂದನೆ ಮಾಡುತ್ತಿರುವ ರೆಸಾರ್ಟ್ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಸನ್ನಿ ಸೋಮಣ್ಣ ಒತ್ತಾಯಿಸಿದರು. ಅಡಿಯರ ವಿರುದ್ಧ ಕೀಳು ಮಟ್ಟದ ಭಾಷೆಯನ್ನು ಬಳಸಲಾಗುತ್ತಿದ್ದು, ಇದು ಶೋಷಣೆ ಮತ್ತು ಜಾತಿ ನಿಂದನೆ ಅಲ್ಲವೆ ಎಂದು ಪ್ರಶ್ನಿಸಿದರು.

See also  ಕೆರೆಗೆ ಹಾರಿ ಯುವ ಜೋಡಿ ಆತ್ಮಹತ್ಯೆ

ಸ್ಥಳೀಯ ನಿವಾಸಿಗಳಾದ ಅಡಿಯರ ಅಮ್ಮುಣಿ, ಸುಂದರಿ ಹಾಗೂ ಚಾತ ಮಾತನಾಡಿ, ರೆಸಾರ್ಟ್ ನಿಂದ ತಮ್ಮ ನಿತ್ಯ ಬದುಕಿಗೆ ಆಗುತ್ತಿರುವ ತೊಂದರೆಗಳ ಬಗ್ಗೆ ಬೇಸರ ವ್ಯಕ್ತಪಡಿಸಿದರು. ರಸ್ತೆ ಬಂದ್ ಮಾಡಿರುವುದರಿಂದ ವಿದ್ಯಾರ್ಥಿಗಳು ಶಾಲೆಗೆ ತೆರಳಲು ಸಾಧ್ಯವಾಗುತ್ತಿಲ್ಲ ಮಾತ್ರವಲ್ಲ, ತಮಗೆ ಕೂಲಿ ಕೆಲಸಕ್ಕೆ ತೆರಳಲು ಸಾಧ್ಯವಾಗುತ್ತಿಲ್ಲವೆಂದು ಅಸಹಾಯಕತೆ ವ್ಯಕ್ತಪಡಿಸಿದರು.

ಇದೀಗ ಗುರುತಿಸಿರುವ ರಸ್ತೆ 12 ಕಿ.ಮೀ. ದೂರದ್ದಾಗಿದ್ದು, ಅಂಬೇಡ್ಕರ್ ವಸತಿ ಯೋಜನೆಯ ಮೂಲಕ ಮನೆ ನಿರ್ಮಿಸಿಕೊಳ್ಳಲು ಪರಿಕರಗಳನ್ನು ಕೊಂಡೊಯ್ಯಲು ಕೂಡ ಸಾಧ್ಯವಾಗುತ್ತಿಲ್ಲ. ಖಾಲಿ ಕಾಗದದಲ್ಲಿ ಸಹಿ ಹಾಕುವಂತೆ ನಮ್ಮನ್ನು ಒತ್ತಾಯಿಸುತ್ತಿರುವ ರೆಸಾರ್ಟ್ ಆಡಳಿತ ಮಂಡಳಿ ಕೀಳು ಜಾತಿಯವರೆಂದು ಅಸಹ್ಯ ಪಡುತ್ತಿರುವುದಾಗಿ ಆರೋಪಿಸಿದರು. ಶತಮಾನಗಳಿಂದ ನಡೆದಾಡುತ್ತಿದ್ದ ರಸ್ತೆಯನ್ನು ಬಿಟ್ಟು ಕೊಡದಿದ್ದಲ್ಲಿ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಎಚ್ಚರಿಕೆ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಅಡಿಯರ ಮಣಿ ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು