News Kannada
Sunday, September 25 2022

ಕರ್ನಾಟಕ

ಪಾಲೇಮಾಡು ವಿವಾದ: ಕೆ.ಮೊಣ್ಣಪ್ಪ ಗಡಿಪಾರಿಗೆ ಆಗ್ರಹ - 1 min read

Photo Credit :

ಪಾಲೇಮಾಡು ವಿವಾದ: ಕೆ.ಮೊಣ್ಣಪ್ಪ ಗಡಿಪಾರಿಗೆ ಆಗ್ರಹ

ಮಡಿಕೇರಿ: ಪಾಲೇಮಾಡು ವಿಚಾರವನ್ನು ಮುಂದಿಟ್ಟುಕೊಂಡು ಪದೇ ಪದೇ ಪ್ರತಿಭಟನೆ ಧರಣಿಗಳನ್ನು ನಡೆಸುವ ಮೂಲಕ ಪಂಚಾಯ್ತಿಯ ಅಭಿವೃದ್ಧಿ ಕಾರ್ಯಗಳಿಗೆ ತಡೆಯೊಡ್ಡುವುದನ್ನು ಮುಂದುವರಿಸಿದಲ್ಲಿ ಜಿಲ್ಲೆಯ ಎಲ್ಲಾ ಮೂಲ ನಿವಾಸಿಗಳ ಸಹಕಾರದೊಂದಿಗೆ ಜಿಲ್ಲಾಧಿಕಾರಿಗಳ ಕಛೇರಿ ಎದುರು ಪ್ರತಿಭಟನೆ ನಡೆಸುವುದಾಗಿ ಜಿಲ್ಲಾ ಪಂಚಾಯ್ತಿ ಸದಸ್ಯ ಮುರುಳಿ ಕರುಂಬಮ್ಮಯ್ಯ ಎಚ್ಚರಿಕೆ ನೀಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೊದ್ದೂರು ಗ್ರಾಮ ಪಂಚಾಯ್ತಿಯ ಅಭಿವೃದ್ಧಿ ಕಾರ್ಯಗಳನ್ನು ಕೈಬಿಟ್ಟು ಪ್ರತಿಭಟನೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಪಂಚಾಯ್ತಿಯ ಉಪಾಧ್ಯಕ್ಷೆ ಕುಸುಮಾವತಿ ಹಾಗೂ ಪ್ರತಿಭಟನೆಗಳ ಮೂಲಕ ಶಾಂತಿಗೆ ಧಕ್ಕೆ ತರುತ್ತಿರುವ ಹೋರಾಟಗಾರ ಕೆ.ಮೊಣ್ಣಪ್ಪ ಅವರನ್ನು ಜಿಲ್ಲೆಯಿಂದ ಗಡಿಪಾರು ಮಾಡಬೇಕೆಂದು ಒತ್ತಾಯಿಸಿದರು.

ಪಾಲೇಮಾಡಿನಲ್ಲಿ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣಕ್ಕೆ ಒದಗಿಸಿರುವ ಜಾಗದಲ್ಲಿ ಸ್ಮಶಾನಕ್ಕೆ ಜಾಗ ಒದಗಿಸಬೇಕೆಂದು ಆಗ್ರಹಿಸಿ ಹೋರಾಟ ನಡೆಸುತ್ತಿರುವ ಮೊಣ್ಣಪ್ಪ ಅವರು ಸಮಾಜದ ಶಾಂತಿಗೆ ಭಂಗವನ್ನುಂಟು ಮಾಡುವ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಪಾಲೆೇಮಾಡಿನಲ್ಲಿ ಕೆಲವು ನಾಮಫಲಕಗಳನ್ನು ತೆರವುಗೊಳಿಸಲು ಪೊಲೀಸ್ ನೆರವಿನೊಂದಿಗೆ ತೆರಳಿದ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಹಾಗೂ ತಹಸೀಲ್ದಾರ್ ಅವರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಘಟನೆಯೂ ನಡೆದಿದೆ ಎಂದು ಆರೋಪಿಸಿದರು.

ಕೆಲವು ದಿನಗಳ ಹಿಂದೆ ಪಾಲೆೇಮಾಡಿನ ರಸ್ತೆಯೊಂದಕ್ಕೆ ಟಿಪ್ಪು ಸುಲ್ತಾನ್ ಹೆಸರನ್ನು ನಾಮಕರಣ ಮಾಡುವ ಮೂಲಕ ಜಿಲ್ಲೆಯ ಜನತೆಗೆ ನೋವನ್ನುಂಟು ಮಾಡಲಾಗಿದೆ. ಈ ಹಿಂದೆಯೆ ಜಿಲ್ಲೆಯಲ್ಲಿ ಟಿಪ್ಪು ಜಯಂತಿ ನಡೆಸುವುದು ಬೇಡವೆಂದು ವಿರೋಧ ವ್ಯಕ್ತಪಡಿಸಿದ ಘಟನೆಗಳು ನಡೆದಿರುವ ಸಂದರ್ಭದಲ್ಲಿ ಪಾಲೆೇಮಾಡಿನಲ್ಲಿ ಇಂತಹ ಬೆಳವಣಿಗೆ ನಡೆದಿರುವುದು ಸರಿಯಲ್ಲ. ಜಿಲ್ಲಾಡಳಿತಕ್ಕೆ ಈ ಬಗ್ಗೆ ತಿಳಿಸಲಾಗಿದ್ದರೂ ಇಲ್ಲಿಯವರೆಗೂ ಕ್ರಮ ಕೈಗೊಳ್ಳದೆ ಇರುವುದು ಯಾಕೆ ಎಂದು ಮುರುಳಿ ಕರುಂಬಮ್ಮಯ್ಯ ಪ್ರಶ್ನಿಸಿದರು.

ಹೊದ್ದೂರು ಗ್ರಾಮ ಪಂಚಾಯ್ತಿ ಅಧ್ಯಕ್ಷ ಕುಲ್ಲಚನ ದಿನೆೇಶ್ ಮಾತನಾಡಿ, ಕಳೆದ ಆರು ತಿಂಗಳಿನಿಂದ ಪಾಲೆೇಮಾಡು ವಿಚಾರದ ಸಂಘರ್ಷಗಳಿಂದ ಗ್ರಾಮ ಪಂಚಾಯ್ತಿ ಬಲಿಪಶುವಾಗುವಂತಾಗಿದೆ. ಕುಡಿಯುವ ನೀರು, ವಿದ್ಯುದೀಕರಣ, ಪಟ್ಟೆ ನೀಡುವಂತಹ ಕೆಲಸಗಳು ಸರ್ಕಾರದಿಂದ ನಡೆಯಬೇಕಾಗಿದೆ. ಆದರೆ, ಈ ವಿಚಾರವನ್ನು ಮುಂದಿಟ್ಟುಕೊಂಡು ಪಾಲೇಮಾಡು ನಿವಾಸಿಗಳು ಪಂಚಾಯ್ತಿ ವಿರುದ್ಧ ನಡೆಸುವ ಹೋರಾಟಗಳಿಂದ ಆಡಳಿತ ನಡೆಸುವುದಕ್ಕೆ ಅಡಚಣೆಯಾಗಿದೆ. ಈ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಅಗತ್ಯ ಕ್ರಮ ಕೈಗೊಳ್ಳುವ ಮೂಲಕ ಅಲ್ಲಿನ ನಿವಾಸಿಗಳಿಗೆ ವಸತಿ ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ನೀಡಲು ಮುಂದಾಗಬೇಕೆಂದು ಒತ್ತಾಯಿಸಿದರು.

ಮಡಿಕೆೇರಿ ತಾಪಂ ಅಧ್ಯಕ್ಷೆ ತೆಕ್ಕಡೆ ಶೋಭಾ ಮೋಹನ್ ಮಾತನಾಡಿ, ಪಾಲೆೇಮಾಡು ಸಮಸ್ಯೆ ಬಗೆಹರಿಕೆಯ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಮತ್ತು ಸಿಇಒ ಅವರೊಂದಿಗೆ ಚರ್ಚಿಸಿದ್ದೇನೆ. ನಿಯಮಗಳ ಅನ್ವಯ ನವಗ್ರಾಮ ಯೋಜನೆ ಜಾರಿಗೆ ಅವಕಾಶವಿದೆ. ಆದರೆ, ಪಾಲೇಮಾಡಿನಲ್ಲಿ ನಾಯಕನೆಂದು ಗುರುತಿಸಿಕೊಂಡಿರುವ ವ್ಯಕ್ತಿ ಇದಕ್ಕೆ ಸಮ್ಮತಿ ವ್ಯಕ್ತಪಡಿಸುತ್ತಿಲ್ಲ. ತಮಗೆ ಅಕ್ರಮ ಸಕ್ರಮದಡಿಯೇ ಜಾಗ ಒದಗಿಸುವಂತೆ ಆಗ್ರಹಿಸುತ್ತಿರುವುದಾಗಿ ಬೇಸರ ವ್ಯಕ್ತಪಡಿಸಿದರು.

ಹೊದ್ದೂರು ಪಂಚಾಯ್ತಿಯಲ್ಲಿ ಯಾವುದೇ ಜಾತಿ ಮತ ಭೇದಗಳಿಲ್ಲದೆ ಕಾರ್ಯ ನಿರ್ವಹಿಸಲಾಗುತ್ತಿದೆ. ಇಂತಹ ಸೌಹಾರ್ದತೆ ಕದಡುವ ಪ್ರಯತ್ನ ಪಾಲೆೇಮಾಡಿನ ಹೋರಾಟಗಳಿಂದ ನಡೆಯುತ್ತಿದೆ. ಇದರಿಂದ ಪಂಚಾಯ್ತಿಯಲ್ಲಿ ಇತರರು ಬದುಕಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ನಮ್ಮ ಅಸ್ತಿತ್ವಕ್ಕಾಗಿ ಜಿಲ್ಲಾಡಳಿತ ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡಿ, ಘಟನೆಗೆ ಕಾರಣರಾದವರನ್ನು ಗಡೀಪಾರು ಮಾಡಬೇಕೆಂದು ಆಗ್ರಹಿಸುವುದಾಗಿ ತಿಳಿಸಿದರು.

See also  ಪ್ರತಿ ತಿಂಗಳ ನಾಲ್ಕನೇ ಶನಿವಾರವೂ ಸಾರ್ವತ್ರಿಕ ರಜೆ

ಹಕ್ಕು ಪತ್ರದ ಹೋರಾಟಕ್ಕೆ ನಮ್ಮ ಬೆಂಬಲವಿದೆ:
ಹೊದ್ದೂರು ಗ್ರಾಮ ಪಂಚಾಯ್ತಿ ಸದಸ್ಯ ಅಜಯ್ ಕುಮಾರ್ ಮಾತನಾಡಿ, ಪಾಲೇಮಾಡಿನ ನಿವಾಸಿಗಳು ಹಕ್ಕುಪತ್ರದ ಒಂದು ಅಜೆಂಡಾವನ್ನು ಮುಂದಿಟ್ಟುಕೊಂಡು ಪ್ರತಿಭಟನೆ ನಡೆಸಬೇಕೇ ಹೊರತು, ನಾಮಫಲಕ ಅಥವಾ ಬೇರಾವುದೋ ವಿಚಾರಗಳನ್ನು ಮುಂದಿಟ್ಟುಕೊಂಡು ವಿನಾಕಾರಣ ಹೋರಾಟ ನಡೆಸುವ ಮೂಲಕ ಜನರ ಹಾದಿ ತಪ್ಪಿಸುವ ಯತ್ನ ಮಾಡಬಾರದೆಂದು ಒತ್ತಾಯಿಸಿದರು.

ಪಾಲೇಮಾಡಿನಲ್ಲಿ ನೆಲೆ ನಿಂತಿರುವ ನೈಜ ನಿರಾಶ್ರಿತರಿಗೆ ತಲಾ 5 ಸೆಂಟ್ ಜಾಗ ಹಂಚಿಕೆಗೆ ನಮ್ಮ ಬೆಂಬಲವೂ ಇದ್ದು, ಒಂದು ಅಜೆಂಡಾ ಮೂಲಕ ಹೋರಾಟ ನಡೆಸಿದರೆ ತಾವು ಕೂಡ ಬೆಂಬಲ ಸೂಚಿಸಿ ಜಿಲ್ಲಾಧಿಕಾರಿಗಳ ಕಛೇರಿ ಎದುರು ಅಹೋರಾತ್ರಿ ಪ್ರತಿಭಟನೆ ನಡೆಸಲು ಸಿದ್ಧವೆಂದು ಸ್ಪಷ್ಟಪಡಿಸಿದರು. ಹಕ್ಕು ಪತ್ರ ನೀಡುವ ಹಕ್ಕು ಗ್ರಾಮ ಪಂಚಾಯ್ತಿಗೆ ಇಲ್ಲ ಎನ್ನುವ ಮಾಹಿತಿ ಇದ್ದರು ಕೆಲವು ಹೋರಾಟಗಾರರು ವಿನಾಕಾರಣ ಗ್ರಾಮ ಪಂಚಾಯ್ತಿಯನ್ನು ದೂಷಿಸುವುದು ಸರಿಯಾದ ಕ್ರಮವಲ್ಲ. ದಿಡ್ಡಳ್ಳಿ ವಿಚಾರದಲ್ಲಿ ಮುಖ್ಯಮಂತ್ರಿಗಳೊಂದಿಗೆ ನೇರವಾಗಿ ಚರ್ಚಿಸಿದ ಈ ಮುಖಂಡರುಗಳು ತಮ್ಮ ಪ್ರಭಾವ ಬಳಸಿ ಮುಖ್ಯಮಂತ್ರಿಗಳಿಂದಲೆ ಹಕ್ಕು ಪತ್ರವನ್ನು ಪಡೆಯಲಿ ಎಂದು ಅಜಯ್ ಕುಮಾರ್ ತಿಳಿಸಿದರು.

ಇಲ್ಲಿ ನಡೆಯುತ್ತಿರುವ ಹೋರಾಟ ನಕ್ಸಲಿಸಂ ಎಂದು ಆರೋಪಿಸಿದ ಅವರು, ಬಡ ಕೂಲಿ ಕಾರ್ಮಿಕರಾಗಿದ್ದರೆ ಇವರಿಗೆಲ್ಲ ಆಭರಣಗಳು, ವಾಹನಗಳು ಎಲ್ಲಿಂದ ಬಂತೆಂದು ಪ್ರಶ್ನಿಸಿದರು. ವಿನಾಕಾರಣ ವಿವಾದ ಸೃಷ್ಟಿಸುವುದನ್ನು ಬಿಟ್ಟು ಎಲ್ಲರೊಂದಿಗೆ ಹೊಂದಿಕೊಂಡು ಹಕ್ಕು ಪತ್ರಕ್ಕಾಗಿ ಹೋರಾಟ ನಡೆಸಿ ಎಂದು ಒತ್ತಾಯಿಸಿದರು.

ಹೊದ್ದೂರು ಗ್ರಾಮ ಪಂಚಾಯ್ತಿ ಉಪಾಧ್ಯಕ್ಷರಿಗೆ ಮೂರ್ನಾಡು ಎಂ. ಬಾಡಗದಲ್ಲಿ ನಿವೇಶನ ಮತ್ತು ಮನೆ ಇದೆ. ಇಂತಹವರಿಗೆ ಪಾಲೆೇಮಾಡಿನಲ್ಲಿ ಜಾಗ ನೀಡದೆ, ನಿವೇಶನ ರಹಿತರಿಗೆ ಹಕ್ಕು ಪತ್ರ ನೀಡಲು ಕಂದಾಯ ಇಲಾಖೆ ಮುಂದಾಗಲಿ ಎಂದರು.

ಸುದ್ದಿಗೋಷ್ಠಿಯಲ್ಲಿ ನೆರವಂಡ ನಂಜಪ್ಪ ಹಾಗೂ ವಿಎಸ್ಎಸ್ಎನ್ ಅಧ್ಯಕ್ಷ ಸಂಜಯ್ ಉಪಸ್ಥಿತರಿದ್ದರು.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು