News Kannada
Saturday, October 08 2022

ಕರ್ನಾಟಕ

ಸಾಲಬಾಧೆ ತಾಳಲಾರದೆ ತಂದೆ-ಮಗ ಆತ್ಮಹತ್ಯೆ: ಸಂಕಷ್ಟಲ್ಲಿ ರೈತನ ಕುಟುಂಬ - 1 min read

Photo Credit :

ಸಾಲಬಾಧೆ ತಾಳಲಾರದೆ ತಂದೆ-ಮಗ ಆತ್ಮಹತ್ಯೆ: ಸಂಕಷ್ಟಲ್ಲಿ ರೈತನ ಕುಟುಂಬ

ಕಾಫಿನಾಡು ಚಿಕ್ಕಮಗಳೂರು ಅಕ್ಷರಶಃ ಬರಗಾಲದಿಂದ ತತ್ತರಿಸಿ ಹೋಗಿದೆ. ಒಂದೆಡೆ ಮೇವಿಲ್ಲದೆ ಜಾನುವಾರುಗಳು ತತ್ತರಿಸಿ ಹೋಗ್ತಿದ್ರೆ, ಇನ್ನೊಂದೆಡೆ ರೈತರ ಆತ್ಮಹತ್ಯೆ ಸರಣಿ ಮುಂದುವೆರೆಯುತ್ತಿದೆ. ಇದರ ಮಧ್ಯೆ ಮನಕಲುಕುವ ಘಟನೆ ನಡೆದು ಹೋಗಿತ್ತು. ಸಾಲಬಾಧೆ ತಾಳಲಾರದೆ ಮಗ ಆತ್ಮಹತ್ಯೆ ಮಾಡ್ಕೊಂಡ ಅಂತ ಇಂದು ತಂದೆಯೂ ಆತ್ಮಹತ್ಯೆ ಮಾಡಿಕೊಂಡಿದ್ದ ಘಟನೆ ಜರುಗಿತ್ತು.

ಮೃತ ರೈತನ ಕುಟುಂಬಕ್ಕೆ ಗೃಹ ಸಚಿವ ಪರಮೇಶ್ವರ್ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವಾನ ಹೇಳಿದ ಕುರಿತು ಒಂದು ವರದಿ ಇಲ್ಲಿದೇ ನೋಡಿ… ಹೌದು ತಂದೆ ಮಗನ ಸಾವಿನಿಂದ ದಿಕ್ಕು ತೋಚದಂತದ ಕುಟುಂಬ, ಒಪ್ಪತ್ತು ಊಟಕ್ಕು ಕಿತ್ತು ತನ್ನುವ ಬಡತನ. ನೀರಿನ ಬೋರಿನಲ್ಲಿ ನೀರಿಲ್ಲದೆ ಕಂಗೆಟ್ಟ ಕುಟುಂಬ. ಇಂತಹ ಮನಕಲುಕುವ, ದುರದೃಷ್ಟಕರ ಘಟನೆ ಕಾಫಿ ನಾಡು ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲುಕು ಗುಳ್ಳೆದಹಳ್ಳಿಯಲ್ಲಿ ನಡೆದಿದೆ.

ರಾಜ್ಯದಲ್ಲಿ ಆವರಿಸಿರುವ ಭೀಕರ ಬರಗಾಲಕ್ಕೆ ಚಿಕ್ಕಮಗಳೂರು ಭಾಗದ ರೈತರು ಅಕ್ಷರ ಸಹ ತತ್ತರಿಸಿ ಹೋಗಿದ್ದಾರೆ.ಇದಕ್ಕೆ ಸಾಕ್ಷಿಯಾಗಿ ಮೊನ್ನೆ 24 ವರ್ಷದ ಯೋಗೇಶ್ ಬೋರ್ ನಲ್ಲಿ ನೀರಿ ಸಿಗಲಿಲ್ಲ ಎಂಬ ಹತಾಶೆಯಿಂದ ಆತ್ಮಹತ್ಯೆ ಮಾಡ್ಕೊಂಡಿದ್ದ. ಇನ್ನು 24 ವರ್ಷವಾದ್ರು ಸಹ ವ್ಯವಸಾಯದಲ್ಲಿ ಏನಾದ್ರು ಸಾಧನೆ ಮಾಡ್ಬೇಕು ಅಂತ ಸಾಕಷ್ಟು ಕನಸು ಕಟ್ಕೊಂಡಿದ್ದ..ಆದ್ರೇ ಕೊರೆಸಿದ ಸಾಲ್ಕು ಬೋರುಗಳ ಸಹ ಕೈಕೊಟ್ಟಿರುವ ಹಿನ್ನಲೆ ಮಗ ಆತ್ಮಹತ್ಯೆಗೆ ಶರಣಾದ ಹಾಗೂ ಮಾಡಿದ ಸಾಲವನ್ನು ತೀರಿಸಲಾಗದೆ ಕೀಟನಾಶಕ ಸೇವಿಸಿ ವಿದಿ ಆಟಕ್ಕೆ ಶನಿವಾರ ಬಲಿಯಾಗಿದ್ದ.

ತನ್ನ ಸಂಸಾರಕ್ಕೆ ಆಧಾರವಾಗಿದ್ದ ಮಗನೇ ಸತ್ತ ಮೇಲೆ ನಾನೇತಕೆ ಬದುಕಬೇಕು ಅಂತ ತಂದೆ ಶ್ರೀನಿವಾಸ್ ಮಗನಂತೆ ಕೀಟನಾಶಕ ಸೇವಿಸಿ ಆತ್ಮಹತ್ಯೆ ಶರಣಾಗಿದ್ದನು. ಈ ಹಿನ್ನಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ ಪರಮೇಶ್ವರ್ ಮೃತ ರೈತನ ಕುಟುಂಬದ ಮನೆ ಭೇಟಿ ನೀಡಿ ಸಾಂತ್ವಾನ ಹೇಳಿ ಸರ್ಕಾರದಿಂದ ಸಿಗುವ ಸವಲತ್ತು ಹಾಗೂ ಕುಟುಂಬಕ್ಕೆ ಸಮಾಧಾನದ ಮಾತುಗಳನ್ನು ಹೇಳಿ ನಿಮ್ಮ ಜೊತೆ ನಾವಿದ್ದೇವೆ ಎಂದೂ ಧೈರ್ಯ ತುಂಬಿದರು. ಮೃತ ಯೋಗಿಶ್ ನೀರಿನ ಬೋರಿಗಾಗಿ ಮತ್ತು ಬೆಳೆಯನ್ನು ಬೆಳೆಯಲು ಎರಡೂ ಲಕ್ಷಕ್ಕೂ ಅಧಿಕ ಸಾಲ ಮಾಡಿಕೊಂಡಿದ್ದ. ಇದರಿಂದ ಮನನೊಂದ ಯೋಗಿಶ್ ಆತ್ಮಹತ್ಯೆ ದಾರಿ ಹಿಡಿದು ಕೀಟನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದ. ಇನ್ನು ತನ್ನ ಈಡೀ ಸಂಸಾರವನ್ನು ಭುಜದಮೇಲೆ ಸಾಗಿಸಿಕೊಂಡು ಹೋಗ್ತಿದ್ದು ಮಗ ಯೋಗಿಶ್ ಆತ್ಮಹತ್ಯೆ ವಿಷಯ ತಿಳಿದ ತಂದೆಗೆ ಆಘಾತವಾಗಿತ್ತು. ಒಪ್ಪತ್ತು ಊಟಕ್ಕೂ ಪರೆದಾಡುವ ಸ್ಥಿತಿಯಲ್ಲಿ ಮಗ ಮಾಡಿದ ಸಾಲನೂ ತೀರಿಸೋದ, ಮಗನ ಸಾವಿನ ಸುದ್ದಿ ತಿಳಿದು ಸಾಯಬೇಕ ಅಂತ ತಂದೆ ಸಹ ಮಗನ ಹಾದಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಈ ಹಿನ್ನಲೆಯಲ್ಲಿ ಅವರ ಕುಟುಂಬಕ್ಕೆ ಸಾಂತ್ವಾನ ಮತ್ತು ಧೈರ್ಯ ತುಂಬಲು ಜನ ಪ್ರತಿನಿಧಿಗಳು ಅವರ ಮನೆಗೆ ಭೇಟಿ ನೀಡಿ ಘಟನೆ ವಿವರನ್ನು ಪಡೆದಿದ್ದಲ್ಲದೇ ಯೋಗೇಶ್ ತಮ್ಮನಿಗೆ ಕೆಲಸದ ಭರವಸೆಯನ್ನು ನೀಡಿದ್ದು ಸರ್ಕಾರದಿಂದ ಬರುವ ಎಲ್ಲ ಸವಲತ್ತುಗಳನ್ನು ಆದಷ್ಟು ಬೇಗ ಕೊಡಿಸುವ ಭರವಸೆಯನ್ನು ನೀಡಿ ಅವರ ಕುಟುಂಬಕ್ಕೆ ಧೈರ್ಯ ತುಂಬಿದರು. ಒಟ್ಟಾರೆಯಾಗಿ ಸಾಲ ಬಾಧೆ ಹಾಗೂ ನೀರಿನ ಸಮಸ್ಯೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದ ರೈತನ ಕುಟುಂಬಕ್ಕೆ ಸಚಿವರು ಹಾಗೂ ಜನ ಪ್ರತಿನಿಧಿಗಳು ಭೇಟಿ ನೀಡಿ ಅವರ ಕುಟುಂಬಕ್ಕೆ ಸಾಂತ್ವಾನ ಹೇಳಿ ನಿಮ್ಮ ಜೊತೆ ನಾವಿದ್ದೇವೆ ಎಂದೂ ಭರವಸೆ ನೀಡಿದ್ದು, ಇನ್ನಾದರೂ ಸರ್ಕಾರ ರೈತರ ಪರ ಎಂದು ಉದ್ದುದ್ದ ಭಾಷಣ ಮಾಡುವುದನ್ನ ಬಿಟ್ಟು ರೈತರು ಬದುಕಿರುವಾಗಲೇ ಸಹಾಯ ಮಾಡಿದರೇ, ಇಂತಹ ರೈತರ ಸಾವಿನ ಸರಣಿಯನ್ನ ಕಡಿಮೇ ಮಾಡಬಹುದು ಎಂಬುದು ಪ್ರಜ್ಞಾವಂತರ ಆಶಯವಾಗಿದೆ…

See also  ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಸಂಘದ ಅಧ್ಯಕ್ಷರಾಗಿ ಕೆ.ಎಸ್.ಮುತ್ತಮ್ಮ ಆಯ್ಕೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು