ಚಿಕ್ಕಮಗಳೂರು: ಅಲ್ಪ ಸ್ವಲ್ಪ ಹಣ ಕೂಡಿ ಹಾಕಿ ಜೆಸಿಬಿ ಕೊಂಡ್ರು, ಇದನ್ನೇ ಜೀವನಕ್ಕೆ ನಂಬಿದ್ರು, ಜೆಸಿಬಿ ಕೊಳ್ಳುವಾಗ ಫೈನಾನ್ಸ್ ಸಾಲ ಪಡೆದಿದ್ರು. ಅದ್ರೆ ಈಗ ಅದೇ ಸಾಲ ಇವರಿಗೆ ಮುಳ್ಳಾಯಿತು ಅನ್ಸುತ್ತೆ, ಇಡೀ ಕುಟುಂಬವೇ ನ್ಯಾಯಕ್ಕಾಗಿ ಎಸ್ಪಿ ಮೋರೆ ಹೋಗಲು ಮುಂದಾಗಿದ್ದಾರೆ, ಸಾಲ ಕಟ್ಟಿಲ್ಲ ಅಂತಾ ವ್ಯಕ್ತಿಯೊಬ್ಬ ಜೆಸಿಬಿ ತೆಗೆದುಕೊಂಡು ಹೋದವನ್ನು ಫೈನಾಸ್ಸ್ ಸಂಬಂಧ ಪಟ್ಟಿಲ್ಲ ಅಂತಾ ಆರೋಪಿಸಿ ಎಸ್ಪಿ ದೂರು ನೀಡಲು ಮುಂದಾಗಿದೆ.
ಇಡೀ ಕುಟುಂಬದ ಸದಸ್ಯರೇ ಚಿಕ್ಕಮಗಳೂರು ಎಸ್ಪಿ ಕಚೇರಿ ಮುಂದೇ ನಿಂತಿರೋರು ಕಡೂರು ತಾಲೂಕು ಪಂಚನಹಳ್ಳಿ ಸಮೀಪವಿರುವ ವಡ್ಡರಹಟ್ಟಿ ಗ್ರಾಮದ ತಿಮ್ಮರಾಜು ಕುಟುಂಬ, ಕಳೆದ 3 ವರ್ಷದ ಹಿಂದೆ ಕುಡಿಟ್ಟ ಹಣದೊಂದಿಗೆ ಫೈನಾನ್ಸ್ ಸಾಲ ಮಾಡಿಸಿ ಒಂದು ಜೆಸಿಬಿಯನ್ನು ಖರೀದಿಸಿದ್ರು, ಪ್ರತಿ ತಿಂಗಳಿಂಗೆ ಫೈನಾನ್ಸ್ ಗೆ ಕಟ್ಟಬೇಕಾದ ಹಣ 50 ಸಾವಿರ, ಜೆಸಿಬಿಯಿಂದ ಸರ್ಕಾರದ ಎನ್ಆರ್ಐಜಿ ಕೆಲಸವನ್ನು ಮಾಡಿಕೊಂಡು ಸಾಲವನ್ನು ಕಟ್ಟಿಕೊಂಡು ನೆಮ್ಮದಿಯಾಗಿದ್ದ ಕುಟುಂಬ ಕಳೆದ 4 ತಿಂಗಳಿನಿಂದ ಕೆಲಸವಿಲ್ಲದೆ ಫೈನಾನ್ಸ್ ಗೆ ಸಾಲ ಕಟ್ಟೋಕೆ ಆಗ ಸ್ಥಿತಿ ತಲುಪಿದ್ರು, ಆದ್ರೆ ಕಳೆದ ಕೆಲ ದಿನದ ಹಿಂದೆ ಅರುಣ್ ಎಂಬ ವ್ಯಕ್ತಿಯೊಬ್ಬರು ಸಾಲ ಕಟ್ಟಿಲ್ಲ ಅಂತಾ ಗ್ರಾಮಕ್ಕೆ ಬಂದೋರೆ 80 ಸಾವಿರ ದುಡ್ಡು ಹಾಗೂ ಜೆಸಿಬಿಯನ್ನು ತೆಗೆದುಕೊಂಡು ಹೋಗಿದ್ದಾರೆ. ಆದ್ರೆ ಉಳಿದ ಕಂತನ್ನು ಕಟ್ಟಿ ಜೆಸಿಬಿ ತರೋಣ ಅಂತಾ ಹೋದ್ರೆ ಆತ ಜೆಸಿಬಿ ಕೊಡದೇ ವಾಪಸ್ಸು ಕಳುಹಿಸಿದ್ಧಾನೆ ಅನ್ನೋದು ಇವರ ಆರೋಪವಾಗಿದೆ.
ಇನ್ನೂ ಜೆಸಿಬಿ ಹಣ ನೀಡಿದ್ರು ವಾಪಸ್ಸು ನೀಡ್ತಾ ಇಲ್ಲ ಅಂತಾ ಪಂಚನಹಳ್ಳೀ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ, ಅದ್ರೆ ಅಲ್ಲಿ ಫೈನಾನ್ಸ್ ನಿಂದ ಪತ್ರ ತನ್ನಿ ಅಂತಾ ತಿಳಿಸಿದ್ದಾರೆ, ಅದ್ರಂತೆ ಬೆಂಗಳೂರಿನ ಶ್ರೇಯಾ ಫೈನಾನ್ಸ್ ಗೆ ವಿಚಾರಿಸಿದಾಗ ಅರುಣ್ ಅನ್ನೋ ವ್ಯಕ್ತಿಯೇ ಕೆಲಸಕ್ಕಿಲ್ಲ ಅನ್ನೋ ವಿಚಾರ ಗೊತ್ತಾಗಿದ್ದು ಇವರಿಗೆ, ಶ್ರೇಯ ಫೈನಾನ್ಸ್ ನಿಂದ ಅಧಿಕೃತವಾಗಿ ಪತ್ರವನ್ನೇ ನೀಡಿ ದೂರು ನೀಡುವಂತೆ ತಿಳಿಸಿದ್ದಾರೆ, ಇದ್ರಿಂದ ಈ ಕುಟಂಬವೇ ನ್ಯಾಯಕ್ಕಾಗಿ ಪೊಲೀಸರ ಮೊರೆ ಹೋಗಿದ್ದಾರೆ.
ಕಳೆದ 20 ದಿನಗಳಿಂದ ಪಂಚನಹಳ್ಳಿ ಪೊಲೀಸರಿಗೆ ನ್ಯಾಯ ನೀಡುವಂತೆ ಮನವಿ ಮಾಡಿದ್ರು ನ್ಯಾಯ ಮಾತ್ರ ಸಿಗದಿದ್ರಿಂದ ಎಸ್ಪಿ ಕಚೇರಿಗೆ ಅಗಮಿಸಿ ಎಸ್ಪಿಗೆ ಮನವಿ ನೀಡಲು ಮುಂದಾಗಿದ್ಧಾರೆ. ಒಟ್ಟಾರೆಯಾಗಿ ಕುಟುಂಬಕ್ಕೆ ಆಧಾರವಾಗಿದ್ದ ಜೆಸಿಬಿ ನಾಪತ್ತೆಯಾಗಿದೆ. ಅನ್ನೋದು ಇವರ ಆರೋಪ, ಸ್ಥಳೀಯ ಠಾಣೆಯಲ್ಲಿ ನ್ಯಾಯ ಸಿಗಲಿಲ್ಲ ಅಂತಾ ಎಸ್ಪಿ ಮೊರೆ ಹೋಗಿದ್ದಾರೆ, ಎಸ್ಪಿ ತನಿಖೆಯ ನಂತರವಷ್ಟೆ ಸತ್ಯಾ ಸತ್ಯಾತೇ ಹೊರಬೀಳಬೇಕಿದೆ.